ವಿಜಯನಗರ: ಅಮಾಯಕ ಮುಸ್ಲಿಂ ಯುವಕರಿಗೆ ಜಾತೀಯತೆಯ ವಿಷ ಬಿತ್ತುವ ಮೂಲಕ ತಲೆ ತಿಕ್ಕೋ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ ಎಂದು ಸಚಿವ ಆನಂದ್ ಸಿಂಗ್ ಆರೋಪಿಸಿದರು. ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಯುವಕರ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಹುಬ್ಬಳ್ಳಿ ಗಲಭೆ, ಕಲ್ಲು ತೂರಾಟ ಪ್ರಕರಣ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಎನ್ಆರ್ಸಿ ಹೋರಾಟದ ವೇಳೆಯೂ ಹೀಗೆಯೇ ಆಗಿತ್ತು. ಯಾಕೆ ಹೋರಾಟ ಮಾಡ್ತೀರಾ ಎಂದು ಕೇಳಿದ್ರೆ, ಗೊತ್ತಿಲ್ಲ ಸರ್ ಕರೆದಿದ್ರು ಬಂದಿದ್ದೇವೆ ಎಂದಿದ್ರು. ಮುಸ್ಲಿಂ ಯುವಕರು ಎಲ್ಲರೂ ಸಂವಿಧಾನ ಗೌರವಿಸಿ ನಡೆದುಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು. ಪ್ರಧಾನಿ ಮೋದಿ ಅವರ ಅಭಿವೃದ್ಧಿ ರಾಜಕಾರಣಕ್ಕೆ ಪ್ರತಿಪಕ್ಷಗಳು ಹೆದರಿವೆ. ಯಾವ ಜಾತಿ ರಾಜಕಾರಣವೂ ನಡೆಯೋದಿಲ್ಲ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಇದನ್ನೂ ಓದಿ: ರಾಜ್ಯದ ಮೂರೂ ರಾಜಕೀಯ ಪಕ್ಷಗಳ 'ಕ್ಲೀನ್ ಇಮೇಜ್' ನಾಯಕರಿಗೆ ಆಮ್ ಆದ್ಮಿ ಗಾಳ?