ವಿಜಯನಗರ: ಹಿಟ್ ಆ್ಯಂಡ್ ರನ್ ಗೆ ಇಬ್ಬರು ರೈತರು ಬಲಿಯಾದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದಿಂದ ಬೆಣ್ಣಿಕಲ್ಲು ರಸ್ತೆ ಮಾರ್ಗಮಧ್ಯೆ ನಡೆದಿದೆ. ಕೋಗಳಿ ತಾಂಡಾ ನಿವಾಸಿಗಳಾದ ಟೀಕ್ಯಾ ನಾಯ್ಕ( 51) ಹಾಗೂ ನೀಲ್ಯಾ ನಾಯ್ಕ (55) ಮೃತ ರೈತರು. ಬೆಳಗಿನ ಜಾವ ಹೊಲದಲ್ಲಿ ನೀರು ಹಾಯಿಸಲು ಬೈಕ್ನಲ್ಲಿ ಹೊಲಕ್ಕೆ ಹೋಗುವ ವೇಳೆ ಅಪಘಾತಗೊಂಡು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿಜಯನಗರ ಎಸ್ಪಿ ಶ್ರೀಹರಿಬಾಬು, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮೈಲಾಪುರ, ಹಗರಿಬೊಮ್ಮನಹಳ್ಳಿ ಸಿಪಿಐ ಟಿ.ಮಂಜಣ್ಣ, ಪಿಎಸ್ಐ ಸರಳ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಪರಿಶೀಲನೆ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಘಟಿಸುತ್ತಿರುವ ಅಪಘಾತ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಐಜಿ ರವಿಕಾಂತೇ ಗೌಡ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಅತೀ ಹೆಚ್ಚು ಅಪಘಾತ ನಡೆಯುತ್ತಿದ್ದ ಕುಂಬಲಗೂಡು ನೈಸ್ ರಸ್ತೆ ಬಿ. ಪಾಳ್ಯ ಬಳಿ ರಸ್ತೆ ಪರಿಶೀಲನೆ ನಡೆಸಿದರು. ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಅಪಘಾತಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ಪಿಡಿ ರಾಹುಲ್ ಕುಮಾರ್ ಗುಪ್ತ ಮಾಹಿತಿ ನೀಡಿದರು.
ಇದುವರೆಗೂ ದಶಪಥ ಹೆದ್ದಾರಿ ಪ್ರಾರಂಭವಾದಾಗಿನಿಂದ 158 ಕ್ಕೂ ಹೆಚ್ಚು ಸಾವು, 568 ಅಪಘಾತದಲ್ಲಿ ಗಾಯಾಳುಗಳಾಗಿದ್ದರು. ಸದ್ಯ ಅಪಘಾತ ತಡೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು, ಅವೈಜ್ಞಾನಿಕ ರಸ್ತೆ ನಿರ್ಮಾಣದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದುಕೊಂಡಿದ್ದಾರೆ.
ಅಪಘಾತಕ್ಕೆ ಕಡಿವಾಣ ಹಾಕಬೇಕಿದೆ: ಇತ್ತೀಚೆಗೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇಯ ಮಂಡ್ಯ ಜಿಲ್ಲೆಯ ಗೆಜ್ಜನಕೆರೆ ಬಳಿ ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನ್ಪಿದ ಘಟನೆ ನಡೆದಿತ್ತು. ಹೊಸ ಹೆದ್ದಾರಿ ಪ್ರಾರಂಭವಾದ ದಿನದಿಂದಲೂ ಪ್ರತಿ ವಾರಕ್ಕೆ ಒಂದೆರಡು ಅಪಘಾತಗಳು ನಡೆಯುತ್ತಲೇ ಇವೆ. ದಿನದಿಂದ ದಿನಕ್ಕೆ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತ;ಏ ಇದ್ದರೂ ಕೂಡ ಯಾರು ಇತ್ತ ಗಮನ ಹರಿಸುತ್ತಲೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖುದ್ದು ದಶಪಥ ಹೆದ್ದಾರಿ ಪರಿಶೀಲನೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ರಸ್ತೆಯಲ್ಲಿ ಚಲಿಸುವುದರೊಂದಿಗೆ ಹಾಗೂ ಸ್ಥಳೀಯರೊಂದಿಗೆ ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Mandya Accident: ಮಂಡ್ಯದ ಗೆಜ್ಜನಗೆರೆ ಬಳಿ ಕಾರುಗಳ ನಡುವೆ ಅಪಘಾತ; ಸ್ಥಳದಲ್ಲೇ ಮೂವರು ಸಾವು