ETV Bharat / state

ಗಣಿನಾಡಿನಲ್ಲಿ ಮೇಳೈಸಿದ ಮೊಹರಂ ಹಬ್ಬದ ಸಂಭ್ರಮ - Moharam

ಬಳ್ಳಾರಿ ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಸಂಭ್ರಮವು ಮೇಳೈಸಿತ್ತು. ಮುಲ್ಲಾಗಳಿಗೆ ಬೆಲ್ಲ, ಸಕ್ಕರೆಯ ತುಲಾಭಾರ ಮಾಡುವ ಮೂಲಕ ಪ್ರೀತಿ, ಅಕ್ಕರೆಗೆ ಪಾತ್ರರಾಗಿದ್ದಾರೆ ಗ್ರಾಮಸ್ಥರು.

ಮೊಹರಂ ಹಬ್ಬದ ಸಂಭ್ರಮ
author img

By

Published : Sep 11, 2019, 9:58 AM IST

ಬಳ್ಳಾರಿ: ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಂ ಧರ್ಮಿಯರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಸಂಭ್ರಮವು ಕಳೆಗಟ್ಟಿತ್ತು. ತಾಲೂಕಿನ ಗಡಿಯಂಚಿನಲ್ಲಿರುವ ಜಾಲಿಹಾಳು ಗ್ರಾಮದಲ್ಲಿ ಬೆಲ್ಲ, ಸಕ್ಕರೆಯನ್ನು ಮುಸ್ಲಿಂ ಧರ್ಮದ ಮುಲ್ಲಾರಿಗೆ ಕ್ವಿಂಟಾಲ್​ಗಟ್ಟಲೇ ಸಮರ್ಪಿಸಿ ಹಿಂದೂಗಳು ಭಕ್ತಿ ಮೆರೆದಿದ್ದಾರೆ.

ಗಣಿನಾಡಿನಲ್ಲಿ ಮೇಳೈಸಿದ ಮೊಹರಂ ಹಬ್ಬದ ಸಂಭ್ರಮ

ಆಯಾ ಗ್ರಾಮಗಳ ಮಸೀದಿಗಳ ಎದುರು ದೊಡ್ಡದಾದ ಅಲಾಯಿ ಕುಣಿಯನ್ನು ತೋಡಿ ಗೋಪುರಾಕಾರದ ಕಟ್ಟಿಗೆಯನ್ನು ಜೋಡಿಸಿ ಬೆಂಕಿಯನ್ನು ಹೊತ್ತಿಸಲಾಗಿತ್ತು. ಅದು ಸುಟ್ಟು ಕೆಂಡವಾದ ಮೇಲೆ ಭಕ್ತರು ಆ ಅಗ್ನಿಯನ್ನು ತುಳಿಯೋದು ಇಲ್ಲಿನ‌ ಭಕ್ತರ ಪದ್ಧತಿಯಾಗಿದೆ. ಅದರಂತೆಯೇ ಬೆಳಗಿನಜಾವ ಮೂರು ಗಂಟೆ ಸುಮಾರಿಗೆ ಪೀರಲ ದೇವರು ಮೇಲೆದ್ದು, ಮನೆ ಮನೆಗೆ ತೆರಳುವ ಈ ದೇವರುಗಳಿಗೆ ಪಾದಪೂಜೆ ಹಾಗೂ ಬೆಲ್ಲ, ಸಕ್ಕರೆ ಮತ್ತು ತೆಂಗಿನಕಾಯಿ ಸಮರ್ಪಿಸಿ ಭಕ್ತಿಯನ್ನು ಮೆರೆಯುತ್ತಾರೆ.

