ಬಳ್ಳಾರಿ: ಗಣಿನಾಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಕಾಟಾಚಾರದ ಭೇಟಿಯಾಗಿದೆ. ಒಂದು ರೀತಿ ಒಲ್ಲದ ಮನಸ್ಸಿನಿಂದ ಭೇಟಿ ನೀಡಲು ಮುಂದಾಗಿದ್ದಾರೆ. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ತಾಲೂಕಿನ ರೂಪನಗುಡಿ ಅಸುಂಡಿ ಗ್ರಾಮದ ರೈತ ಸಿರಿ ಯೋಜನೆ ಅಡಿಯಲ್ಲಿ ರೈತ ಬಿ ಕೆ ಶೇಖರ್ ಅವರು ಕೈಗೊಂಡ ಕೃಷಿ ಚಟುವಟಿಕೆ ಪರಿಶೀಲನೆ ಭೇಟಿಗೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರು ಸಮಯ ನಿಗದಿಪಡಿಸಿದ್ದರು. ಆದರೆ, ಸಚಿವರು ದಿಢೀರನೆ ಆ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.
ನಗರದ ಹೊರ ವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಸ್ನಾತಕೋತ್ತರ ಕೇಂದ್ರ ಬಾಲಕ ಬಾಲಕಿಯರ ವಿದ್ಯಾರ್ಥಿಗಳ ನಿಲಯದ ಉದ್ಘಾಟನೆ ಸಮಾರಂಭಕ್ಕೆ 9ಗಂಟೆಗೆ ಉದ್ಘಾಟನೆ ಯಾಗಬೇಕಾಗಿತ್ತು. ಆದರೆ, 10 ಗಂಟೆಯಾದ್ರೂ ಉದ್ಘಾಟನೆಗೆ ಬಾರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯಿಂದಾಗಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕಾದು ಸುಸ್ತಾಗಿದ್ದಾರೆ.
ಬಳ್ಳಾರಿ ಸಂಸದರಿಗೂ ಯಾವುದೇ ಮಾಹಿತಿ ಇಲ್ಲ :
ಬಳ್ಳಾರಿ ಸಂಸದ ವೈ.ದೇವೆಂದ್ರರಿಗೆ ಉದ್ಘಾಟನೆ ಕುರಿತು ಯಾವುದೇ ಮಾಹಿತಿ ದೊರತಿರಲಿಲ್ವಂತೆ. ಹಾಗೆಯೇ ಬಳ್ಳಾರಿ ತಾಲೂಕಿನ ರೂಪನಗುಡಿ ಅಸುಂಡಿ ಗ್ರಾಮದ ರೈತ ರೈತ ಬಿ ಕೆ ಶೇಖರ್ ಸಿರಿ ಯೋಜನೆ ಅಡಿಯಲ್ಲಿ ಕೈಗೊಂಡ ಕೃಷಿ ಚಟುವಟಿಕೆ ಪರಿಶೀಲನೆ ಭೇಟಿಯನ್ನು ಇದಕ್ಕಿಂದ್ದಂತೆ ರದ್ದು ಗೊಳಿಸಿರುವ ಕೆಲಸ ಮಾಡಿದಕ್ಕೆ ಅಧಿಕಾರಿಗಳ ಮೇಲೆ ಸಂಸದ ಗರಂ ಆಗಿದ್ದಾರೆ.
ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕಾದು ಸುಸ್ತಾದರು :
ಈ ವಿವಿಯ ವಸತಿ ನಿಲಯ ಉದ್ಘಾಟನಾ ಸಮಾರಂಭಕ್ಕೆ ಬೆಳಗ್ಗೆಯಿಂದಲೇ ವಿವಿ ಕುಲಪತಿ, ಕುಲಸಚಿವ, ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಕಾದು ಸುತ್ತಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉಪಮುಖ್ಯಮಂತ್ರಿ ಅವರ ಸಭೆ ಸಮಾರಂಭಕ್ಕೆ ಲೇಟಾಗಿ ಬರೋದು, ಭೇಟಿ ನೀಡುವ ಸ್ಥಳ ರದ್ದು ಮಾಡಿದ್ರೇ ಹೇಗೆ ? ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.