ಬಳ್ಳಾರಿ: ಸಹೋದರ ಜನಾರ್ದನ ರೆಡ್ಡಿ ಬಳಿ ರಾಜಕೀಯವಾಗಿ ಮಾತನಾಡಿಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯ್ತು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಜೊತೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಲಾಗಿದೆ. ಕೆಎಂಆರ್ಸಿ ಹಣ ಬಿಡುಗಡೆ ವಿಚಾರವಾಗಿ ತಿಳಿಸಲಾಗಿದೆ. ಅಲ್ಲದೇ, ಮುರಗೇಶ ನಿರಾಣಿ ಅವರು ಈ ಕುರಿತು ಫಾಲೋ ಅಪ್ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಶ್ರೀರಾಮುಲುಗೆ ಬಳ್ಳಾರಿ ಜಿಲ್ಲೆ ಉಸ್ತುವಾರಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಶ್ರೀರಾಮುಲು ಇದೇ ಜಿಲ್ಲೆಯವರು. ಅವರಿಗೆ ಉಸ್ತುವಾರಿ ನೀಡಲು ಬಹಳ ದಿನದಿಂದ ಕೇಳಲಾಗುತ್ತಿದೆ. ಶ್ರೀರಾಮುಲು ಅವರು ಕಾರ್ಪೋರೇಟರ್ ಆಗಿ, ಶಾಸಕರಾಗಿ, ಮಂತ್ರಿಯಾಗಿ ಇದೇ ಜಿಲ್ಲೆಯಿಂದ ಲೀಡರ್ ಆಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ದ.ಕ ಪೊಲೀಸ್ ಕಮಿಷನರ್ ಮುಂದೆ ಆಫ್ಘನ್ ವಿದ್ಯಾರ್ಥಿಗಳ ಅಳಲು: ಪರಿಹಾರದ ಭರವಸೆ
ದುರ್ದೈವ ಎಂದರೆ ಜಿಲ್ಲೆಯನ್ನು ವಿಭಜಿಸಿದವರಿಗೆ ಉಸ್ತುವಾರಿ ನೀಡಿದ್ದಾರೆ. ಜಿಲ್ಲೆಯವರಿಗೆ ನೀಡ್ತಿಲ್ಲ ಅಂತ ಜನ ಕೇಳುತ್ತಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸಿಎಂ ಅವರನ್ನು ಭೇಟಿ ಮಾಡಲಾಗುವುದು ಎಂದರು. ಆನಂದ್ ಸಿಂಗ್ ಅವರ ಮೇಲೆ ಯಾವುದೇ ಅಸಮಾಧಾನ ಇಲ್ಲ. ಆದರೆ, ಜಿಲ್ಲೆಯನ್ನು ವಿಭಜನೆ ಮಾಡಿದ್ದು ನೋವು ತಂದಿದೆ ಎಂದರು.