ETV Bharat / state

ಕಮಲಾಪುರದ ವಾಜಪೇಯಿ ಪಾರ್ಕ್‌ನಲ್ಲಿ ಸಿಂಹ, ಹುಲಿ ಸಫಾರಿ ಆರಂಭ - undefined

ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ, ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್​ನಲ್ಲಿ ಸಿಂಹ ಮತ್ತು ಹುಲಿ ಸಫಾರಿಯನ್ನು ಉದ್ಘಾಟಿಸಿದರು.

ಬಳ್ಳಾರಿ
author img

By

Published : Jun 21, 2019, 11:08 PM IST

ಬಳ್ಳಾರಿ : ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್​ನಲ್ಲಿ ಸಿಂಹ ಮತ್ತು ಹುಲಿ ಸಫಾರಿಯನ್ನು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು.

ಜೂಲಾಜಿಕಲ್ ಪಾರ್ಕ್​ನಲ್ಲಿ ಸಿಂಹ,ಹುಲಿ ಸಫಾರಿ ಉದ್ಘಾಟನೆ ಮಾಡಿದ ಸಚಿವರು

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಂದಾಜು 65 ಕೋಟಿ ರೂಗಳ ಅನುದಾನವನ್ನು ಈ ಸಫಾರಿಗೆ ವ್ಯಯ ಮಾಡಲಾಗಿದ್ದು, ಮೈತ್ರಿ ಸರ್ಕಾರದಲ್ಲಿ ಇದೊಂದು ಹೆಮ್ಮೆಯ ವಿಚಾರವಾಗಿದೆ. ಈ ಮೂಲಕ ಮೈಸೂರು ಜೂಲಾಜಿಕಲ್ ಪಾರ್ಕ್ ನಂತರ ನಗರದಲ್ಲಿ ಇಷ್ಟೊಂದು ದೊಡ್ಡಮಟ್ಟದ ಪಾರ್ಕ್ ಶುರುವಾದಂತಾಗಿದೆ. ಸದ್ಯ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳಿಂದ ಕ್ರಮವಾಗಿ ನಾಲ್ಕು ಹುಲಿ, ಸಿಂಹಗಳನ್ನು ಸ್ಥಳಾಂತರಿಸಲಾಗಿದೆ. ಹುಲಿಗಳ ಸಫಾರಿಯನ್ನು 21.02 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು,ಅಂದಾಜು 19.33 ಹೆಕ್ಟೇರ್ ಪ್ರದೇಶದಲ್ಲಿ ಸಿಂಹಗಳ ಸಫಾರಿಯನ್ನು ನಿರ್ಮಿಸಲಾಗಿದೆ ಎಂದರು.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದೊಂದು ದೊಡ್ಡ ಪಾರ್ಕ್ ಆಗಿ ಹೊರ ಹೊಮ್ಮಲಿದ್ದು, ಪ್ರಾಣಿಗಳಿಗಾಗಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಬೆಳಗಾವಿಯಲ್ಲೂ ಕೂಡ ಅಂದಾಜು 20 ಕೋಟಿ ರೂಗಳ ವೆಚ್ಚದಲ್ಲಿ ಸಿಂಹ‌ ಮತ್ತು ಹುಲಿ ಸಫಾರಿಯನ್ನು ನಿರ್ಮಿಸಲಾಗುವುದು. ಬಳ್ಳಾರಿಯ ಕಿರು ಮೃಗಾಲಯವನ್ನು ಅದಷ್ಟು ಬೇಗನೆ ಕಮಲಾಪುರಕ್ಕೆ ಶಿಫ್ಟ್ ಮಾಡಲಾಗುತ್ತದೆ ಎಂದರು.

ಬಳಿಕ ಸಚಿವರಾದ ಸತೀಶ್​ ಜಾರಕಿಹೊಳಿ, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ, ವಿಧಾನ ಪರಿಷತ್​​ ಸದಸ್ಯ ಅಲ್ಲಂ ವೀರಭದ್ರಪ್ಪ, ಹೊಸಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಸೇರಿದಂತೆ ಇತರರು ಅರಣ್ಯ ಇಲಾಖೆ ವಾಹನದಲ್ಲಿ ತೆರಳಿ ಸಫಾರಿ ವೀಕ್ಷಣೆ ಮಾಡಿದರು.

