ಹೊಸಪೇಟೆ: ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಕೊಲೆ, ದರೋಡೆ, ಸರಗಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಗಳ ವಿಚಾರಣೆಯನ್ನು ಡಿವೈಎಸ್ಪಿ ರಘುಕುಮಾರ ನಡೆಸಿದರು.
ನ್ಯಾಯಯುತವಾದ ಜೀವನವನ್ನು ನಡೆಸಬೇಕು. ಪೊಲೀಸರು ವಿಚಾರಣೆಗೆ ಬಂದಾಗ ಸಹಕರಿಸಬೇಕು. ಪ್ರಸ್ತುತ ಯಾವ ಕೆಲಸ ಮಾಡುತ್ತಿದ್ದೀರಿ? ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
100ಕ್ಕೂ ಹೆಚ್ಚು ರೌಡಿಶೀಟರ್ಗಳು ಪೊಲೀಸ್ ಠಾಣೆ ಆವರಣದಲ್ಲಿ ಜಮಾವಣೆಗೊಂಡಿದ್ದರು.