ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಬೇಕು ಇವ್ರೀಗೆ. ಆದ್ರೇ ಹಂಪಿ ಉತ್ಸವ ಸಾಂಕೇತಿಕ ಆಚರಣೆ ಯಾವ ಪುರುಷಾರ್ಥಕ್ಕೆ ಬೇಕ್ರೀ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ನಡೆದ ಹಂಪಿ ಉತ್ಸವದ ಸಾಂಕೇತಿಕ ಆಚರಣೆ ವಿರೋಧಿಸಿ ಕರೆದಿದ್ದ ಜಿಲ್ಲೆಯ ಕಲಾವಿದರ ಪೂರ್ವಭಾವಿ ಸಭೆಯಲ್ಲಿ ಪಂಪಾಪತಿ ಮಾತನಾಡಿದರು. ಈ ನಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮತ್ತು ಕಲೆ, ಸಾಹಿತ್ಯದ ಬಗ್ಗೆ ನಿಮಗೇನಾದ್ರೂ ಅರಿವಿದೆಯಾ?. ನಿಮಗೇನಿದ್ದರೇ ಮೈನಿಂಗ್ನದ್ದೇ ಧ್ಯಾನ. ಮಾಜಿ ಡಿಸಿಎಂ ದಿವಂಗತ ಎಂ. ಪಿ. ಪ್ರಕಾಶ್ ಅವರ ಆಶಯದಂತೆ ಈ ಜಿಲ್ಲೆಯ ಬಡ ಕಲಾವಿದರಲ್ಲಿ ಹುದುಗಿರುವ ಕಲಾ ಪ್ರದರ್ಶನಗಳು ಈ ನಾಡಿಗೆ ಪರಿಚಯಿಸೋದಾಗಿತ್ತು. ಆದರೆ, ಇಂದು ಹಂಪಿ ಉತ್ಸವ ಆಚರಣೆಯೇ ಬೇಡ ಎಂಬಂತಾಗಿದೆ. ಕಾಟಾಚಾರದ ಆಚರಣೆ ಇದಾಗಿದೆ. ದೂರದ ಭೂಪಾಲ್ ಸೇರಿದಂತೆ ಪಾಶ್ಚಿಮಾತ್ಯ ಸಂಸ್ಕೃತಿ, ಕಲೆ ಪರಿಚಯಿಸಲು ಲಕ್ಷಾಂತರ ರೂ. ವ್ಯಯ ಮಾಡಲಾಗುತ್ತೆ. ಇದೇನಾ ನಮ್ಮ ಸಂಸ್ಕೃತಿ ಎಂದು ಪಂಪಾಪತಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಸಂಚಾಲಕ ಕೆ. ಜಗದೀಶ್ ಸಹ ಇದೇ ವೇಳೆ ಮಾತನಾಡಿದರು.