ಬಳ್ಳಾರಿ: ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಶ್ರೀನಾಥ್ ಜೋಷಿ, 2019-2020ನೇ ಸಾಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಠೇವಣಿ ರೂ. 28,435 ಕೋಟಿ ಹಾಗೂ ಸಾಲ ಮತ್ತು ಮುಂಗಡಗಳು ರೂ. 21,785 ಕೋಟಿ ಹಾಗೂ ಒಟ್ಟು ರೂ. 50,220 ಕೋಟಿ ವ್ಯವಹಾರವಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಭಾರತದ ಇನ್ನುಳಿದ 46 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗಿಂತ ಅಗ್ರ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಸೇವಾ ಕೇಂದ್ರಗಳು: ಬ್ಯಾಂಕಿನ ಕಾರ್ಯ ಕ್ಷೇತ್ರ 21 ಜಿಲ್ಲೆಗಳು ಮತ್ತು 18 ಪ್ರಾದೇಶಿಕ ಕಚೇರಿಗಳು
ಲಾಭಾಂಶ: ಒಟ್ಟು ಲಾಭ: ರೂ. 730.98 ಕೋಟಿ ನಿವ್ವಳ ಲಾಭ ( ತೆರಿಗೆ ನಂತರ ): 18.61 ಕೋಟಿ
2019-2020ನೇ ಸಾಲಿನಲ್ಲಿ 45,795 ಹೊಸ ಕೃಷಿಕರಿಗೆ ರೂ. 521 ಕೋಟಿ ಮೊತ್ತದ ಕೆ.ಸಿ.ಸಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಿದೆ. ಕೊವಿಡ್ -19 ಹೋರಾಟ ಸಮಯದಲ್ಲಿ ಸಿಬ್ಬಂದಿ ವರ್ಗದವರು ಒಂದು ದಿನದ ಸಂಬಳವನ್ನು ದೇಣಿಗೆಯಾಗಿ 85 ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ನಿಧಿ, ಸಿಎಂ ರಿಲೀಫ್ ಫಂಡ್ಗೆ ನೀಡಲಾಗಿದೆ ಎಂದರು.
3 ಸಂಚಾರಿ ಎಟಿಎಂ ಮೂಲಕ ಬಳ್ಳಾರಿ, ಚಿತ್ರದುರ್ಗ, ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಸೇವೆ ನೀಡಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ನಿರ್ದೇಶನದನ್ವಯ ಮಾರ್ಚ್ ಮತ್ತು ಆಗಸ್ಟ್ 2020ರ ಸಮಯದಲ್ಲಿ ಗ್ರಾಹಕರ ಸಾಲ ಖಾತೆಗಳಲ್ಲಿ ಬರಬಹುದಾದ ಕಂತುಗಳನ್ನು ಮುಂದೂಡಲಾಗಿದೆ. ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಶೀಲರು ಪಡೆದ ಸಾಲದ ಮಿತಿಯ ಶೇಕಡ 10ರಿಂದ 20ರವರೆಗೆ ಹೆಚ್ಚಿನ ತಾತ್ಕಾಲಿಕ ಸಾಲ ಮಿತಿಯ ಸೌಲಭ್ಯವನ್ನು ನೀಡಲಾಗಿದೆ ಎಂದು ಹೇಳಿದರು.