ETV Bharat / state

ಅಂತಾರಾಜ್ಯ ಬೈಕ್ ಕಳ್ಳನ ಬಂಧನ.. 11 ದ್ವಿಚಕ್ರ ವಾಹನ ವಶಕ್ಕೆ..

ಕಳ್ಳನ ಪತ್ತೆಗಾಗಿ ಡಿವೈಎಸ್​ಪಿ ಹೆಚ್ ಬಿ ರಮೇಶ್‌ಕುಮಾರ್, ಬ್ರೂಸ್‌​ಪೇಟೆ ಠಾಣೆಯ ಇನ್ಸ್​ಪೆಕ್ಟರ್ ಆರ್.ನಾಗರಾಜ, ಎಪಿಎಂಸಿ ಠಾಣೆಯ ಪಿಎಸ್​​ಐ ಪರಶುರಾಮ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಇದೀಗ ಪೊಲೀಸರ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ..

Interstate bike theft arrested in Bellary
ದ್ವಿಚಕ್ರ ವಾಹನ ಕಳ್ಳತನ
author img

By

Published : Sep 11, 2021, 7:56 PM IST

ಬಳ್ಳಾರಿ : ಅಂತಾರಾಜ್ಯ ಕಳ್ಳನನ್ನು ಬಂಧಿಸಿ 11 ದ್ವಿಚಕ್ರ ವಾಹನವನ್ನು ನಗರದ ಎಪಿಎಂಸಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಾತಣ್ಣ ಬಂಧಿತ ಆರೋಪಿ.

ನಗರದ ಆಂದ್ರಾಳು ವೃತ್ತದಿಂದ ಬೊಮ್ಮನಾಳು ರಸ್ತೆಯಲ್ಲಿ ಪೊಲೀಸ್ ಜೀಪ್​​ ತೆರಳುತ್ತಿದ್ದ ವೇಳೆ ಪಾತಣ್ಣ ಪೊಲೀಸರನ್ನ ಕಂಡು ಗಲಿಬಿಲಿಯಿಂದ ಬೈಕ್​​ನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದ್ದರು.

ಈ ವೇಳೆ ಹಲವು ಕಡೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಬಳ್ಳಾರಿ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ-03, ಬ್ರೂಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ-03, ಕೌಲಬಜಾರ್ ಠಾಣಾ ವ್ಯಾಪ್ತಿಯಲ್ಲಿ-03, ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ-02 ಬೈಕ್ ಕಳ್ಳತನ‌ ಮಾಡಿದ್ದ. ಅಲ್ಲದೆ ಹೊರ ರಾಜ್ಯದಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳ್ಳನ ಪತ್ತೆಗಾಗಿ ಡಿವೈಎಸ್​ಪಿ ಹೆಚ್ ಬಿ ರಮೇಶ್‌ಕುಮಾರ್, ಬ್ರೂಸ್‌​ಪೇಟೆ ಠಾಣೆಯ ಇನ್ಸ್​ಪೆಕ್ಟರ್ ಆರ್.ನಾಗರಾಜ, ಎಪಿಎಂಸಿ ಠಾಣೆಯ ಪಿಎಸ್​​ಐ ಪರಶುರಾಮ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಇದೀಗ ಪೊಲೀಸರ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಓದಿ: ಹಾಡಹಗಲೇ ಲಾಂಗು - ಮಚ್ಚು ತೋರಿಸಿ ದರೋಡೆ.. 2 ಗ್ಯಾಂಗ್​​ನ 8 ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.