ಹೊಸಪೇಟೆ (ವಿಜಯನಗರ): ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಠಾಧೀಶರು ಯಡಿಯೂರಪ್ಪನವರ ಚೇಲಾಗಳು ಅಂತಾ ಪದ ಬಳಸಿದ್ದಾರೆ. ನಿಮ್ಮನ್ನ ಪಕ್ಷದಿಂದ ಹೊರ ಹಾಕಿದಾಗ ನೀವು ಯಡಿಯೂರಪ್ಪನವರ ಚೇಲಾಗಳಾಗಿದ್ದಿಲ್ಲವೇ ಎಂದು ವಿಜಯನಗರದ ಹಿರೇಹಡಗಲಿಯ ಹಾಲಸ್ವಾಮಿ ಮಠದ ಹಾಲಸ್ವಾಮೀಜಿಗಳು ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಮಠಾಧೀಶರ ಬಗ್ಗೆ ಶಾಸಕ ಬಸವನಗೌಡ ಯಾತ್ನಾಳ್ ಹಗುರವಾಗಿ ಹೇಳಿಕೆ ನೀಡಿದ್ದ ಕುರಿತು ಮಾತನಾಡಿದ ಅವರು, ನೀವು ಚೇಲಾಗಾಳಾಗಿದ್ದಕ್ಕೆ ನಿಮಗೆ ಆ ಪರಿಕಲ್ಪನೆ ಇದೆ. ಯಡಿಯೂರಪ್ಪರನ್ನು ಒಂದು ಕಾಲದಲ್ಲಿ ದೇವರು ಅಂತಾ ನೀವೇ ಪೂಜೆ ಮಾಡ್ತಿದ್ರಿ. ಈಗ ಹಗುರವಾಗಿ ಮಾತಾಡೋದು ಎಷ್ಟು ಸರಿ.
ನಾವು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದೇವೆ ಎಂಬುದಕ್ಕೆ ನೀವು ಮಠಾಧೀಶರ ಬಗ್ಗೆ ಹೀಗೆ ಮಾತನಾಡುತ್ತೀರಿ. ಮಠಾಧೀಶರನ್ನ ಹಿಡಿದು ಮಂತ್ರಿಗಳು, ಮುಖ್ಯಮಂತ್ರಿಗಳಾಗೋ ಕಾಲ ಬಂತು ಅಂತಾರೆ, ಇದೆಲ್ಲಾ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನೀವು ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಿಮಗೆ ಮಠಗಳು ಬೇಕು, ಈಗ ಬೇಡ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲು ನೀವು ಮಠಗಳಿಗೆ ಬರೋದನ್ನು ಬಿಡಿ. ಮತಗಳು ಕೇಳೋ ಟೈಮ್‌ನಲ್ಲಿ ಮಠಗಳು ಬೇಕು, ಈಗ ಮಠಗಳು ರಾಜಕಾರಣ ಮಾಡ್ತಾವೆ ಅಂತಾ ಹೇಳ್ತಿದ್ದೀರಿ.
ಹೋರಾಟದ ಸಮಯದಲ್ಲಿ ಯಡಿಯೂರಪ್ಪ ಅವರಿಂದ ಕಾಣಿಕೆ ಪಡೆದಿದ್ದಾರೆ ಅಂತೀರಿ. ಹೌದು. ನಾವು ರಾಜಾರೋಷವಾಗಿ ಹೇಳ್ತೇವೆ ಕಾಣಿಕೆ ತಗೊಂಡಿದ್ದೇವೆ. ಶುದ್ಧ ಮನಸ್ಸಿನ ವ್ಯಕ್ತಿಯಿಂದ ನಾವು ಕಾಣಿಕೆ ಪಡೆದಿದ್ದೇವೆ ನಿಜ ಎಂದಿದ್ದಾರೆ.
ಓದಿ: 'ಪ್ರಾಣ ಹೋದರೂ ಯತ್ನಾಳ್ನನ್ನ ಸಿಎಂ ಮಾಡಬಾರದೆಂದು ಬಿಎಸ್‌ವೈ ಕಂಡೀಷನ್ ಇತ್ತು'