ETV Bharat / state

ಹಚ್ಚ ಹಸಿರು ಹೊದ್ದು ಮಲಗಿದ ಗಣಿನಾಡು: ಎಲ್ಲೆಡೆ ಮಂಜು ಮೋಡಗಳ ಚೆಲ್ಲಾಟ - ಕೃಷಿ ಚಟುವಟಿಕೆ

ಬಿಸಿಲ ನಗರಿ ಬಳ್ಳಾರಿ ಮೂರ್ನಾಲ್ಕು ದಿನಗಳಿಂದ ಅಕ್ಷರಶಃ ಮಲೆನಾಡಿನಂತೆ ಕಂಗೊಳಿಸುತ್ತಿದೆ. ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ತುಂತುರು ಮಳೆಯಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಜೀವನದಿಗಳು ಧುಮ್ಮಿಕ್ಕುತ್ತಿವೆ.

ಗಣಿನಾಡು ಬಳ್ಳಾರಿಯಲ್ಲಿ ಮಳೆಯ ರಿಂಗಣ
author img

By

Published : Sep 24, 2019, 12:12 PM IST

ಬಳ್ಳಾರಿ: ಬಿರು ಬಿಸಿಲಿಗೆ ಹೆಸರುವಾಸಿಯಾದ ಬಳ್ಳಾರಿ ಜಿಲ್ಲೆ ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಂತೆ ಕಂಗೊಳಿಸುತ್ತಿದೆ.

ಗಣಿನಾಡು ಬಳ್ಳಾರಿಯಲ್ಲಿ ಮಳೆಯ ರಿಂಗಣ, ರೈತಾಪಿ ವರ್ಗದಲ್ಲಿ ಸಂಭ್ರಮ

ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕರಿಮೋಡಗಳ ಚೆಲ್ಲಾಟ ಜೋರಾಗಿದೆ. ಬೆಟ್ಟ, ಗುಡ್ಡಗಳಲ್ಲಿ ಗಣಿಧೂಳಿಗೆ ಬದಲಾಗಿ ಹಚ್ಚ ಹಸಿರಿನ ಚಿಗುರು ಮೂಡುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ರೈತಾಪಿ ವರ್ಗದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗುವ ಸಂಶಯವಿತ್ತು. ಆದರೆ, ಜಲಾನಯನ ಪ್ರದೇಶಗಳಲ್ಲಾದ ಮಳೆಯಿಂದ, ಜಲಾಶಯದೊಡಲು ತುಂಬುತ್ತಿದೆ.

ಭಾರಿ ಮಳೆಯಿಂದಾಗಿ ಇಲ್ಲಿನ ಕುಡಿತಿನಿ ಬಳಿ ಇರುವ ದರೋಜಿ ಕೆರೆ ಕೂಡ ಬಹುತೇಕ ಭರ್ತಿಯಾಗಿದೆ.

ಬಳ್ಳಾರಿ: ಬಿರು ಬಿಸಿಲಿಗೆ ಹೆಸರುವಾಸಿಯಾದ ಬಳ್ಳಾರಿ ಜಿಲ್ಲೆ ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಂತೆ ಕಂಗೊಳಿಸುತ್ತಿದೆ.

ಗಣಿನಾಡು ಬಳ್ಳಾರಿಯಲ್ಲಿ ಮಳೆಯ ರಿಂಗಣ, ರೈತಾಪಿ ವರ್ಗದಲ್ಲಿ ಸಂಭ್ರಮ

ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕರಿಮೋಡಗಳ ಚೆಲ್ಲಾಟ ಜೋರಾಗಿದೆ. ಬೆಟ್ಟ, ಗುಡ್ಡಗಳಲ್ಲಿ ಗಣಿಧೂಳಿಗೆ ಬದಲಾಗಿ ಹಚ್ಚ ಹಸಿರಿನ ಚಿಗುರು ಮೂಡುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ರೈತಾಪಿ ವರ್ಗದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗುವ ಸಂಶಯವಿತ್ತು. ಆದರೆ, ಜಲಾನಯನ ಪ್ರದೇಶಗಳಲ್ಲಾದ ಮಳೆಯಿಂದ, ಜಲಾಶಯದೊಡಲು ತುಂಬುತ್ತಿದೆ.

ಭಾರಿ ಮಳೆಯಿಂದಾಗಿ ಇಲ್ಲಿನ ಕುಡಿತಿನಿ ಬಳಿ ಇರುವ ದರೋಜಿ ಕೆರೆ ಕೂಡ ಬಹುತೇಕ ಭರ್ತಿಯಾಗಿದೆ.