ಈ ಹನ್ನೆರಡು ಅಡಿ ಎತ್ತರದ ಪೀರಲ ದೇವರು ವಿಶೇಷ ಗಮನ ಸೆಳೆದವು. ಅಂದಾಜು 6 ಪ್ರಮುಖ ಪೀರಲ ದೇವರುಗಳು ಹನ್ನೆರಡು ಅಡಿಯಷ್ಟು ದೊಡ್ಡದಾಗಿವೆ. ಉಳಿದ ನಾಲ್ಕು ಸಣ್ಣದಾದ ಪೀರಲ ದೇವರು ಸೇರಿದಂತೆ ಒಟ್ಟಾರೆಯಾಗಿ ಹತ್ತು ಪೀರಲ ದೇವರುಗಳನ್ನು ಈ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ದೆವ್ವ, ಭೂತ ಬಿಡಿಸುವ ಹಬ್ಬ: ಬುಧವಾರ ಮಧ್ಯಾಹ್ನದ ಹೊತ್ತಿಗೆ ಪೀರಲ ದೇವರು ದಪ್ಪಗಾದ ಮೇಲೆ ಸಂಜೆಯೊತ್ತಿಗೆ ದೆವ್ವ, ಭೂತ ಹಾಗೂ ಗಾಳಿ ಬಿಡಿಸುವ ಹಬ್ಬವನ್ನು ಆಚರಿಸೋದು ಜಾಲಿಹಾಳು ಗ್ರಾಮದಲ್ಲಿ ವಾಡಿಕೆಯಾಗಿದೆಯೆಂದು ಮುಖಂಡ ದಿವಾಕರಗೌಡ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಬೆಲ್ಲ, ಸಕ್ಕರೆಯ ತುಲಾಭಾರ: ಪ್ರತಿವರ್ಷದಂತೆ ಈ ವರ್ಷವೂ ಹೊನ್ನೂರುಸ್ವಾಮಿ ದರ್ಗಾದ ಮುಲ್ಲಾಗಳಿಗೆ ತಮ್ಮ ಮನೆಯಲ್ಲಿನ ಸುಖ-ದುಃಖ ನಿವಾರಣೆಗೋಸ್ಕರ ಕ್ವಿಂಟಾಲ್​ಗಟ್ಟಲೇ ಬೆಲ್ಲ, ಸಕ್ಕರೆಯ ತುಲಾಭಾರ ಮಾಡಲಾಗುತ್ತದೆ.‌ ಈ ಮೂಲಕ ಅನ್ಯಧರ್ಮಿಯರ ಪ್ರೀತಿ, ಅಕ್ಕರೆಗೆ ಗ್ರಾಮಸ್ಥರು ಪಾತ್ರರಾಗುತ್ತಾರೆ.

Intro:ಗಣಿನಾಡಿನಲಿ ಮೇಳೈಸಿದ ಮೊಹರಂ ಹಬ್ಬದ ಸಂಭ್ರಮ
ಜಾಲಿಹಾಳು ಗ್ರಾಮದಲಿ ಬೆಲ್ಲ, ಸಕ್ಕರೆಯಿಂದ ತುಲಾಭಾರ..!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಮೊಹರಂ ಹಬ್ಬದ ಸಂಭ್ರಮವು ಮೇಳೈಸಿದೆ. ತಾಲೂಕಿನ ಗಡಿಯಂಚಿನಲ್ಲಿರುವ ಜಾಲಿಹಾಳು ಗ್ರಾಮದಲ್ಲಿಂದು ಬೆಲ್ಲ, ಸಕ್ಕರೆಯಿಂದ ಮುಸ್ಲಿಂ ಧರ್ಮೀಯರ ಮುಲ್ಲಾರಿಗೆ ಕ್ವಿಂಟಾಲ್ ಗಟ್ಟಲೇ ಸಮರ್ಪಿಸಿ
ಭಕ್ತಿ ಮೆರೆದಿರೋದು ವಿಶೇಷವೇ ಸರಿ.
ಹಿಂದೂ- ಮುಸ್ಲಿಂ ಧರ್ಮೀಯರ ಭಾವೈಕ್ಯತಾ ಸಂಕೇತವಾಗಿ ರುವ ಈ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಆಯಾ ಗ್ರಾಮಗಳ ಮಸೀದಿಗಳ ಎದುರು ದೊಡ್ಡದಾದ ಅಲಾಯಿ ಕುಣಿಯನ್ನು ತೋಡಲಾಯಿತು. ಗೋಪುರ ಆಕರದ ಕಟ್ಟಿಗೆಯನ್ನು ಜೋಡಿಸಿ ಬೆಂಕಿಯನ್ನು ಹೊತ್ತಿಸಲಾಯಿತು. ಅದು ಸುಟ್ಟು ಕರಕಲಾಗಿ ಕೆಂಡದಂತಹ ಬೆಂಕಿಯನ್ನು ಭಕ್ತರು ಹಾಗೂ ಪೀರಲ ದೇವರ ಸವಾರಿ ಮಾಡೋರು ತುಳಿಯೋದು ಇಲ್ಲಿನ‌ ಭಕ್ತರ ವಾಡಿಕೆಯಾಗಿದೆ. ಅದರಂತೆಯೇ ಬೆಳಗಿನಜಾವ ಮೂರು ಗಂಟೆ ಸುಮಾರಿಗೆ ಪೀರಲ ದೇವರು ಮೇಲೆದ್ದು, ಮನೆ ಮನೆಗೆ ತೆರಳುವ ಈ ದೇವರುಗಳಿಗೆ ತುಂಬಿದಕೊಡದ ನೀರಿ ನಿಂದ ಪಾದಪೂಜೆ ಹಾಗೂ ಬೆಲ್ಲದ ಸಕ್ಕರೆ ಮತ್ತು ತೆಂಗಿನಕಾಯಿ ಸಮರ್ಪಿಸಿ ಭಕ್ತಿ ಮೆರೆಯಲಿದ್ದಾರೆ.

