ETV Bharat / state

ಅನಿಲ್‌ 'ಲಾಡು' ಬೇಡ್ವೆಂದರಾ ಬಿಜೆಪಿ ಶಾಸಕ ಜಿ. ಸೋಮಶೇಖರ್‌ ರೆಡ್ಡಿ..

ವಿಪರೀತ ಮಳೆಯಿಂದಾಗಿ ಜಲಾವೃತವಾಗಿದ್ದ ಬಳ್ಳಾರಿಯ ಹನುಮಾನ್ ನಗರದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗಾಲಿ ಸೋಮಶೇಖರ ರೆಡ್ಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಅನಿಲ್‌ ಲಾಡ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರಶ್ನಿಸಿದಾಗ, ಆ ಬಗ್ಗೆ ತನಗೇನು ತಿಳಿದಿಲ್ಲ ಎಂದರು. ಜೊತೆಗೆ ರಾಜಕೀಯ ಸಂಬಂಧಿತ ವಿಚಾರಗಳನ್ನು ಮಾತನಾಡಲು ನಿರಾಕರಿಸಿದರು.

ಲಾಡ್​ ಬಿಜೆಪಿ ಸೇರ್ಪಡೆ: ಪ್ರತಿಕ್ರಿಯೆ ನೀಡಲಿಚ್ಛಿಸದ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ
author img

By

Published : Sep 28, 2019, 2:05 PM IST

ಬಳ್ಳಾರಿ: ಕಾಂಗ್ರೆಸ್ ಮಾಜಿ ಶಾಸಕ ಹೆಚ್. ಅನಿಲ್ ಲಾಡ್ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿರುವ ಬಗ್ಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಲು ನಿರಾಕರಿಸಿದ್ರು.

ಕಳೆದೊಂದು ವಾರದಿಂದ ಸುರಿದ ವಿಪರೀತ ಮಳೆಯಿಂದಾಗಿ ಜಲಾವೃತವಾಗಿದ್ದ ಬಳ್ಳಾರಿಯ ಹನುಮಾನ್ ನಗರದ ತಗ್ಗು-ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಗಾಲಿ ಸೋಮಶೇಖರ್‌ ರೆಡ್ಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರೆ, ಈ ವೇಳೆ ಮಾಜಿ ಶಾಸಕ ಲಾಡ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರಶ್ನಿಸಿದಾಗ, ಆ ಬಗ್ಗೆ ತನಗೇನು ತಿಳಿದಿಲ್ಲ ಎಂದರು. ಜೊತೆಗೆ ರಾಜಕೀಯ ಸಂಬಂಧಿತ ವಿಚಾರಗಳನ್ನು ಮಾತನಾಡಲು ನಿರಾಕರಿಸಿದರು.

ಅಖಂಡ ಜಿಲ್ಲೆಗೆ ನನ್ನ ಸಹಮತವಿದೆ: ಅನರ್ಹ ಶಾಸಕ ಆನಂದಸಿಂಗ್ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಕೂಗನ್ನು ಎಬ್ಬಿಸಿರೋದಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಆನಂದಸಿಂಗ್ ಅವರೊಬ್ಬರ ರಾಜೀನಾಮೆಯಿಂದಾಗಿ ಈ ರೀತಿಯ ನಿರ್ಧಾರ ತಳೆಯಬಾರದೆಂದು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ. ಆದರೀಗ ಮತ್ತೆ ಈ ವಿಚಾರ ಮುನ್ನಲೆಗೆ ಬಂದಿರೋದು ತರವಲ್ಲ ಎಂದಿದ್ದಾರೆ.

ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ..

