ETV Bharat / state

ಸರ್ಕಾರದ ಮಾರ್ಗಸೂಚಿ ಅನುಸರಿಸದ ಹೊಸಪೇಟೆ ಶಾಲೆಗಳು - ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಕೇಸ್​ಗಳು

ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳನ್ನು ರಾಜ್ಯದಲ್ಲಿ ಜಾರಿ ಮಾಡಿ ಆದೇಶ ಹೊರಡಿಸಿದೆ. ಅದರಂತೆ 6 ರಿಂದ 9 ತರಗತಿಗಳನ್ನು ನಡೆಸುವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ. ಆದರೆ, ಹೊಸಪೇಟೆಯಲ್ಲಿನ ಶಾಲೆಗಳಲ್ಲಿ ಈ ಕ್ರಮವನ್ನು ಅನುಸರಿಸಿಲ್ಲ.

ಸರ್ಕಾರ ಮಾರ್ಗಸೂಚಿ ಅನುಸರಿಸದ ಹೊಸಪೇಟೆ ಶಾಲೆಗಳು
Govt rules are not following in Hospet school
author img

By

Published : Apr 3, 2021, 11:32 AM IST

ಹೊಸಪೇಟೆ: ಸರ್ಕಾರ 6 ರಿಂದ 9ನೇ ತರಗತಿಗಳನ್ನು ನಡೆಸುವಂತಿಲ್ಲ ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಆದರೆ, ಹೊಸಪೇಟೆಯಲ್ಲಿ ಎಂದಿನಂತೆ ಶಾಲೆಗಳು ಆರಂಭವಾಗಿದ್ದು, ತರಗತಿ‌ ನಡೆಸುತ್ತಿವೆ.

ಸರ್ಕಾರ ಮಾರ್ಗಸೂಚಿ ಅನುಸರಿಸದ ಹೊಸಪೇಟೆ ಶಾಲೆಗಳು

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮ ಅನುಷ್ಠಾನಕ್ಕೆ ತಂದಿದೆ. ಆದರೆ, ಈ ನಿಯಮಗಳನ್ನು ಹೊಸಪೇಟೆಯ ಶಾಲೆಗಳಲ್ಲಿ ಪಾಲನೆಯಾಗುತ್ತಿಲ್ಲ ಎನ್ನಲಾಗುತ್ತಿದೆ.

ಶಾಲೆ ತಲುಪದ ಆದೇಶ: ಸರ್ಕಾರ ಏ.2 ರಂದು ಮಾರ್ಗಸೂಚಿ ಹೊರಡಿಸಿದೆ. ಆ ಮಾರ್ಗಸೂಚಿ ಶಾಲೆಗಳಿಗೆ ತಲುಪಿಲ್ಲ. ಹಾಗಾಗಿ ಶಾಲೆ ತೆರೆಯಲಾಗಿದೆ. ಆದೇಶ ತಲುಪಿದ ಬಳಿಕ ಶಾಲೆಯನ್ನು ತೆರೆಯುವುದಿಲ್ಲ ಎಂದು ಖಾಸಗಿ ಶಾಲೆಯ ಶಿಕ್ಷಕರು ತಿಳಿಸಿದರು.

ಓದಿ: ಇಂದು ಸಂಜೆಯೊಳಗೆ ಈಶ್ವರಪ್ಪ ಉಚ್ಛಾಟಿಸಿ, ಇಲ್ಲವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ: ಡಿಕೆಶಿ ಸವಾಲು

ಈ ಕುರಿತಂತೆ ಈಟಿವಿ ಭಾರತದೊಂದಿಗೆ ಡಿಡಿಪಿಐ ಸಿ.ರಾಮಪ್ಪ ಅವರು ಮಾತನಾಡಿ, ಸರ್ಕಾರದ ಮಾರ್ಗಸೂಚಿ ಇಲಾಖೆಗೆ ತಲುಪಿಲ್ಲ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ‌. ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.