Body:ದೆವ್ವ, ಭೂತ ಬಿಡಿಸುವ ಹಬ್ಬ: ಬುಧವಾರ ಮಧ್ಯಾಹ್ನದ ಹೊತ್ತಿಗೆ ಪೀರಲ ದೇವರು ದಪ್ಪಗಾದ ಮೇಲೆ ಸಂಜೆಯೊತ್ತಿಗೆ ದೆವ್ವ, ಭೂತ ಹಾಗೂ ಗಾಳಿ ಬಿಡಿಸುವ ಹಬ್ಬವನ್ನು ಆಚರಿ ಸೋದು ಜಾಲಿಹಾಳು ಗ್ರಾಮದಲ್ಲಿ ವಾಡಿಕೆಯಾಗಿದೆ ಎಂದು ಮುಖಂಡ ದಿವಾಕರಗೌಡ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಬುಧವಾರದಂದು ಇಂತಹ ಅವಘಡಕ್ಕೆ ಸಿಲುಕಿ ನರಳಾಟ ನಡೆಸುತ್ತಿರೋ ಪ್ರತಿಯೊಬ್ಬರು ಇಲ್ಲಿಗೆ ತಮಗಾದ ಸಮಸ್ಯೆ ಯನ್ನು ನಿವಾರಿಸಿಕೊಳ್ಳುತ್ತಾರೆ ಎಂಬುವರು ದಿವಾಕರಗೌಡ.
ಬೆಲ್ಲ, ಸಕ್ಕರೆಯ ತುಲಾಭಾರ: ಪ್ರತಿವರ್ಷದಂತೆ ಈ ವರ್ಷವೂ ವನ್ನೂರ ಸ್ವಾಮಿ ದರ್ಗಾದ ಮುಲ್ಲಾಗಳಿಗೆ ತಮ್ಮ ಮನೆಯಲ್ಲಿನ ಸುಖ- ದುಃಖ ನಿವಾರಣೆಗೋಸ್ಕರ ಕ್ವಿಂಟಾಲ್ ಗಟ್ಟಲೇ ಬೆಲ್ಲ, ಸಕ್ಕರೆಯ ತುಲಾಭಾರ ಮಾಡಲಾಗುತ್ತದೆ.‌ ದೊಡ್ಡದಾದ ತಕ್ಕಡಿ ಯಿಂದ ಈ ತುಲಾಭಾರ ನಡೆಸುತ್ತಿರೋದು ನೋಡುಗರ ವಿಶೇಷ ಗಮನ‌ ಸೆಳೆಯಲಿದೆ. ನಾವೆಲ್ಲ ಕಾವಿಧಾರಿ ಸ್ವಾಮೀಜಿ ಅವರಿಗೆ ನಾಣ್ಯದ ತುಲಾಭಾರ ಕಾರ್ಯಕ್ರಮ ಮಾಡೋದನ್ನ ನೋಡೀವಿ. ಆದರೆ, ಜಾಲಿಹಾಳು ಗ್ರಾಮದಲ್ಲಿ ಅದಕ್ಕೆ ತದ್ವಿರು ದ್ಧವಾಗಿ ಮುಲ್ಲಾಗಳಿಗೆ ಬೆಲ್ಲ, ಸಕ್ಕರೆಯ ತುಲಾಭಾರ ಮಾಡೋ ಮುಖೇನ ಅನ್ಯಧರ್ಮೀಯರ ಪ್ರೀತಿ, ಅಕ್ಕರೆಗೆ ಗ್ರಾಮಸ್ಥರು ಪಾತ್ರರಾಗಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

ಬೈಟ್ : ದಿವಾಕರಗೌಡ, ಮುಖಂಡರು, ಜಾಲಿಹಾಳು.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_4_MOHARAM_FESTIVAL_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.