ಪ್ರತ್ಯೇಕ ಜಿಲ್ಲೆಯ ರಚನೆ ವಿಚಾರ ಕುರಿತು ಚರ್ಚಿಸಲು ಕೂಡಲೇ ಸಿಎಂ ಶಾಸಕರ ಸಭೆ ಕರಿಬೇಕು. ಹಾಗೂ ಜಿಲ್ಲೆಯಿಂದ ನಾಲ್ವರು ಶಾಸಕರಾದ ಗೋಪಾಲಕೃಷ್ಣ, ಸೋಮಲಿಂಗಪ್ಪ, ಕರುಣಾಕರರೆಡ್ಡಿ ಹಾಗೂ ನಾನು ಬಿಜೆಪಿಯಿಂದ ಗೆಲುವು ಸಾಧಿಸಿದ್ದೇವೆ. ನಮ್ಮ ನಾಲ್ವರು ಶಾಸಕರ ಅಭಿಪ್ರಾಯವನ್ನು ಮೊದಲು ಪರಿಗಣಿಸಬೇಕು ಎಂದರು. ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಸೋದೇ ನಮ್ಮ ಮೊದಲ ಗುರಿ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರು ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಆ ಮೇಲೆ ಜಿಲ್ಲೆಯ ಇಬ್ಭಾಗದ ಕುರಿತು ಸೂಕ್ತ ನಿರ್ಧಾರವನ್ನು ಪ್ರಕಟಿಸಬೇಕು ಎಂದರು.

ಈಗಾಗಲೇ ರಾಜ್ಯ ಸರ್ಕಾರ ಕೊಪ್ಪಳ, ಯಾದಗಿರಿಯನ್ನು ಜಿಲ್ಲೆಗಳನ್ನಾಗಿ ಘೋಷಿಸಿದೆ. ಹಾಗಂತ ಕೇವಲ ಡಿಸಿ ಕಚೇರಿ ಸೇರಿ ಇನ್ನಿತರೆ ಕಚೇರಿಗಳು ಕಾರ್ಯನಿರ್ವಹಿಸದರೆ ಸಾಲದು. ಅಭಿವೃದ್ಧಿ ದೃಷ್ಠಿಕೋನದಲ್ಲಿ ನೋಡೋದಾದ್ರೆ ಪ್ರತ್ಯೇಕ ಜಿಲ್ಲೆಗಳಾದ ಮೇಲೆ ಆ ಜಿಲ್ಲೆಗಳಲ್ಲಿ ಶೂನ್ಯ ಸಾಧನೆಯಾಗಿದೆ ಎಂದಿದ್ದಾರೆ ಶಾಸಕ ರೆಡ್ಡಿ.

ಹಂಪಿ ಉತ್ಸವ ಮಾಡಲೇ ಬೇಕು: ಈ ಬಾರಿಯ ನವೆಂಬರ್ ತಿಂಗಳಲ್ಲಿ ಹಂಪಿ ಉತ್ಸವವನ್ನು ಮಾಡಲೇಬೇಕು.‌ ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರ ಗಮನಕ್ಕೂ ತರುವೆ. ಹಾಗೊಂದು ವೇಳೆ ಹಂಪಿ ಉತ್ಸವ ಆಚರಣೆಗೆ ಹಿಂದೇಟು ಹಾಕಿದ್ರೆ, ಕಳೆದ ಬಾರಿ ಏನೇನು ಹೋರಾಟ ಕೈಗೊಂಡಿದ್ದೆವೋ.. ಅದೇ ಮಾದರಿ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

