ಬಳ್ಳಾರಿ: ತಾಲೂಕಿನ ಬೇವಿನಹಳ್ಳಿ ಗ್ರಾಮದ ಒಂದೇ ಮನೆಯಲ್ಲಿ ಮಹಾಮಾರಿ ಕೋವಿಡ್ಗೆ ತಾಯಿ, ಮಗ ಬಲಿಯಾಗಿದ್ದಾರೆ.
ಬೇವಿನ ಹಳ್ಳಿ ಗ್ರಾಮದ ಕಡೇಮನೆ ಪಾರ್ವತಮ್ಮ (45) ಕಳೆದ ಬುಧವಾರ ಕೋವಿಡ್ಗೆ ಬಲಿಯಾಗಿದ್ದರು. ಇಂದು ಆಕೆಯ ಮಗ ಯುವರಾಜಗೌಡ ಕಡೇಮನೆ (30) ಕೋವಿಡ್ನಿಂದ ಸಾವನ್ನಪ್ಪಿದ್ದು, ಕಳೆದೊಂದು ವಾರದಿಂದ ಆ ಮನೆಯಲ್ಲಿ ಸೂತಕದ ಕರಿಛಾಯೆ ಆವರಿಸಿದೆ. ಮೃತ ಪಾರ್ವತಮ್ಮ ಅವರಿಗೆ ಮೊದಲ ಟೆಸ್ಟ್ನಲ್ಲಿ ಕೋವಿಡ್ ನೆಗೆಟಿವ್ ವರದಿಯಿತ್ತು. ಆರ್ಟಿಪಿಸಿಆರ್ ಟೆಸ್ಟ್ನ ವರದಿ ಬರಬೇಕಿತ್ತು. ಆ ವರದಿ ಬರೋದಕ್ಕೆ ಮುಂಚಿತವಾಗಿಯೇ ಅವರು ಸಾವನ್ನಪ್ಪಿದ್ದಾರೆ.
ಇನ್ನು ಮೃತ ಪಾರ್ವತಮ್ಮ ಅವರ ಮಗ ಯುವರಾಜಗೌಡ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಬಳ್ಳಾರಿಯ ಹಳೆ ಡೆಂಟಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.