ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಸದ್ಯ 32 ವಾರ್ಡ್ಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ ಒಂದನೇ ವಾರ್ಡ್ಗೆ ವೀರೇಂದ್ರಕುಮಾರ ಕೆ., 2ನೇ ವಾರ್ಡ್ಗೆ ಸಾವೇರಿಯಾ ಸಾಬಾ, 3ನೇ ವಾರ್ಡ್ಗೆ ಬಿ. ಬಸವನಗೌಡ, ನಾಲ್ಕನೇ ವಾರ್ಡ್ಗೆ ಡಿ. ತ್ರಿವೇಣಿ ಸೂರಿ, ಐದನೇ ವಾರ್ಡ್ಗೆ ಡಿ.ನಾರಾಯಣಪ್ಪ, ಆರನೇ ವಾರ್ಡ್ಗೆ ಎಂ.ಕೆ.ಪದ್ಮರೋಜ, ಏಳನೇ ವಾರ್ಡ್ಗೆ ಉಮಾದೇವಿ ಶಿವರಾಜ, ಎಂಟನೇ ವಾರ್ಡ್ಗೆ ಬಿ.ರಾಮಾಂಜನೇಯಲು, ಒಂಭತ್ತನೇ ವಾರ್ಡ್ಗೆ ಜಬ್ಬಾರ್ ಸಾಬ್, ಹತ್ತನೇ ವಾರ್ಡ್ಗೆ ವಿ.ಎಸ್.ಮರಿದೇವಯ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ.
ಹನ್ನೊಂದನೇ ವಾರ್ಡ್ಗೆ ಟಿ.ಲೋಕೇಶ, ಹನ್ನೆರಡನೇ ವಾರ್ಡ್ಗೆ ಕೆ. ಜ್ಯೋತಿ, ಹದಿಮೂರನೇ ವಾರ್ಡ್ಗೆ ಕೆ. ಮಾರುತಿ ವರಪ್ರಸಾದ್, ಹದಿನಾಲ್ಕನೇ ವಾರ್ಡ್ಗೆ ಬಿ. ರತ್ನಮ್ಮ, ಹದಿನೈದನೇ ವಾರ್ಡ್ಗೆ ಎಂ. ಫರಾನ್ ಅಹ್ಮದ್, ಹದಿನಾರನೇ ವಾರ್ಡ್ಗೆ ಕೌಶಲ್ಯ, ಹದಿನೇಳನೇ ವಾರ್ಡ್ಗೆ ಅರುಣ, ಬಿ.ಕೆ. ಹದಿನೆಂಟನೇ ವಾರ್ಡ್ಗೆ ನಂದೀಶ, ಹತ್ತೊಂಭತ್ತನೇ ವಾರ್ಡ್ಗೆ ಬಿ. ಮುರಳಿ, ಇಪ್ಪತ್ತನೇಯ ವಾರ್ಡ್ಗೆ ಪಿ. ವಿವೇಕ, ಇಪ್ಪತ್ತೊಂದನೇ ವಾರ್ಡ್ಗೆ ಲತಾ ಶೇಖರ, ಇಪ್ಪತ್ತೆರಡನೇ ವಾರ್ಡ್ಗೆ ಬಜ್ಜಪ್ಪ, ಇಪ್ಪತ್ತ್ಮೂರನೇ ವಾರ್ಡ್ಗೆ ಪಿ.ಗಾದೆಪ್ಪ, ಇಪ್ಪತ್ನಾಲ್ಕನೇ ವಾರ್ಡ್ಗೆ ನರ ವಿಜಯಕುಮಾರ ರೆಡ್ಡಿ, ಇಪ್ಪತ್ತೈದನೇ ವಾರ್ಡ್ಗೆ ಜಿ.ಜೆ. ರವಿಕುಮಾರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇಪ್ಪತ್ತೆಂಟನೇ ವಾರ್ಡ್ಗೆ ಬಿ.ಮುಬೀನಾ, ಇಪ್ಪತ್ತೊಂಭತ್ತನೇ ವಾರ್ಡ್ಗೆ ಶಿಲ್ಪಾ, ಮೂವತ್ತನೇ ವಾರ್ಡ್ಗೆ ಎಸ್. ನಾಗರಾಜ, ಮೂವತ್ತೆರಡನೇ ವಾರ್ಡ್ಗೆ ಬಿ. ಜಾನಕಿ, ಮೂವತ್ತಾರನೇ ವಾರ್ಡ್ಗೆ ಟಿ. ಸಂಜೀವಮ್ಮ, ಮೂವತ್ತೇಳನೇ ವಾರ್ಡ್ಗೆ ಮಾಲನ್ ಬಿ., ಮೂವತ್ತೊಂಭತ್ತನೇ ವಾರ್ಡ್ಗೆ ಶಶಿಕಲಾ. ಉಳಿದ ಏಳು ವಾರ್ಡುಗಳಾದ 26, 27, 31, 32, 34, 35 ಹಾಗೂ 38ಕ್ಕೆ ಇನ್ನೂ ಅಭ್ಯರ್ಥಿಗಳನ್ನ ಅಂತಿಮಗೊಳಿಸಿಲ್ಲ.
ಓದಿ: ನರಳಿ ನರಳಿ ಪ್ರಾಣ ಬಿಟ್ಟ ಕೋವಿಡ್ ಸೋಂಕಿತ... ಆತಂಕದಿಂದ ಹೃದಯಾಘಾತವಾಗಿ ಕಾನ್ಸ್ಟೇಬಲ್ ಸಾವು!