Intro:ಮಾಜಿ ಶಾಸಕ ಲಾಡ್ ಬಿಜೆಪಿ ಸೇರ್ಪಡೆ ಹಿನ್ನಲೆ
ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಪ್ರತಿಕ್ರಿಯೆಗೆ ನಕಾರ!
ಬಳ್ಳಾರಿ: ಕಾಂಗ್ರೆಸ್ಸಿನ ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅವರ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿರುವ ಬಗ್ಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಪ್ರತಿಕ್ರಿಯಿ ಸಲು ನಿರಾಕರಿಸಿದ್ದಾರೆ.
ಕಳೆದೊಂದು ವಾರದಿಂದ ವಿಪರೀತ ಸುರಿದ ಮಳೆಯಿಂದಾಗಿ ಬಳ್ಳಾರಿಯ ಹನುಮಾನ್ ನಗರದಲ್ಲಿಂದು ತಗ್ಗು - ಪ್ರದೇಶಗಳಿಗೆ ಮಳೆ ಜಲಾವೃತಗೊಂಡಿರುವುದನ್ನು ವೀಕ್ಷಣೆ ಮಾಡಿ ಗಾಲಿ ರೆಡ್ಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರಾಜಕಾರಣ ಮಾತೋಡಲ್ಲ. ನನಗೆ ಅದರ ಬಗ್ಗೆ ಗೊತ್ತಿಯೇ ಇಲ್ಲವೆಂದು ಪರೋಕ್ಷವಾಗಿ ಅನಿಲ್ ಲಾಡ್ ಹೆಸರು ಹೇಳದೆಯೇ ಪ್ರತಿಕ್ರಿಸಿ ದ್ದಾರೆ.
ಅಖಂಡ ಜಿಲ್ಲೆಗೆ ನನ್ನ ಸಹಮತವಿದೆ: ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಕೂಗನ್ನು ಅನರ್ಹ ಶಾಸಕ ಆನಂದಸಿಂಗ್ ಅವರು ಎಬ್ಬಿಸಿರೋದಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಆನಂದಸಿಂಗ್ ಅವರೊಬ್ಬರ ರಾಜೀ ನಾಮೆಯಿಂದಾಗಿ ಈ ರೀತಿಯ ನಿರ್ಧಾರ ತಳೆಯಬಾರದೆಂದು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ. ಆದರೀಗ ಮತ್ತೆ ಮುನ್ನಲೆಗೆ ಬಂದಿರೋದು ತರವಲ್ಲ ಎಂದಿದ್ದಾರೆ ಅವರು.
ಹೀಗಾಗಿ, ಪ್ರತ್ಯೇಕ ಜಿಲ್ಲೆಯ ರಚನೆ ವಿಚಾರ ಕುರಿತ ಚರ್ಚಿಸಲು ಎಲ್ಲ ಶಾಸಕರ ಸಭೆಯನ್ನು ಸಿಎಂ ಯಡಿಯೂರಪ್ಪನವ್ರು ಕೂಡಲೇ ಕರಿಬೇಕು. ಹಾಗೂ ಜಿಲ್ಲೆಯಿಂದ ನಾಲ್ವರು ಶಾಸಕರು ಬಿಜೆಪಿಯಿಂದ ಗೆಲುವು ಸಾಧಿಸಿದ್ದೇವೆ. ಶಾಸಕರಾದ ಗೋಪಾಲ ಕೃಷ್ಣ, ಸೋಮಲಿಂಗಪ್ಪ, ಕರುಣಾಕರರೆಡ್ಡಿ ಹಾಗೂ ನಾನೂ ಕೂಡ ಗೆದ್ದಿರುವೆ. ಈ ನಾಲ್ವರು ಶಾಸಕರ ಅಭಿಪ್ರಾಯವನ್ನು ಮೊದ್ಲು ಸಂಗ್ರಹಿಸಬೇಕೆಂದರು. ಅಖಂಡ ಬಳ್ಳಾರಿ ಜಿಲ್ಲೆಯ ನ್ನಾಗಿಸೋದೇ ನಮ್ಮ ಮೊದಲ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವ್ರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಆ ಮೇಲೆ ಜಿಲ್ಲೆಯ ಇಬ್ಭಾಗದ ಕುರಿತು ಸೂಕ್ತ ನಿರ್ಧಾರವನ್ನು ಪ್ರಕಟಿಸಬೇಕೆಂದರು.
ಈಗಾಗಲೇ ರಾಜ್ಯ ಸರ್ಕಾರ ಕೊಪ್ಪಳ, ಯಾದಗಿರಿ ಜಿಲ್ಲೆಗಳನ್ನಾಗಿ ಘೋಷಿಸಿಯಾದ್ರೂ ಕೇವಲ ಡಿಸಿ ಕಚೇರಿ ಸೇರಿದಂತೆ ಇನ್ನಿತರೆ ಕಚೇರಿಗಳು ಕಾರ್ಯನಿರ್ವಹಿಸದ್ರೆ ಸಾಲದು. ಅಭಿವೃದ್ಧಿ ದೃಷ್ಠಿಕೋನದಲ್ಲಿ ನೋಡೋದಾದ್ರೆ
ಶೂನ್ಯ ಸಾಧನೆಯಾಗಿದೆ ಎಂದಿದ್ದಾರೆ ಶಾಸಕ ರೆಡ್ಡಿ.
ಹಂಪಿ ಉತ್ಸವ ಮಾಡಲೇಬೇಕು: ಈ ಬಾರಿಯ ನವೆಂಬರ್ ತಿಂಗಳಲ್ಲಿ ಹಂಪಿ ಉತ್ಸವವನ್ನು ಮಾಡಲೇಬೇಕು.‌ ನಮ್ಮ ಸರ್ಕಾರ ಮಾಡಿಯೇ ತೀರುತ್ತದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವ್ರ ಗಮನಕ್ಕೂ
ತರುವೆ. ಹಾಗೊಂದು ವೇಳೆ ಹಂಪಿ ಉತ್ಸವ ಆಚರಣೆಗೆ ಹಿಂದೇಟು ಹಾಕಿದ್ರೆ, ಕಳೆದ ಬಾರಿ ಏನೇನು ಹೋರಾಟ ಕೈಗೊಂಡಿದ್ದೇವು. ಅದೇ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

