ಹೊಸಪೇಟೆ : ಕಾರಿಗನೂರ ಸೆಂಟ್ರಲ್ ಆಸ್ಪತ್ರೆಯ ಬಳಿ ಲಾರಿಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಚಾಲಕ ಮೃತಪಟ್ಟಿದ್ದು, ಮತ್ತೋರ್ವ ಚಾಲಕ ಗಾಯಗೊಂಡಿದ್ದಾರೆ.
ಟಿಪ್ಪರ್ ಲಾರಿ ಚಾಲಕ ಹಾಗೂ ಕಾರಿಗನೂರ ನಿವಾಸಿ ರಾಮು(35) ಮೃತ ಚಾಲಕ. ಆಂಧ್ರದ ಸಿವಿಲ್ ಲಾರಿ ಚಾಲಕ ನಾಗರಾಜ ಕೈಗೆ ಹಾಗೂ ತೆಲೆಗೆ ಪೆಟ್ಟಾಗಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದಾಗ ರಾಮು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ಗೆ ಸಾಗಿಸುವ ಮುನ್ನ ಅಸುನೀಗಿದ್ದಾರೆ.
ಚಾಲಕ ನಾಗರಾಜ ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಪ್ರಕರಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.