ಬಳ್ಳಾರಿ: ನಾಲ್ಕನೇಯ ಹಂತದ ಲಾಕ್ ಡೌನ್ ಜಾರಿಯಾದ ಹಿನ್ನಲೆ ಗಣಿನಾಡು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಒಂಭತ್ತು ವಾರ್ಡ್ಗಳಲ್ಲಿ ಶಾಸಕ ಬಿ. ನಾಗೇಂದ್ರ ಅವರು, ಆಹಾರ ಕಿಟ್ ವಿತರಿಸುತ್ತಿದ್ದಾರೆ. ವಿಶೇಷ ಅಂದ್ರೆ ತಲಾ ಒಂದೊಂದು ಕಿಟ್ ನಲ್ಲಿ ಒಂಭತ್ತು ಕೋಳಿ ಮೊಟ್ಟೆಗಳನ್ನ ವಿತರಿಸುತ್ತಿದ್ದಾರೆ.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂಭತ್ತು ವಾರ್ಡುಗಳಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಕಿಟ್ ಗಳಲ್ಲಿ ಮೊಟ್ಟೆ ಕೂಡ ಬಡ ಮತ್ತು ಕೂಲಿ ಕಾರ್ಮಿಕರ ಮನೆಗಳಿಗೆ ಸೇರುತ್ತಿವೆ. ಅಂದಾಜು 55 ಸಾವಿರಕ್ಕೂ ಅಧಿಕ ಆಹಾರ ಕಿಟ್ ಗಳ ವಿತರಣೆ ಮಾಡುವ ಗುರಿಯನ್ನು ಹೊಂದಿರುವ ಶಾಸಕ ನಾಗೇಂದ್ರ ಅವರು, ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಈ ಕಿಟ್ ಗಳನ್ನ ವಿತರಿಸುತ್ತಿದ್ದಾರೆ.
ಗ್ರಾಮಾಂತರ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಾಗಲೇ ಆಹಾರ ಕಿಟ್ ಗಳನ್ನ ವಿತರಿಸಿದ್ದು. ಮಳೆಯಾಶ್ರಿತ ಹಳ್ಳಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಹಾಗೂ ನೀರಾವರಿ ಪ್ರದೇಶದ ಹಳ್ಳಿಗಳಲ್ಲಿ ಆಹಾರ ಕಿಟ್ ಗಳ ಬೇಡಿಕೆ ಬಂದ್ರೆ ಅಲ್ಲಿಯೂ ಕೂಡ ವಿತರಿಸಲಾಗುವುದೆಂದು ಶಾಸಕ ನಾಗೇಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರ ಅಪೇಕ್ಷೆಯ ಮೇರೆಗೆ ಬಡ, ಕೂಲಿಕಾರ್ಮಿಕರ ಕುಟುಂಬಗಳಿಗೆ ರೇಷನ್ ಕಿಟ್ ಗಳ ವಿತರಣೆ ಮಾಡುತ್ತಿರೋದಾಗಿ ನಾಂಗೇಂದ್ರ ತಿಳಿಸಿದ್ದಾರೆ.