ETV Bharat / state

ಗಣಿನಾಡಿನಲ್ಲಿ ಕಾರ ಹುಣ್ಣಿಮೆಯ ಸಂಭ್ರಮ .. ಕರಿಹರಿಬಿಡುವ ಮುಖೇನ ಸಂಭ್ರಮಿಸಿದ ರೈತರು!

author img

By

Published : Jun 17, 2019, 11:34 PM IST

ಜಿಲ್ಲೆಯಾದ್ಯಂತ ಕಾರ ಹುಣ್ಣಿಮೆ ಪ್ರಯುಕ್ತ ಇಂದು ಕರಿಹರಿಬಿಡುವ ಸಂಭ್ರಮವನ್ನು ರೈತರು ಆಚರಿಸಿದರು. ತಮ್ಮ ಮನೆಯ ಜೋಡೆತ್ತುಗಳನ್ನು ತೊಳೆದು ಸಿಂಗಾರ ಮಾಡು ಈ ಕರಿಬಿಡುವ ಸಾಂಪ್ರದಾಯಿಕ ಕಲೆಯಲ್ಲಿ ಭಾರಿಯಾಗಿ ಎಲ್ಲರೊಡನೆ ಖುಷಿ ಹಂಚಿಕೊಂಡರು.

ಗಣಿನಾಡಿನಲಿ ಕಾರ ಹುಣ್ಣಿಮೆಯ ಸಂಭ್ರಮ

ಬಳ್ಳಾರಿ: ಕಾರ ಹುಣ್ಣಿಮೆ ನಿಮಿತ್ತ ಗಣಿನಾಡಿನಲ್ಲಿ ಜೋಡೆತ್ತುಗಳ ಕರಿ ಹರಿಬಿಡುವ ಸಂಭ್ರಮ ಎಲ್ಲೆಡೆ ಜೋರಾಗಿತ್ತು. ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಜೋಡೆತ್ತುಗಳ ಕರಿಹರಿಬಿಡುವ ಮುಖೇನ ರೈತಾಪಿವರ್ಗವು ಮನೋರಂಜನಾತ್ಮಕವಾಗಿ ತೇಲಾಡಿತು.

ಬಳ್ಳಾರಿ ತಾಲೂಕಿನ ಕಪ್ಪಗಲ್ಲು- ಸಿರಿವಾರ, ಬೇವಿನಹಳ್ಳಿ, ಬಿಸಿಲ ಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಹಗರಿ, ಜೋಳದರಾಶಿ, ಚೇಳ್ಳಗುರ್ಕಿ, ಗೋಡೆಹಾಳು, ಯಾಳ್ಪಿ, ಕಗ್ಗಲ್, ಕಾರೇಕಲ್ಲು, ವೀರಾಪುರ, ಇಬ್ರಾಂಪುರ, ಸಂಗನಕಲ್ಲು, ಮೋಕಾ, ಹೊಸ ಮೋಕಾ, ಮಸೀದಿಪುರ, ದಾಸರ ನಾಗೇನಹಳ್ಳಿ, ಜಾಲಿಹಾಳು, ಹಾವಿನಾಳು, ವೀರಾಪುರ, ಕುರುಗೋಡು, ಅಲ್ಲೀಪುರ, ಕುಡಿತಿನಿ, ಹರಗಿನಡೋಣಿ, ಬ್ಯಾಡರ ಬೆಳಗಲ್ಲು, ಬೆಳಗಲ್ಲು ತಾಂಡಾ, ಜಾನೇಕುಂಟೆ, ಜಾನೇಕುಂಟೆ ತಾಂಡಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಈ ದಿನ ಸಂಜೆಯೊತ್ತಿಗೆ ಸಂಭ್ರಮದ ಚಿಲುಮೆ ಹರಡಿಕೊಂಡಿತ್ತು.