Body:ಅನಧಿಕೃತ ಲೇಔಟ್ ಗೆ ಒಳಚರಂಡಿ, ರಸ್ತೆಗಳ ಸೌಲಭ್ಯ ಕಲ್ಪಿಸಲು ಆಗಲ್ವಂತೆ: ಕಳೆದೊಂದು ವಾರದಿಂದ ಸುರಿದ ವಿಪರೀತ‌ ಮಳೆಯಿಂದಾಗಿ ಹನುಮಾನ ನಗರವೇ ಅನಧಿಕೃತ ಲೇಔಟ್ ಅಂತೆ. ಆಗಾಗಿ, ನಿಮ್ಮ ನಗರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಆಗಲ್ವಂತೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮ ಶೇಖರರೆಡ್ಡಿ ಅವರ ಎದುರೇ ಪಾಲಿಕೆ ಆಯುಕ್ತೆ ತುಷಾರಮಣಿ ಖಡಾಖಂಡಿತವಾಗಿ ಹೇಳಿದ್ದಾರೆ.
ಮುಲಾಜಿಲ್ಲದೇ ಒಳ ಹಾಕ್ಸಿತೀವಿ: ಖಾಲಿ ನಿವೇಶನಗಳಲ್ಲಿ ಸಂಗ್ರಹಣೆಗೊಂಡ ಮಳೆ ನೀರಿನ ಶುಚಿತ್ವಗೊಳಿಸದ ಹಾಗೂ ಒಳಚರಂಡಿ ನೀರು ಸರಾಗವಾಗಿ ಹರಿಯುತ್ತಿರೋದನ್ನು ಬ್ಲ್ಯಾಕ್ ಮಾಡಿದ ವರ ಕ್ರಿಮಿನಲ್ ಮೊಕದ್ದಮೆ ಹೂಡಿ ಮುಲಾಜಿಲ್ಲದೇ ಒಳಗ ಹಾಕ್ಸಿತ್ತೀವಿ ಎಂದು ಶಾಸಕ ಸೋಮಶೇಖರರೆಡ್ಡಿ ಅವರು
ಎಚ್ಚರಿಕೆ ನೀಡಿದ್ದಾರೆ.
ಹನುಮಾನ್ ನಗರದ ನಿವಾಸಿ ರಾಣಿ ಮಾತನಾಡಿ, ಖಾಲಿ ನಿವೇಶನಗಳಲ್ಲಿ ಜಲಾವೃತಗೊಂಡ ಮಳೆಯ ನೀರಿನಿಂದ ಒಳಚರಂಡಿ ನೀರು ಬ್ಲ್ಯಾಕ್ ಆಗಿ ಕುಡಿಯೋ ನೀರಿನೊಳಗೆ ಮಿಶ್ರಿಣಗೊಂಡ ಚರಂಡಿ ನೀರು ಮಿಶ್ರಿತ ನೀರು ಪೂರೈಕೆ ಯಾಗುತ್ತದೆ. ಕೂಡಲೇ ಖಾಲಿ ನಿವೇಶನ ಹೊಂದಿರುವ ಮಾಲೀಕರಿಗೆ ನೋಟಿಸ್ ನೀಡಿ ಶುಚಿತ್ವಗೊಳಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.

KN_BLY_1_BALLARI_MLA_SOMASHEKAR_REDY_ROUND_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.