ಹೊಸಪೇಟೆ(ವಿಜಯನಗರ) : ನಿನ್ನೆರಾತ್ರಿ ಓರ್ವ ಯುವಕ ತನ್ನ ಮೊಬೈಲ್ ವಾಟ್ಸಪ್ ಸ್ಟೇಟಸ್ನಲ್ಲಿ ವಿವಾದಿತ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಗಲಾಟೆ ರಂಭವಾಗಿದೆ. ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಈಗಾಗಲೇ ಪೋಸ್ಟ್ ಹಾಕಿದ್ದ ಆರೋಪಿ ಸೇರಿದಂತೆ ಹಲವರ ಬಂಧನವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಕೈಗೆತ್ತಿಕೊಳ್ಳುವರನ್ನು ಬಿಡುವ ಮಾತೇ ಇಲ್ಲ, ಯಾವುದೇ ಧರ್ಮದವರಾಗಲಿ ಅವರನ್ನು ಬಿಡುವುದಿಲ್ಲ. ಇದೊಂದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಾಣುತ್ತೆ. ನನಗೆ ಬಂದ ಮಾಹಿತ ಪ್ರಕಾರ ಅಲ್ಲಿ ಮೊದಲೇ ಕಲ್ಲು ಸಂಗ್ರಹ ಮಾಡಿದ್ದಾರೆ. ನಾಲ್ಕು ಜನ ಪೊಲೀಸ್ ಹಾಗು ಕೆಲ ಸಿಬ್ಬಂದಿಗೆ ಗಾಯವಾಗಿದೆ. ಓರ್ವ ಪಿಎಸ್ಐ ಅವರಿಗೆ ಗಂಭೀರ ಗಾಯ ಆಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಆಕ್ಷೇಪಾರ್ಹ ಪೋಸ್ಟ್ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ
ಇದೊಂದು ಕೆ ಜಿ ಹಳ್ಳಿ ಡಿ ಜೆ ಹಳ್ಳಿ ತರವಾದ ಘಟನೆ. ಅದೇ ರೀತಿಯಲ್ಲಿ ವ್ಯವಸ್ಥಿತವಾಗಿ ಸಂಚು ನಡೆದಿದೆ. ಗಲಾಟೆ ಮಾಡಲೆಂದು ಅಲ್ಲಿ ಮೊದಲ ಕಲ್ಲು ಸಂಗ್ರಹ ಮಾಡಿದ್ದರು. ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದಿದೆ, ಹೆಚ್ಚಿನ ಪೊಲೀಸ್ ಫೋರ್ಸ್ಅನ್ನು ಅಲ್ಲಿಗೆ ಕಳಿಸಲಾಗಿದೆ ಎಂದು ತಿಳಿಸಿದರು.