ETV Bharat / state

ಸೇವಾಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ - ಬಾಕಿ ವೇತನ ಹಾಗೂ ಸೇವಾಭದ್ರತೆ

ಕೂಡಲೇ ಉಪನ್ಯಾಸಕರಿಗೆ ವೇತನ ನೀಡಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯ..

ಪ್ರತಿಭಟನೆ
ಪ್ರತಿಭಟನೆ
author img

By

Published : Sep 23, 2020, 8:42 PM IST

ಬಳ್ಳಾರಿ : ಬಾಕಿ ವೇತನ ಹಾಗೂ ಸೇವಾಭದ್ರತೆಗೆ ಒತ್ತಾಯಿಸಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಜಿಲ್ಲಾಧ್ಯಕ್ಷ ಡಾ.ಟಿ ದುರ್ಗಪ್ಪ, ರಾಜ್ಯದಲ್ಲಿ 14,500 ಅತಿಥಿ ಉಪನ್ಯಾಸಕರಿದ್ದಾರೆ. ಇವರಿಗೆ ಸರಿಯಾದ ವೇತನವಿಲ್ಲ. ಸಕಾಲಕ್ಕೆ ವೇತನ ನೀಡದ ಕಾರಣ ಮಾನಸಿಕ ಅಗಾತಕ್ಕೊಳಗಾಗಿ ರಾಜ್ಯದಲ್ಲಿ ಮೂವರು ಆತ್ಮಹತೆ ಮಾಡಿಕೊಂಡಿದ್ದಾರೆ‌. ಕೂಡಲೇ ಉಪನ್ಯಾಸಕರಿಗೆ ವೇತನ ನೀಡಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸೇವಾಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ
ಎಐಡಿವೈಒ ಬಳ್ಳಾರಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ ಜಗದೀಶ್ ಮಾತನಾಡಿ, ಉಪನ್ಯಾಸಕರನ್ನು ಖಾಯಂಗೊಳಿಸಿ, ಸೇವಾ ಭದ್ರತೆ ಖಾತ್ರಿ ಪಡಿಸಿ, ಲಾಕ್​ಡೌನ್ ಸಮಯದ ಮೂರು ನಾಲ್ಕು ತಿಂಗಳ ವೇತನ ನೀಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.