ETV Bharat / state

ಸಚಿವ ಶ್ರೀರಾಮುಲುಗೆ ಬಿಗ್ ಶಾಕ್... ಡಿಸಿಎಂ ಆಕಾಂಕ್ಷಿ ವಿರುದ್ಧ ಸರ್ಕಾರಿ ಭೂಮಿ‌ ಕಬಳಿಕೆ ಆರೋಪ - b sriramulu Allegation of land use

ಡಿಸಿಎಂ ನಿರೀಕ್ಷೆಯಲ್ಲಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಬಿಗ್ ಶಾಕ್ ಎದುರಾಗಿದೆ. ಸರ್ಕಾರಿ ಭೂ ಕಬಳಿಕೆ ಮಾಡಿರುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ಸಚಿವ ಬಿ. ಶ್ರೀರಾಮುಲು
ಸಚಿವ ಬಿ. ಶ್ರೀರಾಮುಲು
author img

By

Published : Dec 17, 2019, 4:47 PM IST

Updated : Dec 17, 2019, 6:21 PM IST

ಬಳ್ಳಾರಿ: ಡಿಸಿಎಂ ನಿರೀಕ್ಷೆಯಲ್ಲಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಬಿಗ್ ಶಾಕ್ ಎದುರಾಗಿದೆ. ಮಗಳ ನಿಶ್ಚಿತಾರ್ಥದ ಸಂಭ್ರಮದಲ್ಲಿರೋ ಅವರು, ಇದೀಗ ಸರ್ಕಾರಿ ಭೂಮಿ‌ ಕಬಳಿಕೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

ಬಳ್ಳಾರಿ ಹೊರವಲಯದಲ್ಲಿರುವ ಜಮೀನನ್ನು ಕಬಳಿಸಿದ ಆರೋಪ ಎದುರಾಗಿದ್ದು, ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡಿದೆ.

2008ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀರಾಮುಲು, ಕೌಲ್ ಬಜಾರ್ ಪ್ರದೇಶದ 57 ಎಕೆರೆ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತಾಗಿ ನಿವೇಶನ ಕಳೆದುಕೊಂಡಿರುವ ಜಿ.ಕೃಷ್ಣಮೂರ್ತಿ ಎಂಬುವರು ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಸಚಿವ ಬಿ. ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಆರೋಪ

ಇನ್ನು ಈ ಕುರಿತಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಎನ್.ನಾರಾಯಣ ನೇತೃತ್ವದ ಪೀಠ, ಈ ಸಂಬಂಧ ಸಮಗ್ರ ವರದಿ ನೀಡುವಂತೆ, ಬಳ್ಳಾರಿಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

Intro:ಸಚಿವ ಶ್ರೀರಾಮುಲುಗೆ ಎದುರಾದ ಭೂಕಬಳಿಕೆ ಕಟಂಕ..!
ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ಬಿ.ಶ್ರೀರಾಮುಲುಗೆ ಭೂಕಬಳಿಕೆ ಕಂಟಕ ಶುರುವಾಗಿದೆ.‌ ಮಗಳ ನಿಶ್ಚಿತಾರ್ಥ ಸಮಾರಂಭದ ಸಂಭ್ರಮದಲ್ಲಿರೊ ಶ್ರೀರಾಮುಲು ಅವರೀಗ ಸರ್ಕಾರಿ ಭೂಮಿ‌ ಕಬಳಿಕೆ ಮಾಡಿರೊ ಆರೋಪವನ್ನು ಎದುರಿಸುತ್ತಿದ್ದಾರೆ.
ಬೆಂಗಳೂರಿನ ನ್ಯಾಯಾಲಯವು ಸ್ವಯಂ ಪ್ರೇರಣೆಯಿಂದ
ಪ್ರಕರಣ ದಾಖಲಿಸಿಕೊಂಡಿರೋದು ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದ ಡಿಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರೊ ಸಚಿವ
ಬಿ.ಶ್ರೀರಾಮುಲು ಅವರ ರಾಜಕೀಯ ಉನ್ನತೀಕರಣಕ್ಕೆ ಈ ಭೂ ಕಬಳಿಕೆ ಪ್ರಕರಣವು ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ.
2008ನೇಯ ಇಸವಿಯಲ್ಲಿ 57 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆಂಬ ಆರೋಪ ಎದುರಾಗಿದ್ದು, ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
Body:ನ್ಯಾಯಮೂರ್ತಿ ಎಚ್.ಎನ್ ನಾರಾಯಣ ನೇತೃತ್ವದ ಪೀಠದಿಂದ ಸಮಗ್ರ ವರದಿ ನೀಡುವಂತೆ, ಬಳ್ಳಾರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. 2008 ರಲ್ಲಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಪ್ರತಿನಿಧಿಸಿದ್ದಾಗ ಸರ್ಕಾರಿ ಹಾಗೂ ಖಾಸಗಿ ಒಡೆತನದ ಸುಮಾರು 57 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆಂದು, ನಿವೇಶನ ಕಳೆದುಕೊಂಡಿದ್ದ ಹಿರಿಯ ನಾಗರಿಕ ಕೃಷ್ಣಮೂರ್ತಿ ಖಾಸಗಿ ದೂರು ದಾಖಲಿಸಿದ್ದರು. ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ 57 ಎಕರೆ ಜಮೀನನ್ನು ಕಬಳಿಕೆ ಮಾಡಿದ್ದಾರೆಂಬ ಆರೋಪ ಇರೋ ಕಾರಣ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.‌

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_MINISTER_SREERAMULU_LAND_KABALIKE_CMPLT_NEWS_7203310
Last Updated : Dec 17, 2019, 6:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.