ಗಣಿನಾಡಿನಲ್ಲಿ ಕಾರ ಹುಣ್ಣಿಮೆಯ ಸಂಭ್ರಮ

ಆಯಾ ಗ್ರಾಮಗಳ ಗ್ರಾಮಸ್ಥರು ಬೆಳಿಗ್ಗೆ ಕಾರ ಹುಣ್ಣಿಮೆ ಶುರುವಾಗುತ್ತಿದ್ದಂತೆಯೇ ಜೋಡೆತ್ತುಗಳಿಗೆ ಮೈ ತೊಳೆದು, ಬಳಿಕ, ಜೋಡೆತ್ತುಗಳ ಕೊಂಬುಗಳಿಗೆ ವರ್ಣರಂಜಿತವಾದ ಬಣ್ಣದ ಲೇಪನ ಮಾಡಿ, ಕೊಂಬುಗಳಿಗೆ ಬಲೂನ್ ಕಟ್ಟಿ ವಿಶೇಷವಾಗಿ ಅಲಂಕರಿಸಿದ್ದರು. ನಂತರ ಜಿಲ್ಲೆಯ ಆಯಾ ಗ್ರಾಮಗಳಲ್ಲಿ ಗ್ರಾಮದ ಅದಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಆ ಬಳಿಕ ಜೋಡೆತ್ತುಗಳ ಕರಿಯನ್ನು ಹರಿಬಿಡಲಾಯಿತು. ಗ್ರಾಮಸ್ಥರೆಲ್ಲರೂ ಎರಡು ಬದಿಯಲ್ಲಿ ನಿಂತುಕೊಂಡು ಕೇಕೆ, ಶಿಳ್ಳೆ ಹೊಡೆಯುತ್ತಾ ಜೋಡೆತ್ತುಗಳ ಕರಿ ಹರಿಬಿಡುವವರನ್ನು ಹುರಿದುಂಬಿಸಿದರು.

ಈ ಕರಿಬಿಡುವ ಸಂಪ್ರದಾಯವೆಂದರೆ ಅಗಸೆ ಕಟ್ಟೆಗೆ ಬೇವಿನ‌ ಸೊಪ್ಪನ್ನು‌ ಕಟ್ಟಲಾಗಿರುತ್ತದೆ. ಯಾರು ತನ್ನ ಜೋಡೆತ್ತುಗಳನ್ನು ಮುಂದೆ ಹೊಡೆದುಕೊಂಡು ಬರುತ್ತಾರೋ ಅವರು ಈ ಬೇವಿನ ಸೊಪ್ಪನ್ನು ಕೀಳಬೇಕು. ಯಾರು ಮೊದಲು ಬಂದು ಸೊಪ್ಪನ್ನು ಕೀಳುತಾರೋ ಅವರೇ ವಿಜೇತರು. ಇನ್ನು ಜೋಡೆತ್ತುಗಳ ಕರಿಬಿಡುವ ಹಬ್ಬವು ಪೂರ್ವಿಕರ ಕಾಲದಿಂದಲೂ ಸಾಂಪ್ರದಾಯಿಕವಾಗಿ ಬಳುವಳಿಯಾಗಿ ಬಂದಿದೆ. ಈ ಹಬ್ಬ ಆಚರಣೆ ಎಂದರೆ ಗ್ರಾಮದ ರೈತರ ಮೊಗದಲ್ಲಿ ಸಂತಸ ತರುತ್ತದೆ ಎಂದು ಸಿರಿವಾರ ಗ್ರಾಮದ ತಿಪ್ಪೇರುದ್ರ ತಿಳಿಸಿದ್ದಾರೆ. ಕಾರ ಹುಣ್ಣಿಮೆ ಬಂದರೆ ಸಾಕು. ಎಲ್ಲರ ಮನೆಯಲ್ಲೂ ಹೋಳಿಗೆ ಸಂಭ್ರಮ ಜೋರಾಗಿರುತ್ತದೆ. ಅದರಂತೆಯೇ ಈ ದಿನವೂ ಕೂಡ ಹೋಳಿಗೆ ನೈವೇದ್ಯ ಗ್ರಾಮೀಣ ಪ್ರದೇಶದಲ್ಲಿ ಜೋರಾಗಿ ಕಂಡು ಬಂದಿದೆ.

