ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಇಂದಿರಾನಗರದಲ್ಲಿ ಮಾರಕ ಕೊರೊನಾಗೆ ಬಲಿಯಾಗಿದ್ದ ದಂಪತಿಯ ಮನೆಗೆ ಭೇಟಿ ನೀಡಿದ ಶಾಸಕ ಜಿಎನ್ ಗಣೇಶ್ ಅನಾಥವಾಗಿರುವ ಮಕ್ಕಳಿಗೆ ಸಾಂತ್ವಾನ ಹೇಳಿದ್ದಾರೆ .
ದೇಶದಲ್ಲೇ 2ನೇ ಕೊರೊನಾ ಅಲೆ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಕೆಲವೊಂದು ಮನೆಯಲ್ಲಿ ಎಲ್ಲರೂ ಅಸು ನೀಗಿದ ದಾರುಣ ಘಟನೆ ನಡೆದರೆ, ಇನ್ನು ಕೆಲವು ಮನೆಗಗಳಲ್ಲಿ ಪೋಷಕರು, ಕುಟುಂಬಕ್ಕೆ ಆಸರೆಯಾಗಿದ್ದವರು ಕೊರೊನಾಗೆ ಬಲಿಯಾಗಿದ್ದಾರೆ. ಇದೇ ರೀತಿಯ ಘಟನೆ ಕಪ್ಲಿಯಲ್ಲಿ ನಡೆದಿದ್ದು, ಪಾಲಕರನ್ನು ಕಳೆದುಕೊಂಡು ಇಬ್ಬರು ಮಕ್ಕಳು ಆನಾಥರಾಗಿದ್ದಾರೆ.
ಬುಧವಾರ ಆ ಮಕ್ಕಳ ಮನೆಗೆ ಭೇಟಿ ನೀಡಿದ ಕಂಪ್ಲಿ ಶಾಸಕ ಜಿಎನ್ ಗಣೇಶ್ ಮಕ್ಕಳ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಮೇ. 29 ರಂದು ಪತಿ ಮಾರೆಪ್ಪ ದೇವರಮನೆ (55), ಮೇ.31 ರಂದು ಪತ್ನಿ ಹುಲಿಗೆಮ್ಮ ದೇವರಮನೆ (48) ಕೊರೊನಾ ಮಹಾಮಾರಿಗೆ ಮೃತಪಟ್ಟವರು. ಎರಡು ದಿನದ ಅಂತರದಲ್ಲಿ ಪಾಲಕರು ಕಳೆದುಕೊಂಡು ಮಕ್ಕಳಾದ ರಮೇಶ, ರಾಶಿ ತಬ್ಬಲಿಯಾಗಿದ್ದರು.
ಇದನ್ನು ಓದಿ: ಕೊರೊನಾ ಸೋಂಕಿನಿಂದ ರಾಜ್ಯದ 18 ಮಕ್ಕಳು ಅನಾಥ!