ಬಳ್ಳಾರಿ: ಜೆಎಸ್ಡಬ್ಲ್ಯೂ ಫೌಂಡೇಶನ್ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಅಂದಾಜು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ಪೂರೈಕೆ ಮಾಡಲಾಯಿತು.
ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ಪೂರೈಸುವಂತೆ ಸಂಡೂರಿನ ಬಿಇಒ, ಜೆಎಸ್ಡಬ್ಲ್ಯೂ ಫೌಂಡೇಶನ್ ಅನ್ನು ಸಂಪರ್ಕಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಕೋರಿಕೆಗೆ ಜೆಎಸ್ಡಬ್ಲ್ಯೂ ಫೌಂಡೇಶನ್ ತಕ್ಷಣ ಸ್ಪಂದಿಸಿ ಮಾಸ್ಕ್‌ಗಳನ್ನ ಪೂರೈಕೆ ಮಾಡಿದೆ.
ಬಳ್ಳಾರಿ ಜೆಎಸ್ಡಬ್ಲ್ಯೂ ಫೌಂಡೇಶನ್ ನಲ್ಲಿರುವ ಸಿದ್ಧ ಉಡುಪು ತಯಾರಿಕಾ ಘಟಕದಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯರ ಸಹಾಯದಿಂದ ಅಂದಾಜು 8 ಸಾವಿರಕ್ಕೂ ಹೆಚ್ಚು ಫೇಸ್ ಮಾಸ್ಕ್ ಗಳನ್ನು ತಯಾರಿಸಿ, ಶಿಕ್ಷಣ ಇಲಾಖೆಗೆ ಸರಬರಾಜು ಮಾಡಲಾಗಿದೆ.
ಜೊತೆಗೆ ಕೊರೊನಾ ವೈರಸ್ ಹರಡದಂತೆ ಜೆಎಸ್ಡಬ್ಲ್ಯೂ ಫೌಂಡೇಶನ್ ಸ್ಥಾವರದ ಸುತ್ತಲು ಇರುವ 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಾಸಿಸುತ್ತಿರುವ ಸಮು ದಾಯದ ಸದಸ್ಯರಿಗೆ 5,000 ಕ್ಕೂ ಹೆಚ್ಚು ಸ್ಯಾನಿಟೈಸರ್ ಗಳು, 23,000 ಸರ್ಜಿಕಲ್ ಮಾಸ್ಕ್ ಗಳು ಮತ್ತು 52,000 ಬಟ್ಟೆಯ ಮಾಸ್ಕ್ ಗಳನ್ನು ಜೆಎಸ್ಡಬ್ಲ್ಯೂ ವಿತರಿಸಿದೆ.