ಬಳ್ಳಾರಿ: ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಪೌರ ರಕ್ಷಣಾ ಘಟಕವನ್ನು ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ.ಎಂ.ಪ್ರಸಾದ್ ಇಂದು ಉದ್ಘಾಟಿಸಿದರು.
ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದ ಬಳಿ ಇರುವ ಗೃಹರಕ್ಷಕ ದಳದ ಕಚೇರಿಯ ಆವರಣದಲ್ಲಿ ಗಿಡ ನೆಡುವ ಮೂಲಕ ಪೌರ ರಕ್ಷಣಾ ಘಟಕಕ್ಕೆ ಚಾಲನೆ ನೀಡಿದ ಎ.ಎಂ.ಪ್ರಸಾದ್, ಪೌರ ರಕ್ಷಣಾ ಘಟಕದ ಸ್ವಯಂ ಸೇವಕರ ಜೊತೆ ಸಮಾಲೋಚನೆ ನಡೆಸಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು.
ಇದಾದ ಬಳಿಕ ಬಳ್ಳಾರಿ ತಾಲೂಕಿನ ಮೀನಳ್ಳಿ ಗ್ರಾಮದಲ್ಲಿರುವ ಗೃಹ ರಕ್ಷಕ ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ತರಬೇತಿ ಕೇಂದ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ತರಬೇತಿ ಕೇಂದ್ರದಲ್ಲಿ ನೀಡುವ ತರಬೇತಿ ಕುರಿತು ಮಾಹಿತಿ ಪಡೆದರು.