ಹೊಸಪೇಟೆ: ಹೋಳಿ ಹಬ್ಬದ ನಿಮಿತ್ತ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಶಾಸಕ ಭೀಮಾನಾಯ್ಕ್ ಲೇಂಗಿ(ಕೋಲಾಟ) ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಆನೇಕಲ್ ತಾಂಡಾದ ಭಜನಾ ತಂಡದ ಸದಸ್ಯರು ಲೇಂಗಿ (ಕೋಲಾಟ) ನೃತ್ಯ ಪ್ರದರ್ಶಿಸಿದರು. ಈ ವೇಳೆ, ಶಾಸಕ ಭೀಮಾನಾಯ್ಕ್ ಕೂಡ ತಂಡದೊಂದಿಗೆ ಹೆಜ್ಜೆ ಹಾಕಿ ಹುರಿದುಂಬಿಸಿದರು.
ಹೋಳಿ ಹಬ್ಬ ಭಾವೈಕ್ಯತೆಯ ಹಬ್ಬವಾಗಿದ್ದು, ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು ಎಂಬ ಸಂದೇಶ ಸಾರುವ ಲಂಬಾಣಿ ಹಾಡುಗಳನ್ನು ಆನೇಕಲ್ ತಾಂಡಾದ ಭಜನಾ ತಂಡದ ಸದಸ್ಯರು ಹಾಡಿ ಸಂಭ್ರಮಿಸಿದರು.