ಹೊಸಪೇಟೆ : ನೂತನ ವಿಜಯನಗರ ಜಿಲ್ಲೆಯನ್ನು ರಚಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ನಗರದ ಕೋರ್ಟ್ ಮುಂಭಾಗದಲ್ಲಿಂದು 5 ಸಾವಿರ ಪತ್ರ ಚಳವಳಿ ನಡೆಸಲಾಯಿತು.
ಎರಡು ದಶಕಗಳಿಂದ ವಿಜಯನಗರ ಜಿಲ್ಲೆಗಾಗಿ ಹೋರಾಟವನ್ನು ನಡೆಸಲಾಗುತ್ತಿದೆ. ಈ ಮನವಿ ಮೇರೆಗೆ ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಈಗಾಗಲೇ ವಿಜಯನಗರವನ್ನು 31ನೇ ಜಿಲ್ಲೆಯನ್ನಾಗಿ ಅನುಮೋದನೆ ಮಾಡಲಾಗಿದೆ.
ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು. ಪಶ್ಚಿಮ ತಾಲೂಕುಗಳು ಹೊಸಪೇಟೆಗೆ ಹತ್ತಿರವಾಗಲಿವೆ. ಇದು ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಬಳ್ಳಾರಿ ಜನತೆ ಇದಕ್ಕೆ ವಿರೋಧ ಮಾಡಬಾರದು ಎಂದು ಒತ್ತಾಯಿಸಿದರು.