Intro:ಗಣಿನಾಡಿನಲಿ ಕಾರ ಹುಣ್ಣಿಮೆಯ ಸಂಭ್ರಮ....
ಜಿಲ್ಲಾದ್ಯಂತ ಜೋಡೆತ್ತುಗಳನ್ನು ಕರಿಹರಿಬಿಡುವ ಮುಖೇನ ಸಂಭ್ರಮಿಸಿದ ರೈತರು!
ಬಳ್ಳಾರಿ: ಕಾರ ಹುಣ್ಣಿಮೆ ನಿಮಿತ್ತ ಗಣಿನಾಡಿನಲ್ಲಿ ಜೋಡೆತ್ತುಗಳ ಕರಿ ಹರಿಬಿಡುವ ಸಂಭ್ರಮ ಎಲ್ಲೆಡೆ ಜೋರಾಗಿತ್ತು. ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಜೋಡೆತ್ತುಗಳ ಕರಿಹರಿಬಿಡುವ ಮುಖೇನ ರೈತಾಪಿವರ್ಗವು ಮನೋರಂಜನಾತ್ಮಕವಾಗಿ ತೇಲಾಡಿತು.
ಬಳ್ಳಾರಿ ತಾಲೂಕಿನ ಕಪ್ಪಗಲ್ಲು- ಸಿರಿವಾರ, ಬೇವಿನಹಳ್ಳಿ, ಬಿಸಿಲ ಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಹಗರಿ, ಜೋಳದರಾಶಿ, ಚೇಳ್ಳಗುರ್ಕಿ, ಗೋಡೆಹಾಳು, ಯಾಳ್ಪಿ, ಕಗ್ಗಲ್, ಕಾರೇಕಲ್ಲು, ವೀರಾಪುರ, ಇಬ್ರಾಂಪುರ, ಸಂಗನಕಲ್ಲು, ಮೋಕಾ, ಹೊಸ ಮೋಕಾ, ಮಸೀದಿಪುರ, ದಾಸರ ನಾಗೇನಹಳ್ಳಿ, ಜಾಲಿಹಾಳು, ಹಾವಿನಾಳು, ವೀರಾಪುರ, ಕುರುಗೋಡು, ಅಲ್ಲೀಪುರ, ಕುಡಿತಿನಿ, ಹರಗಿನಡೋಣಿ, ಬ್ಯಾಡರ ಬೆಳಗಲ್ಲು, ಬೆಳಗಲ್ಲು ತಾಂಡಾ, ಜಾನೇಕುಂಟೆ, ಜಾನೇಕುಂಟೆ ತಾಂಡಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಈ ದಿನ ಸಂಜೆಯೊತ್ತಿಗೆ ಸಂಭ್ರಮದ ಚಿಲುಮೆ ಹರಡಿಕೊಂಡಿತ್ತು.
ಆಯಾ ಗ್ರಾಮಗಳ ಗ್ರಾಮಸ್ಥರು ಬೆಳಿಗ್ಗೆ ಕಾರ ಹುಣ್ಣಿಮೆ ಶುರುವಾಗುತ್ತಿದ್ದಂತೆಯೇ ಜೋಡೆತ್ತುಗಳಿಗೆ ಮೈ ತೊಳೆದರು.‌ ಬಳಿಕ, ಜೋಡೆತ್ತುಗಳ ಕೊಂಬುಗಳಿಗೆ ವರ್ಣರಂಜಿತವಾದ ಬಣ್ಣದ ಲೇಪನ ಮಾಡಿದರು. ಜೋಡುತ್ತುಗಳ ಮೈಗೆ ಬಣ್ಣದ ಲೇಪನವೇ ಜೋರಾಗಿತ್ತು. ಆ ಜೋಡೆತ್ತುಗಳ ಕೊಂಬುಗಳಿಗೆ ಬಲೂನ್ ಕಟ್ಟಿ ವಿಶೇಷವಾಗಿ ಅಲಂಕರಿಸಲಾಗಿತ್ತು.

