ಹೊಸಪೇಟೆ: ಚಿಕ್ಕ ಕುಟುಂಬವೇ ಚೊಕ್ಕ ಕುಟುಂಬ. ಹೀಗಾಗಿ ವಿಶಾಲ ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಇದು ಈ ಭಾಗದ ಜನರ ಕನಸಾಗಿದೆ. ವಿಭಜನೆಗೊಂಡು ತೆಲಂಗಾಣ ರಾಜ್ಯವಾಗಿದೆ. ಅಲ್ಲಿ ಹಲವು ಜಿಲ್ಲೆಗಳು ರೂಪುಗೊಂಡಿದೆ. ಆದರೂ ಅಲ್ಲಿ ಯಾವುದೇ ತಕರಾರು ಏಳಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳೇ, ಹೊಸಪೇಟೆಯನ್ನು ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ವೀರಭದ್ರಪ್ಪ ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕು ಸಮಿತಿ ರಚನೆಯನ್ನು ಮಾಡಿ, ಬಳಿಕ ಮಾತನಾಡಿದ ಅವರು, ಹೊಸಪೇಟೆ ನಗರದಲ್ಲಿ ನಾನು ಬದುಕನ್ನು ಕಟ್ಟಿಕೊಂಡಿದ್ದೇನೆ. ನಾನು ಬರವಣಿಗೆ ಆರಂಭಿಸಿದ್ದು ಇಲ್ಲೇ. ಕನ್ನಡ ಎಂದರೆ ನೆಲ, ಜಲ, ಭಾಷೆಯನ್ನು ಬೆಳೆಸುವುದು. ನಮ್ಮ ರಾಜ್ಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಭಾಷೆಗಳು ಬೇರೆಯಾಗಿವೆ. ಆದರೂ ನಾವೆಲ್ಲ ಕನ್ನಡಿಗರು ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ ಎಂದರು.