Intro:ಹಚ್ಚ ಹಸಿರು ಹೊದ್ದ ಗಣಿನಾಡು: ಎಲ್ಲೆಡೆ ಹಿಮದ ಕಾರ್ಮೋಡ
ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ಎಂದರೆ ಬಿರುಬಿಸಿಲಿಗೆ ಹೆಸರುವಾಸಿ. ಇಲ್ಲಿ ಚಾಲ್ತಿರೋದು ಎರಡೇ ಕಾಲ.‌ ಬೇಸಿಗೆ, ಅತಿಯಾದ ಬೇಸಿಗೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಗಣಿನಾಡು ಮಲೆನಾಡಿ ನಂತೆ ಕಂಗೊಳಿಸುತ್ತಿದೆ.
ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಆವರಿಸಿದೆ. ಹಿಮದ ಕಾರ್ಮೋಡವೂ ಇದೆ. ಇಲ್ಲಿನ ಬೆಟ್ಟ, ಗುಡ್ಡ ಗಳಲ್ಲಿ ಗಣಿಧೂಳಿನ ಚಹರೆ ಹರಡಿಕೊಂಡಿತ್ತಾದರೂ, ಆದರೀಗ ಧಾರಾಕಾರ ಹಾಗೂ ತುಂತುರ ಮಳೆ ಸುರಿಯಲಾರಂಭಿಸಿದ್ದರಿಂದ ಬೆಟ್ಟ, ಗುಡ್ಡಗಳಲ್ಲಿನ ಗಿಡ, ಮರಗಳು ಹಚ್ಚ ಹಸಿರಿನಿಂದ ಕಂಗೊಳಿ ಸುತ್ತಿವೆ.
ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಸುರಿಯದ ಕಾರಣ, ಭೀಕರ ಬರಗಾಲಕ್ಕೆ ತುತ್ತಾಗಿದ್ದ ಗಣಿಜಿಲ್ಲೆ ಈಗ ಸಂವೃದ್ಧಿಯತ್ತ ಸಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ನೆರೆ ಹಾವಳಿ ಎದುರಾದ್ರೆ ಇತ್ತ ಗಣಿ ಜಿಲ್ಲೆಯಲ್ಲಿ ಸುರಿಯುವ ಮಳೆಯಿಂದಾಗಿ ಬೆಳೆನಷ್ಟದ ಭೀತಿಯನ್ನು ಎದುರಿಸುವಂತಾಗಿದೆ.
ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾಗೋದೇ ಸಂಶಯವಿತ್ತಾದರೂ, ಅದು ಕೂಡ ನಿರೀಕ್ಷೆಯ ಪ್ರಮಾಣದಲ್ಲಿ ತುಂಬಿಹರಿಯಿತು. ಮತ್ತೊಂದೆಡೆ ಮಳೆಯಾಶ್ರಿತ ಕೃಷಿಕರು ಬಾರದ ಮಳೆಯನ್ನು ಕಾದುಕುಳಿತ ಪೇಚೆಗೆ ಸಿಲುಕಿ ಕೊಂಡು ತುಂಗಭದ್ರಾ ಜಲಾಶಯದಿಂದ ಎಡ ಹಾಗೂ ಬಲದಂಡೆ ಕೆಳ- ಮೇಲ್ಮಟ್ಟದ ಉಪಕಾಲುವೆಗಳಿಗೆ ಹರಿಬಿಡುವ ನೀರನ್ನೇ ನೆಚ್ಚಿಕೊಂಡೇ ಕುಳಿತಿದ್ದರು. ಆದರೀಗ ಅದೆಲ್ಲವನ್ನೂ ಈ ಮಳೆ ಹುಸಿಯಾಗಿಸಿದೆಯಾದ್ರೂ, ವಿಪರೀತ ಮಳೆ ಸುರಿದ ಕಾರಣ ಜಿಲ್ಲೆಯ ಹಳ್ಳ, ಕೊಳ್ಳಗಳು ತುಂಬಿ ಹರಿಯುವ ಮುಖೇನ ಜನಜೀವನ ದುಸ್ತರವನ್ನಾಗಿಸಿದೆ. ಕೆಲ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಂತಿರುವ ಸೇತುವೆಗಳ ಮೇಲೆಲ್ಲಾ ಮಳೆಯ ನೀರು ಹರಿದು ಕೃಷಿ ಚಟುವಟಿಕೆಗೂ ಅಡ್ಡಿಯುಂಟು ಮಾಡಿದೆ.
Body:ದರೋಜಿ ಕೆರೆ ಭರ್ತಿ: ಜಿಲ್ಲೆಯ ಕುಡಿತಿನಿ ಬಳಿಯಿರುವ ದರೋಜಿ ಕೆರೆಯೂ ಕೂಡ ಬಹುತೇಕ ಭರ್ತಿಯಾಗದಿರೋದು ಆಯಾ ಗ್ರಾಮಸ್ಥರ ಆತಂಕಕ್ಕೀಡು ಮಾಡಿತ್ತಾದ್ರೂ ಆದರೀಗ ಅದು‌ ಕೂಡ ಭರ್ತಿಯಾಗಿದೆ. ಅದರಿಂದ ಸುತ್ತಲಿನ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲೂ ಈ ತುಂತುರು ಮಳೆ ಮುಂದುವರಿದಿದೆ. ಸಮರ್ಪಕ‌ ನೀರುಣಿಸದೇ ಬಹುತೇಕ ಬೆಳೆಗಳು ವಿನಾಶದ ಅಂಚಿನಲ್ಲಿದ್ದವು. ಆದರೆ, ಹೊಲ, ಗದ್ದೆಗಳಲ್ಲಿ ಈ ಮಳೆ ನೀರು ಸಂಗ್ರಹಗೊಂಡಿದ್ದರಿಂದ ಹಚ್ಚಹಸಿರು ಹೊದ್ದು ನಿಂತಿದೆ. ಎಲ್ಲೆಡೆ ಹಿಮದ ಕಾರ್ಮೋಡವೂ ಹರಡಿಕೊಂಡಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HEAVY_RAIN_NEWS_VISUALS_7203310

KN_BLY_1a_HEAVY_RAIN_NEWS_VISUALS_720331
0

KN_BLY_1b_HEAVY_RAIN_NEWS_VISUALS_7203310

KN_BLY_1c_HEAVY_RAIN_NEWS_VISUALS_7203310

KN_BLY_1d_HEAVY_RAIN_NEWS_VISUALS_7203310

KN_BLY_1e_HEAVY_RAIN_NEWS_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.