ETV Bharat / state

ನಾನು ತಿನ್ನೋ ಅನ್ನದ ಮೇಲೆ ಹೆಚ್​ಡಿಕೆ ಹೆಸರಿದೆ ಎಂದು ಆನಂದ್​ಸಿಂಗ್ ಹೇಳಿದ್ದರು: ಕುಮಾರಸ್ವಾಮಿ - ಹೊಸಪೇಟೆಯ ಕಮಲಾಪುರದಲ್ಲಿ ಕುಮಾರಸ್ವಾಮಿ ಹೇಳಿಕೆ

ನಾನು ತಿನ್ನುವ ಅನ್ನದ ಒಂದೊಂದು ಅಗುಳಿನ ಮೇಲೆ ಕುಮಾರಸ್ವಾಮಿ ಹೆಸರು ಬರೆದಿದೆ ಎಂದು ಆನಂದ್​ ಸಿಂಗ್ ಹೇಳಿದ್ದರು, ಬಳಿಕ ಅವರೇ ಬಿಜೆಪಿಯವರೊಡಗೂಡಿ ಸಮ್ಮಿಶ್ರ ಸರಕಾರವನ್ನು ಬೀಳಿಸಿದರು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Nov 25, 2019, 10:42 PM IST

ಹೊಸಪೇಟೆ: ವಿಜಯನಗರ ಕ್ಷೇತ್ರದಲ್ಲಿ ಇಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾಗಿರುವ ಅನರ್ಹ ಶಾಸಕ ಆನಂದ್​ ಸಿಂಗ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಮಲಾಪುರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಿಂದೊಮ್ಮೆ ನಾನು ತಿನ್ನುವ ಅನ್ನದ ಒಂದೊಂದು ಅಗುಳಿನ ಮೇಲೆ ಕುಮಾರಸ್ವಾಮಿ ಹೆಸರು ಬರೆದಿದೆ ಎಂದು ಆನಂದ್​ ಸಿಂಗ್ ಹೇಳಿದ್ದರು, ಬಳಿಕ ಅವರೇ ಬಿಜೆಪಿಯವರೊಡಗೂಡಿ ಸಮ್ಮಿಶ್ರ ಸರಕಾರವನ್ನು ಬೀಳಿಸಿದರು ಎಂದು ಆರೋಪಿಸಿದ್ದಾರೆ.

‌ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ರಾಜ್ಯದಲ್ಲಿ ಪ್ರವಾಹವಾಗಿ ಜನರು ಅಪಾರವಾದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ಇದುವರೆಗೂ ಕೂಡ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು. ಜನರ ಪರವಾಗಿ ಕೆಲಸ ಮಾಡುವುದಾಗಿ ಬಿಜೆಪಿಯವರು ಆಶ್ವಾಸನೆ ನೀಡುತ್ತಾರೆ, ಆದರೆ ಪರಿಹಾರವನ್ನು ನೀಡುತ್ತಿಲ್ಲ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಚುನಾವನಾ ಪ್ರಚಾರ

ಸಮ್ಮಿಶ್ರ ಸರಕಾರದಲ್ಲಿ ರೈತರ ಸಾಲಮನ್ನಾ ಮಾಡಿದ್ದೇವೆ. ವಯಸ್ಸಾದವರಿಗೆ 500ರಿಂದ 1000 ರೂ. ಮಾಶಾಸನವನ್ನು ನೀಡಿದ್ದೇವೆ ಎಂದರು. ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ರೆ ರೈತರ ಪರವಾಗಿ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ ಜನರು ನಮ್ಮ ಪಕ್ಷಕ್ಕೆ ಬೆಂಬಲ ನೀಡದಿರುವುದು ಬೇಸರ ತಂದಿದ್ದು, ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶವನ್ನು ಕೊಡಿ ಎಂದ ಅವರು, ವಿಜಯನಗರ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎನ್‌.ಎಂ ನಬಿ ಅವರನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಬಿಜೆಪಿ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಿ, ಆಗ ಜೆಡಿಎಸ್ ಪಕ್ಷವು ಸರಕಾರಕ್ಕೆ ಸಹಕಾರವನ್ನು ನೀಡುತ್ತದೆ ಎಂದರು.

Intro: ಆನಂದ ಸಿಂಗ್ ತಿನ್ನುವ ಅನ್ನದ ಮೇಲೆ : ಕುಮಾರಸ್ವಾಮಿ ಹೆಸರು ಬರೆದಿದೆಯಂತೆ.