Intro:ಹೊಸಪೇಟೆ: ಕಮಲಾಪುರದಲ್ಲಿ ಸಿಂಹ - ಹುಲಿ ಸಫಾರಿ ಲೋಕಾರ್ಪಣೆ!
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ನಲ್ಲಿಂದು ಸಿಂಹ ಮತ್ತು ಹುಲಿ ಸಫಾರಿಯನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು.
ಸಚಿವ ಸತೀಶ ಜಾರಕಿಹೊಳಿ, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಅವರು ಸಸಿಗೆ ನೀರುಣಿಸಿದರೆ, ಹೊಸಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಸಫಾರಿಗೆ ಚಾಲನೆ ನೀಡಿದರು.
ಬಳಿಕ, ಸಚಿವರಾದ ಸತೀಶ ಜಾರಕಿಹೊಳಿ, ಈ.ತುಕಾರಾಂ, ವಿಧಾನ ಪರಿಷತ್ ನ ಸದಸ್ಯ ಅಲ್ಲಂ ವೀರಭದ್ರಪ್ಪ ಸೇರಿದಂತೆ ಇತರರು ಅರಣ್ಯ ಇಲಾಖೆ ವಾಹನದೊಳಗೆ ತೆರಳಿ, ಹುಲಿ ಮತ್ತು ಸಿಂಹ ಸಫಾರಿ ವೀಕ್ಷಣೆ ಮಾಡಿದರು.
ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಅಂದಾಜು 65 ಕೋಟಿ ರೂ.ಗಳ ಅನುದಾನ ವನ್ನು ವ್ಯಯಮಾಡಲಾಗಿದೆ. ಈ‌ ಮೈತ್ರಿಕೂಟ ಸರ್ಕಾರದಲ್ಲಿ ಇದೊಂದು ಹೆಮ್ಮೆಯ ವಿಚಾರ ಎಂದರು.
ಮೈಸೂರು ಜೂಲಾಜಿಕಲ್ ಪಾರ್ಕ್ ನಂತರ ಬಳ್ಳಾರಿಯಲ್ಲಿ ಇಷ್ಟೊಂದು ದೊಡ್ಡಮಟ್ಟದ ಪಾರ್ಕ್ ಶುರುವಾದಂತಾಗಿದೆ.
ಸದ್ಯ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳಿಂದ ಕ್ರಮವಾಗಿ ನಾಲ್ಕು ಹುಲಿ ಮತ್ತು ಸಿಂಹಗಳನ್ನು ಸ್ಥಳಾಂತರಿಸ ಲಾಗಿದೆ. ಹುಲಿಗಳ ಸಫಾರಿಯು 21.02 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಅಂದಾಜು 19.33 ಹೆಕ್ಟೇರ್ ಪ್ರದೇಶದಲ್ಲಿ ಸಿಂಹಗಳ ಸಫಾರಿಯನ್ನು ನಿರ್ಮಿಸಲಾಗಿದೆ ಎಂದರು.

Body:ಇನ್ನೂ ಹತ್ತಾರು ಪ್ರಾಣಿಗಳನ್ನು ಈ ಪಾರ್ಕ್ ಗೆ ಸ್ಥಳಾಂತರಿಸಲಾ ಗುವುದು. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದೊಂದು ದೊಡ್ಡ ಪಾರ್ಕ್ ಆಗಿ ಹೊರಹೊಮ್ಮಲಿದೆ. ಪ್ರಾಣಿಗಳಿಗಾಗಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.
ಬೆಳಗಾವಿಯಲ್ಲೂ ಕೂಡ ಅಂದಾಜು 20 ಕೋಟಿ ರೂ.ಗಳ ವೆಚ್ಚದಲ್ಲಿ ಸಿಂಹ‌ ಮತ್ತು ಹುಲಿ ಸಫಾರಿಯನ್ನು ನಿರ್ಮಿಸಲಾ ಗುವುದು. ಪ್ರತಿ ಜಿಲ್ಲೆಯಲ್ಲೂ ಕೂಡ ಇಂತಹ ಪಾರ್ಕ್ ಅನ್ನು ನಿರ್ಮಿಸಲಾಗುವುದು. ಬಳ್ಳಾರಿಯ ಕಿರು ಮೃಗಾಲಯದ ಸ್ಥಳಾಂತರ ಖಾಯಂ. ಅದಷ್ಟು ಬೇಗನೆ ಮೃಗಾಲಯದ ಕಮಲಾಪುರಕ್ಕೆ ಶಿಫ್ಟ್ ಆಗಲಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_21_HULI_SAFARI_LOKARPANE_7203310

KN_BLY_03o_21_HULI_SAFARI_LOKARPANE_7203310

KN_BLY_03p_21_HULI_SAFARI_LOKARPANE_7203310

KN_BLY_03q_21_HULI_SAFARI_LOKARPANE_7203310

KN_BLY_03r_21_HULI_SAFARI_LOKARPANE_7203310

KN_BLY_03s_21_HULI_SAFARI_LOKARPANE_BYTE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.