ETV Bharat / state

ಬೈಕ್​ಗೆ ಲಾರಿ ಡಿಕ್ಕಿ: ಎರಡು ಹೋಳಾದ ಬೈಕ್​​ ಸವಾರನ ಮುಖ! - ಬೈಕ್

ಬೈಕ್​ಗೆ ಅದಿರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರನ ಮುಖ ಎರಡು ಹೋಳಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕುರುಗೋಡಿನಲ್ಲಿ ನಡೆದಿದೆ.

ಎರಡು ಹೋಳಾದ ಬೈಕ್ ಸವಾರನ ಮುಖ
author img

By

Published : Sep 26, 2019, 7:29 AM IST

ಬಳ್ಳಾರಿ: ಜಿಲ್ಲೆಯ ಕುಡಿತಿನಿ ವ್ಯಾಪ್ತಿಯ ವೇಣಿ ವೀರಾಪುರ ಬಳಿ ನಿನ್ನೆ ಬೈಕ್​ಗೆ ಅದಿರು ಸಾಗಣೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರನ ಮುಖವೇ ಎರಡು ಹೋಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕುರುಗೋಡು ತಾಲೂಕಿನ ವೇಣಿವೀರಾಪುರ ಗ್ರಾಮದ ಪ್ರವೇಶ ದ್ವಾರದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಗ್ರಾಮದ ನಿವಾಸಿ ರವಿಕುಮಾರ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಲಾರಿ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಕೂಡ ಅತಿ ವೇಗವಾಗಿ ಬೈಕ್ ಚಲಾಯಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.‌ ಹೀಗಾಗಿ ರವಿಕುಮಾರ ಸಹ ಆತನ ಸಹಚರನೊಂದಿಗೆ ವೇಗವಾಗಿ ಬೈಕ್​ ಚಲಾಯಿಸಿಕೊಂಡು ಬಂದಿರಬಹುದೆಂಬ ಸಂಶಯವೂ ಇಲ್ಲಿನ ಜನರಲ್ಲಿದೆ.‌

ಎರಡು ಹೋಳಾದ ಬೈಕ್ ಸವಾರನ ಮುಖ

ಗ್ರಾಮದ ಪ್ರದೇಶ ದ್ವಾರದ ಬಳಿ ಚತುಷ್ಪಥ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದರ ಪರಿಣಾಮ ಏಕಮುಖ ರಸ್ತೆಯಲ್ಲೇ ಭಾರಿ, ಲಘು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವ ಪರಿಸ್ಥಿತಿಯಿದೆ.

ಗ್ರಾಮಸ್ಥರ ಅಕ್ರೋಶ...

ಬೈಕ್ ಸವಾರನ ಸಾವಿಗೆ ಕಾರಣವಾದ ಲಾರಿ ಚಾಲಕನ ವಿರುದ್ಧ ವೇಣಿ ವೀರಾಪುರ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾದ ಚಾಲಕನನ್ನು ಕೂಡಲೇ ಬಂಧಿಸಬೇಕು.‌ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಕೆಲಕಾಲ ರಸ್ತೆ ತಡೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೈಕ್ ಗೆ ಲಾರಿ ಡಿಕ್ಕಿ: ಎರಡು ಹೋಳಾದ ಬೈಕ್ ಸವಾರನ ಮುಖ!
ಬಳ್ಳಾರಿ: ಜಿಲ್ಲೆಯ ಕುಡಿತಿನಿ ವ್ಯಾಪ್ತಿಯ ವೇಣಿ ವೀರಾಪುರ ಬಳಿ ಇಂದು ಮಧ್ಯಾಹ್ನ ಬೈಕ್ ಗೆ ಅದಿರು ಸಾಗಣೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರನ ಮುಖವೇ ಎರಡು ಹೋಳಾದ ಸ್ಥಿತಿ ಯಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ವೇಣಿವೀರಾಪುರ ಗ್ರಾಮದ ಪ್ರವೇಶ ದ್ವಾರ ಬಳಿಯೇ ಈ ಭೀಕರ ಅಪಘಾತ ನಡೆದಿದ್ದು, ಗ್ರಾಮದ ನಿವಾಸಿ ರವಿಕುಮಾರ (40) ಎಂಬುವರೇ ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.
ಅದಿರು ಸಾಗಣೆ ಲಾರಿಯೊಂದರ ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದಕ್ಕೆ ಈ ಘಟನೆ ಸಂಭವಿಸಿದೆ. ಗ್ರಾಮದ ಪ್ರದೇಶದ್ವಾರದ ಬಳಿ ಚತ್ಷುಪಥ ರಸ್ತೆ ಅಭಿಕಾರ್ಯ ಅಪೂರ್ಣಗೊಂಡಿದ್ದರ ಪರಿಣಾಮ ಸಿಂಗಲ್ ರಸ್ತೆಯಲ್ಲೇ ಭಾರೀ ಮತ್ತು ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವ ಪರಿಸ್ಥಿತಿಯಿದೆ. ಆದರೆ, ಗ್ರಾಮದ ಪ್ರವೇಶ ದ್ವಾರದಿಂದಲೂ ಕೂಡ ದ್ವಿಚಕ್ರ ವಾಹನಗಳ ಸವಾರರೂ ಕೂಡ ಅತಿವೇಗ ಮತ್ತು ಅಜಾಗ ರೂಕತೆಯಿಂದ ಬೈಕ್ ಅನ್ನು ಚಲಾಯಿಸುತ್ತಿರೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.‌ ಹೀಗಾಗಿ, ಅದೇ ತರನಾಗಿಯೇ ಈ ದಿನ ರವಿಕುಮಾರ ಅವರು ಆತನ ಸಹಚರನೊಂದಿಗೆ ಬೈಕ್ ಅನ್ನು ಚಲಾಯಿಸಿಕೊಂಡು ಬಂದಿರಬಹುದೆಂಬ ಸಂಶಯವೂ ಇಲ್ಲಿ ಮೂಡಿದೆ.‌
Body:ಗ್ರಾಮಸ್ಥರ ಅಕ್ರೋಶ: ಅದಿರು ಸಾಗಣೆ ಲಾರಿಯೊಂದು ಬೈಕ್ ಗೆ ಡಿಕ್ಕಿಹೊಡೆದ ಬೈಕ್ ಸವಾರನ ಸಾವಿಗೆ ಕಾರಣವಾದ ಲಾರಿ ಚಾಲಕ ಮತ್ತು ಮಾಲೀಕನ ವಿರುದ್ಧ ವೇಣಿ ವೀರಾಪುರ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬೈಕ್ ಗೆ ಡಿಕ್ಕಿಹೊಡೆದು ಪರಾರಿಯಾದ ಚಾಲಕನನ್ನು ಕೂಡಲೇ ಬಂಧಿಸಬೇಕು.‌ ಮೃತ ವ್ಯಕ್ತಿಯ ಅವಲಂಬಿತ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಒದಗಿ ಸಬೇಕೆಂದು ಗ್ರಾಮಸ್ಥರು ಕೆಲಕಾಲ ರಸ್ತೆ ತಡೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ. ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_VENIVEERAPUR_ACCIDENT_BIKE_,RIDER_DEATH_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.