ಹೊಸಪೇಟೆ : ಬಿಜೆಪಿ ಸರಕಾರ ನೇರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಿ. ಜೆಡಿಎಸ್ ಪಕ್ಷವು ಸರಕಾರಕ್ಕೆ ಸಹಕಾರವನ್ನು ನೀಡುತ್ತದೆ. ಮತ್ತೊಮ್ಮೆ ಚುನಾವಣೆ ನಡೆಸುವುದರಿಂದ ಸರಕಾರಕ್ಕೆ ಆರ್ಥಿಕ ಹೋರೆ ಹೆಚ್ಚಾಗುತ್ತದೆ ಎಂದು ಮಾಜಿಮುಖ್ಯ ಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಮಾತನಾಡಿದರು.

Body: ತಾಲೂಕಿನ ಕಮಲಾಪುರದ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಅಥಿತಿಯಾಗಿದ್ದಾರೆ. ನಮ್ಮ ದೇಶದಲ್ಲಿ ಅವರು ಯಾವಾಗ ಇರುತ್ತಾರೊ ಯಾವಾಗ ಬರುತ್ತಾರೊ ತಿಳಿಯುವುದಿಲ್ಲ ಎಂದು ಕಿಡಿಕಾರಿದರು.
‌ ಬಿಜೆಪಿ ಪಕ್ಷದವರು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರಕಾರವನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಆಸ್ತಿ ಪಾಸ್ತಿಗಳು ನಷ್ಷವಾಗಿದೆ. ಇನ್ನೂವರೆಗೂ ನೇರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಿಲ್ಲ. ಜನರ ಪರವಾಗಿ ಕೆಲಸವನ್ನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾರೆ. ಅವರು ಪರಿಹಾರವನ್ನು ನೀಡುತ್ತಿಲ್ಲ.
ಸಮ್ಮಿಶ್ರ ಸರಕಾರದಲ್ಲಿ ರೈತರ ಸಾಲಮನ್ನವನ್ನು ಮಾಡಿದ್ದೇವೆ. ವೃದ್ದರಿಗೆ 500 ರಿಂದ 1000 ರೂ. ಮಾಶಸನವನ್ನು ನೀಡಿದ್ದೇವೆ. ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದರೆ ರೈತರ ಪರವಾಗಿ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ ಜನರು ನಮ್ಮ ಪಕ್ಷಕ್ಕೆ ಬೆಂಬಲ ನೀಡದಿರುವುದು ಬೇಸರ ಮಾಡುತ್ತಿದ್ದಾರೆ .ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶವನ್ನು ಕೋಡಿ ಎಂದು ಅಸಹಾಯಕತೆ ತೋಡಿಕೊಂಡರು.
ಕುಮಾರಸ್ವಾಮಿ ಅವರಿಂದ ನನಗೆ ತುಂಬಾ ಸಹಕಾಯವಾಗಿದೆ ಎಂದು ಆನಂದ ಸಿಂಗ್ ಹೇಳುತ್ತಾರೆ. ನಾನು ತಿನ್ನುವ ಅನ್ನದ ಒಂದೊಂದು ಅಗುಳಿನ ಮೇಲೆ ಕುಮಾರ ಸ್ವಾಮಿ ಎಂದು‌ ಹೆಸರನ್ನು ಬರೆದಿರುತ್ತದೆ ಎಂದು ಆನಂದ ಸಿಂಗ್ ಹೇಳುತ್ತಾರೆ. ಆದರೆ ಸಮ್ಮಿಶ್ರ ಸರಕಾರವನ್ನು ಬಿಳಿಸಲು ಆನಂದ ಸಿಂಗ್ ಮತ್ತು ಬಿಜೆಪಿವರು ಸಮ್ಮಿಶ್ರ ಸರಕಾರವನ್ನು ಬಿಳಿಸಿದ್ದಾರೆ.ಅದಕ್ಕಾಗಿ ವಿಜಯನಗರ ಉಪಚುನಾವಣೆಯಲ್ಲಿ ನಭಿ ಅವರನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಜನರಲ್ಲಿ ಮನವಿಯನ್ನು ಮಾಡಿಕೊಂಡರು.

Conclusion:KN_HPT_1_KUMARASWAMI_SCPEECH_KA10028

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.