ETV Bharat / state

ಕೋವಿಡ್​​​​​​​ ವಾರ್ಡ್​ಗೆ ಭೇಟಿ: ಸೋಂಕಿತರ ಅಹವಾಲು ಆಲಿಸಿದ ಆನಂದ್​​​ ಸಿಂಗ್​! - minister anand singh latest news

ವಿಮ್ಸ್ ನಿರ್ದೇಶಕ ಡಾ. ದೇವಾನಂದ, ವೈದ್ಯರು ಹಾಗೂ ಕೆಲ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪಿಪಿಇ ಕಿಟ್ ಧರಿಸಿಕೊಂಡು ಸೋಂಕಿತರಿರುವ ವಾರ್ಡ್​ಗೆ ಪ್ರವೇಶಿಸಿದ ಸಚಿವರು, ಸೋಂಕಿತರಿಂದ ಅಹವಾಲುಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು.

Minister Anand singh
ಸಚಿವ ಆನಂದ್​​​ ಸಿಂಗ್
author img

By

Published : Jul 8, 2020, 4:38 PM IST

ಬಳ್ಳಾರಿ: ನಗರದ ಸರ್ಕಾರಿ ಡೆಂಟಲ್ ಕಾಲೇಜಿನಲ್ಲಿರುವ ಕೊರೊನಾ ಸೊಂಕಿತರ ವಾರ್ಡ್​ನೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​​ ಸಿಂಗ್ ತೆರಳಿ ಸೋಂಕಿತರ ಅಹವಾಲು ಆಲಿಸಿದರು.

ವಿಮ್ಸ್ ನಿರ್ದೇಶಕ ಡಾ. ದೇವಾನಂದ, ವೈದ್ಯರು ಹಾಗೂ ಕೆಲ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪಿಪಿಇ ಕಿಟ್ ಧರಿಸಿಕೊಂಡು ಸೋಂಕಿತರಿರುವ ವಾರ್ಡ್​ಗೆ ಪ್ರವೇಶಿಸಿದ ಸಚಿವರು, ಸೋಂಕಿತರಿಂದ ಅಹವಾಲುಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು.

ಕೋವಿಡ್​ ವಾರ್ಡ್​ಗೆ ಸಚಿವ ಆನಂದ್​​​ ಸಿಂಗ್

ಕೊರೊನಾ ಬಂದಿದೆ ಎಂಬ ಭಯ ಬೇಡ. ತಮ್ಮೆಲ್ಲರೊಂದಿಗೆ ಜಿಲ್ಲಾಡಳಿತ ಮತ್ತು ಸರ್ಕಾರವಿದೆ. ತಾವು ಆಸ್ಪತ್ರೆಯೊಳಗೆ ವಿಶ್ರಾಂತಿ ತೆಗೆದುಕೊಂಡು ಗುಣಮುಖರಾಗಿ ಹೊರ ಬನ್ನಿ ಎಂದು ಹಾರೈಸಿದರು.

ನಂತರ ಸಚಿವರು ಸ್ಥಳದಲ್ಲಿದ್ದ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ವೈದ್ಯರಿಗೆ ಅಗತ್ಯ ಸಹಕಾರವನ್ನು ನೀಡುವುದಾಗಿ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ‌ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಬುಡಾ ಅಧ್ಯಕ್ಷ‌ ದಮ್ಮೂರು ಶೇಖರ್ ಸೇರಿದಂತೆ ವಿಮ್ಸ್ ವೈದ್ಯಾಧಿಕಾರಿಗಳು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.