ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವಾರ್ಡ್ವಾರು ಪ್ರಚಾರ ನಡೆಸಿದರು.
ನಗರದ ತೇರು ಬೀದಿಯಿಂದ ಪ್ರಚಾರ ಕಾರ್ಯವನ್ನು ಆರಂಭಿಸಿದ ನಾಯಕರು, ಬಾಲಾಂಜನೇಯ ಸ್ವಾಮಿ ದೇಗುಲ, ಕಾರ್ಕಲತೋಟ, ಗುಗ್ಗರಹಟ್ಟಿ ಆಂಜನೇಯ ಸ್ವಾಮಿ ದೇಗುಲ, ಬಳ್ಳಾರೆಪ್ಪ ಕಾಲೊನಿ, ಬಾಪೂಜಿ ನಗರ, ಆಂದ್ರಾಳ್ ರಾಮನಗುಡಿ, ಮರಿಸ್ವಾಮಿ ಮಠ, ಗಣೇಶ ಗುಡಿ ಮುಂದೆ, ಬನ್ನಪ್ಪ ಬಾವಿ, ಕಾಟೇಗುಡ್ಡ, ಶ್ರೀರಾಮ ದೇಗುಲ, ಗೋನಾಳ್, ಪಟೇಲ್ ನಗರ, ವೆಂಕಟೇಶ್ವರ ಗುಡಿ ಸೇರಿದಂತೆ ಇತರೆಡೆ ತೆರಳಿ ಆಕಾಂಕ್ಷಿಗಳ ಪಟ್ಟಿಯನ್ನ ಸ್ವೀಕರಿಸಿದರು.
ಓದಿ: ಸಿಡಿ ಪ್ರಕರಣ: ಯುವತಿಯನ್ನು ಮಹಜರಿಗೆ ಕರೆದೊಯ್ಯಲಿರುವ ಎಸ್ಐಟಿ
ಪ್ರಚಾರ ಬಳಿಕ ಸಚಿವ ಶ್ರೀರಾಮುಲು ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಆಡಳಿತ ಇರಬೇಕು ಎಂಬ ಉದ್ದೇಶದೊಂದಿಗೆ ನಾನು ಮತ್ತು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಶತಾಯಗತಾಯವಾಗಿ ಶ್ರಮಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಕೂಡ ಬಿಜೆಪಿ ಸರ್ಕಾರ ಇದ್ದರೆ ವ್ಯಾಪಕವಾಗಿ ಅಭಿವೃದ್ಧಿಯ ಪರ್ವಾರಂಭ ಆಗಲಿದೆ ಎಂದರು.