ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.
ಕೂಡ್ಲಿಗಿ ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ಕೂಡ್ಲಿಗಿ-15.7ಮಿ.ಮೀ., ಕೊಟ್ಟೂರು-29.8 ಮಿ.ಮೀ., ಖಾನಾ ಹೊಸಳ್ಳಿ- 5.2 ಮಿ.ಮೀ., ಗುಡೇಕೋಟೆ- 23.1 ಮಿ.ಮೀ., ಬಣವಿಕಲ್ಲು - 31.4 ಮಿ.ಮೀ., ಚಿಕ್ಕ ಜೋಗಿಹಳ್ಳಿ - 5.4 ಮಿ.ಮೀ. ಮಳೆಯಾಗಿದೆ.
ಸಕಾಲದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಇದೀಗ ಆಶಾಭಾವನೆ ಮೂಡಿದೆ. ಈಗಾಗಲೇ ಸಣ್ಣಪುಟ್ಟ ಕೆರೆ - ಕಟ್ಟೆಗಳು ತುಂಬಿವೆ. ದೊಡ್ಡ ಕೆರೆಗಳು ತುಂಬಲು ಇನ್ನಷ್ಟು ಮಳೆಯ ಅಗತ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಆದರೆ ಈ ದೊಡ್ಡಮಟ್ಟದ ಕೆರೆ-ಕಟ್ಟೆಗಳು ತುಂಬುವ ನಿರೀಕ್ಷೆಯಲ್ಲಿ ಕೂಡ್ಲಿಗಿ ತಾಲೂಕಿನ ರೈತರಿದ್ದಾರೆ.
ಈ ಮಳೆಯಿಂದ ಕೆಲ ಬೆಳೆಗಳಿಗೆ ವರದಾನವಾದ್ರೆ, ಇನ್ನೂ ಕೆಲ ಬೆಳೆಗಳ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬುಧವಾರ ಹಾಗೂ ಗುರುವಾರದಂದು ಸುರಿದ ಮಳೆ ಕೂಡ್ಲಿಗಿ ತಾಲೂಕಿನ ರೈತರಲ್ಲಿ ಮಂದಹಾಸ ಮೂಡಿಸಿದೆ.