Body:ಅಗಸೆ ಕಟ್ಟೆಯಿಂದ ಗ್ರಾಮ ದೇವತೆವರೆಗೆ ಜೋಡೆತ್ತುಗಳ ಕರಿ ಹರಿದ ಗ್ರಾಮಸ್ಥರು: ಜಿಲ್ಲೆಯ ಆಯಾ ಗ್ರಾಮಗಳಲ್ಲಿ ಗ್ರಾಮದ ಅದಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಆ ಬಳಿಕ ಜೋಡೆತ್ತುಗಳ ಕರಿಯನ್ನು ಹರಿಬಿಡಲಾಯಿತು.
ಆಯಾ ಗ್ರಾಮಗಳ ಗ್ರಾಮಸ್ಥರೆಲ್ಲರೂ ಎರಡು ಬದಿಯಲ್ಲಿ ನಿಂತುಕೊಂಡೇ ಕೇಕೆ, ಸ್ಹೀಳೆ ಹೊಡೆಯುತ್ತಾ ಜೋಡೆತ್ತುಗಳ
ಕರಿ ಹರಿಬಿಡುವವರನ್ನು ಹುರಿದುಂಬಿಸಿದರು.
ಅಗಸೆ ದ್ವಾರಕ್ಕೆ ಕಟ್ಟಿದ ಬೇವಿನ ಸೊಪ್ಪು: ಆಯಾ ಗ್ರಾಮದ ಅಗಸೆ ಕಟ್ಟೆಗೆ ಬೇವಿನ‌ ಮರದ ಸೊಪ್ಪನ್ನು‌ ಕಟ್ಟಲಾಗಿತ್ತು. ಯಾರು ತನ್ನ ಜೋಡೆತ್ತುಗಳನ್ನು ಮುಂದೆ ಹೊಡೆದುಕೊಂಡು ಬರುತ್ತಾರೋ ಅವರೇ ಈ ಬೇವಿನ ಮರದ ಸೊಪ್ಪನ್ನು ಕೀಳ ಬೇಕು. ಅದುವೇ ಕರಿಯಲ್ಲೇ ವಿಜೇತ ಜೋಡೆತ್ತುಗಳೆಂದು ಗುರುತಿಸುವ ಪ್ರತೀತಿಯಿದೆ.
ಇದು ಪೂರ್ವಿಕರ ಹಬ್ಬ ಸಾಂಪ್ರದಾಯಿಕ ಬಳುವಳಿಯಾಗಿ ಬಂದಿದೆ: ಜೋಡೆತ್ತುಗಳ ಕರಿಬಿಡುವ ಹಬ್ಬವು ಪೂರ್ವಿಕರ ಕಾಲದಿಂದಲೂ ಸಾಂಪ್ರದಾಯಿಕವಾಗಿ ಬಳುವಳಿಯಾಗಿ ಬಂದಿದೆ. ಈ ಹಬ್ಬ ಆಚರಣೆ ಎಂದರೆ ಗ್ರಾಮದ ರೈತರ ಮೊಗದಲ್ಲಿ ಸಂತಸ ತರುತ್ತದೆ ಎಂದು ಸಿರಿವಾರ ಗ್ರಾಮದ ತಿಪ್ಪೇರುದ್ದ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಹೊಳಿಗೆ ನೈವೇದ್ಯ: ಕಾರ ಹುಣ್ಣಿಮೆ ಬಂದರೆ ಸಾಕು. ಎಲ್ಲರ ಮನೆಯಲ್ಲೂ ಹೊಳಿಗೆ ಸಂಭ್ರಮ ಮನೆ ಮಾಡಲಿದೆ. ಅದರಂತೆಯೇ ಈ ದಿನವೂ ಕೂಡ ಹೊಳಿಗೆ ನೈವೇದ್ಯ ಸಂಭ್ರಮವು ಗ್ರಾಮೀಣ ಪ್ರದೇಶದ ಜೋರಾಗಿ ಕಂಡು
ಬಂದಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_05_17_KARA_HUNIVE_VISUALS_7203310

KN_BLY_05d_17_KARA_HUNIVE_VISUALS_7203310

KN_BLY_05e_17_KARA_HUNIVE_VISUALS_7203310

KN_BLY_05f_17_KARA_HUNIVE_VISUALS_7203310

KN_BLY_05g_17_KARA_HUNIVE_BYTE _7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.