ಬೆಳಗಾವಿ : ಸೂರ್ಯಗ್ರಹಣ ಹಿನ್ನೆಲೆ ಮೌಢ್ಯಕ್ಕೆ ಸೆಡ್ಡು ಹೊಡೆಯಲು ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲಕರು ಭಾನುವಾರದ ಬಾಡೂಟ ಸೇವಿಸಿದ್ದಾರೆ.
ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಮಾತನಾಡಿ, ಯುವಕರು ಮೌಢ್ಯದಿಂದ ಹೊರಬರಬೇಕು. ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಬೇಕು. ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಮಳೆಗಾಲ, ಚಳಿಗಾಲ ರೀತಿ ಗ್ರಹಣವೂ ಗೋಚರಿಸುತ್ತದೆ.
ಮೌಢ್ಯ ಆಚರಿಸಿ ಜನರನ್ನ ಭಯಭೀತಗೊಳಿಸಲಾಗುತ್ತಿದೆ. ಜನರು ಮೌಢ್ಯಗಳ ಆಚರಣೆಯಿಂದ ಹೊರ ಬರಬೇಕು ಎಂದರು. ಈ ಸಮಯದಲ್ಲಿ ವೇದಿಕೆಯ ಸಂಚಾಲಕರು, ಪ್ರಗತಿಪರರು ಹಾಗೂ ಇತರರು ಭಾಗಿಯಾಗಿ ಬಾಡೂಟ ಸೇವಿಸಿದರು.