ETV Bharat / state

ಸಾಮಾಜಿಕ ಜಾಲತಾಣ ಬಳಸಿ ಎರಡೇ ಗಂಟೆಯಲ್ಲಿ ಮಗುವನ್ನು ತಂದೆ ಮಡಿಲಿಗೆ ಒಪ್ಪಿಸಿದ ಪೊಲೀಸರು - ಸಾಮಾಜಿಕ ಜಾಲತಾಣ ಬಳಸಿ ಪೋಷಕರ ಪತ್ತೆ

ಹರಪನಹಳ್ಳಿ ಪಟ್ಟಣದ ಹಳೇ ಬಸ್​​ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಮಗುವನ್ನು ಸಾಮಾಜಿಕ ಜಾಲತಾಣ ಬಳಸಿ ಮರಳಿ ಪೋಷಕರಿಗೆ ಒಪ್ಪಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

police-handed-over-the-baby-to-the-father-in-two-hours-using-the-social-network
ಹರಪನಹಳ್ಳಿ ಪೊಲೀಸರು
author img

By

Published : Aug 29, 2021, 7:24 PM IST

ಹೊಸಪೇಟೆ (ವಿಜಯನಗರ): ನಗರದಲ್ಲಿ ಪತ್ತೆಯಾಗಿದ್ದ ಮಗುವನ್ನು ಪೊಲೀಸರು ಸಾಮಾಜಿಕ ಜಾಲತಾಣ ಬಳಸಿ ಮರಳಿ ಪೋಷಕರಿಗೆ ಒಪ್ಪಿಸಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಭಾನುವಾರ ನಡೆಯಿತು.

ಪಾಲಕರಿಂದ ತಪ್ಪಿಸಿಕೊಂಡಿದ್ದ ಶ್ರೀನಿಧಿ ಎನ್ನುವ ಎರಡು ವರ್ಷದ ಹೆಣ್ಣು ಮಗು ಹರಪನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಕೆಲವು ಯುವಕರು ಮಗುವನ್ನು ಪೊಲೀಸ್ ಠಾಣೆಗೆ ಕರೆ ತಂದು ಪೊಲೀಸರಿಗೆ ಒಪ್ಪಿಸಿದ್ದರು.

ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದರು. ವ್ಯಾಟ್ಸಾಪ್ ಗ್ರೂಪ್​ಗಳಿಗೆ ಪಿಎಸ್​ಐ ಸುಪರ್ದಿಯಲ್ಲಿದ್ದ ಮಗುವಿನ ಭಾವಚಿತ್ರವನ್ನು ಹರಿಬಿಟ್ಟಿದ್ದರು. ಬಾಲಕಿಯ ಫೋಟೋ ಗ್ರೂಪ್‌ನಿಂದ ಗ್ರೂಪ್​ಗಳಿಗೆ ಹರಿದಾಡಿದ ಕೇವಲ ಎರಡು ಗಂಟೆ ಅವಧಿಯಲ್ಲಿ ಬಾಲಕಿಯ ತಂದೆ ಮಂಜುನಾಥ ಠಾಣೆಗೆ ಆಗಮಿಸಿ ಮಗುವನ್ನು ಪಡೆದುಕೊಂಡರು.

ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ನಾಗರಾಜ್ ಕಮ್ಮಾರ್ ಮಾರ್ಗದರ್ಶನದಲ್ಲಿ ಪಿಎಸ್​ಐ ಸಿ.ಪ್ರಕಾಶ್ ನೇತೃತ್ವದಲ್ಲಿ ಮಹಿಳಾ ಪೊಲೀಸ್ ವೀಣಾ, ಪೊಲೀಸ್ ಪೇದೆ ಕೂಲಹಳ್ಳಿ ಕೊಟ್ರೇಶ್ ತಂಡ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಕೇವಲ ಎರಡು ತಾಸಿನಲ್ಲಿ ಮಗುವನ್ನು ಪೋಷಕರಿಗೆ ಒಪ್ಪಿಸಿದ ಹರಪನಹಳ್ಳಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.