ಬಳ್ಳಾರಿ: ನಗರದ ಸರಳದೇವಿ ಕಾಲೇಜು ಮುಂಭಾಗದ ಬಾಕ್ಸ್ ಚರಂಡಿಯಲ್ಲಿ, ವ್ಯಕ್ತಿವೋರ್ವನನ್ನು ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ನಗರದ ಸತ್ಯನಾರಾಯಣ ಪೇಟೆಯ ನಿವಾಸಿ ಕಾಶಿನಾಥ (43) ಎಂದು ತಿಳಿದು ಬಂದಿದ್ದು, ಈತ ಮಾನಸಿಕ ಅಶ್ವಸ್ಥನಾಗಿದ್ದ ಎಂದು ಹೇಳಲಾಗ್ತಿದೆ.
ಕಳೆದ 8 ವರ್ಷಗಳಿಂದ ಮಾನಸಿಕವಾಗಿ ಅಶ್ವಸ್ಥನಾಗಿದ್ದು, ಸ್ಥಳೀಯ ಜನರೇ ತಿಂಡಿ ಊಟ ಕೊಡುತ್ತಿದ್ದರು. ಮೃತ ವ್ಯಕ್ತಿಗೆ ತಾಯಿ ಮತ್ತು ಅಣ್ಣ ಇದ್ದು, ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಹೆಚ್ಚುವರಿ ಎಸ್ಪಿ ಲಾವಣ್ಯ ಮತ್ತು ನಗರದ ಡಿವೈಎಸ್ಪಿ ಕೆ. ರಾಮರಾವ್, ಸಿಪಿಐ ಕೆ. ಗಾಯತ್ರಿ ಭೇಟಿ ನೀಡಿದ್ದರು. ಡಿ.ಎ.ಆರ್ ಶ್ವಾನದಳ ಬ್ರೂನಾ (ಡಾಬರ್ ಮೆನ್ ) ತಳಿಯ ಶ್ವಾನವನ್ನು ತರಿಸಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.