ಹೊಸಪೇಟೆ: ದೇವದಾಸಿ ಮಹಿಳೆಯರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊರೊನಾದಿಂದ ದೇವದಾಸಿ ಮಹಿಳೆಯರ ಬದಕು ದುಸ್ತರವಾಗಿದೆ. ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಸಂಕಷ್ಟ ಅನುಭವಿಸುವಂತಾಗಿದ್ದು, ಮೂರು ತಿಂಗಳ ಮುಂಗಡ ಪಡಿತರವನ್ನು ಮಾತ್ರ ನೀಡಲಾಯಿತು. ಆದರೆ ಉಳಿದ ಸಹಾಯ ಸರ್ಕಾರದಿಂದ ಸಿಗಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ದೇವದಾಸಿ ಮಹಿಳೆಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ತಲಾ ಐದು ಎಕರೆ ಜಮೀನಅನ್ನು ಉಚಿತವಾಗಿ ನೀಡಬೇಕು. 10 ಲಕ್ಷ ರೂ. ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸಬೇಕು. ಜೊತೆಗೆ ಕೋವಿಡ್- 19 ಎದುರಿಸಲು ನಮ್ಮೆಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂ. ಕನಿಷ್ಠ ಆರು ತಿಂಗಳ ಕಾಲ ನೀಡಬೇಕು. ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಮಾಸಿಕ 10 ಕೆಜಿ ಸಮಗ್ರ ಆಹಾರ ಮತ್ತು ಆರೋಗ್ಯ ಸಾಮಗ್ರಿ ಕಿಟ್ ಒದಗಿಸಬೇಕು ಎನ್ನವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮುಖಂಡರಾದ ನಾಗರತ್ನಮ್ಮ, ಹಂಪಮ್ಮ, ಯಲ್ಲಮ್ಮ, ಆರ್.ಭಾಸ್ಕರ್‌ರೆಡ್ಡಿ, ಬಿಸಾಟಿ ಮಹೇಶ್, ಕಲ್ಯಾಣಯ್ಯ ಇನ್ನಿತರರಿದ್ದರು.