ETV Bharat / state

ಚಾಗನೂರು - ಸಿರವಾರ ಬಳಿ ಏರ್ಪೋರ್ಟ್ - ಏರ್ ಸ್ಟ್ರಿಪ್ ನಿರ್ಮಾಣಕ್ಕೆ ಚಿಂತನೆ!

ಚಾಗನೂರು - ಸಿರವಾರ ಬಳಿ ಅಂದಾಜು 900 ಎಕರೆಯ ಕೃಷಿಭೂಮಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ ನಿರ್ಮಾಣ ಕಾರ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರವು ಸದ್ದಿಲ್ಲದೇ ಚಾಲನೆ ನೀಡಿದೆ.

Airport near Chengannur- Sirivara
ಚಾಗನೂರು- ಸಿರವಾರ ಬಳಿ ಏರ್ಪೋರ್ಟ್ - ಏರ್ ಸ್ಟ್ರಿಪ್ ನಿರ್ಮಾಣಕ್ಕೆ ಚಿಂತನೆ!
author img

By

Published : Jan 30, 2020, 8:04 PM IST

ಬಳ್ಳಾರಿ: ಜಿಲ್ಲೆಯ ಬಳ್ಳಾರಿ ತಾಲೂಕಿನ ಚಾಗನೂರು- ಸಿರವಾರ ಬಳಿ ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರವು ಸದ್ದಿಲ್ಲದೇ ಚಾಲನೆ ನೀಡಿದೆ.

ಚಾಗನೂರು- ಸಿರವಾರ ಬಳಿ ಏರ್ಪೋರ್ಟ್ - ಏರ್ ಸ್ಟ್ರಿಪ್ ನಿರ್ಮಾಣಕ್ಕೆ ಚಿಂತನೆ!

ಉಭಯ ಗ್ರಾಮಗಳ ನಡುವೆ ವಶಪಡಿಸಿಕೊಳ್ಳಲಾಗಿದ್ದ ಅಂದಾಜು 900 ಎಕರೆಯ ಕೃಷಿಭೂಮಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ ನಿರ್ಮಾಣಕ್ಕೆ ಚಾಗನೂರು- ಸಿರವಾರ ಹೋರಾಟ ಸಮಿತಿಯ ರೂವಾರಿ ಚಾಗನೂರು ಮಲ್ಲಿಕಾರ್ಜುನ ರೆಡ್ಡಿಯವರ ನೇತೃತ್ವದಲ್ಲಿ ಪ್ರಬಲ ಹೋರಾಟವು ನಡೆದಿತ್ತು. ಆ ಹೋರಾಟವು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದುಕೊಂಡಿತ್ತು.‌ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಈ ಹೋರಾಟದಲ್ಲಿ ಭಾಗಿಯಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಬಲ ವಿರೋಧವನ್ನೂ ವ್ಯಕ್ತಪಡಿಸಿದ್ರು.‌

ಇದೀಗ ಏರ್ಪೋರ್ಟ್ ಅಥವಾ ಏರ್ ಸ್ಟ್ರಿಪ್ ನಿರ್ಮಾಣ ಕಾರ್ಯಕ್ಕೆ ಸದ್ದಿಲ್ಲದೇ ಚಾಲನೆ ನೀಡಿದೆ‌. ಇದರಿಂದ ಮತ್ತೆ ಏರ್ಪೋರ್ಟ್ ನಿರ್ಮಾಣದ ವಿಚಾರವು ಮುನ್ನಲೆಗೆ ಬಂದಂತಾಗಿದೆ. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮೆಲುಗೈ ಸಾಧಿಸಿದಂತಾಗಿದೆ. ಹಾಲಿ ಬಿಜೆಪಿ ಸರ್ಕಾರ ಆ ಪ್ರದೇಶದಲ್ಲಿ ಏರ್ಪೋರ್ಟ್ ಇಲ್ಲವೇ ಏರ್ ಸ್ಟ್ರಿಪ್ ನಿರ್ಮಾಣ ಮಾಡಲು ಮುಂದಾಗಿದೆ.

ಈ ಸಂಬಂಧ ಕೆಎಸ್​ಎಸ್​ಐಡಿಎಲ್ ( karnataka state small industries development corporation) ಫಿಜಿಬಲ್ಸ್ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ವರದಿ ನೀಡಿದೆ. ಈ ಪ್ರದೇಶದಲ್ಲಿ ಏರ್ಪೋರ್ಟ್ ಇಲ್ಲವೇ ಏರ್ ಸ್ಟ್ರಿಪ್ ನಿರ್ಮಾಣ ಮಾಡ್ಬೇಕು ಎನ್ನುವ ಬಗ್ಗೆ ಸರ್ಕಾರದಿಂದ ಅನುಮೋದನೆ ಸಿಕ್ಕ ಬಳಿಕ ಟೆಂಡರ್ ಹಾಗೂ ಡಿಪಿಆರ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.

ಬಳ್ಳಾರಿ ತಾಲೂಕಿನ‌ ಚಾಗನೂರು-ಸಿರವಾರ ಗ್ರಾಮಗಳ ಭೂಮಿ ನೀರಾವರಿ ಜೊತೆಗೆ ಫಲವತ್ತಾದ ಭೂಮಿ. ಪ್ರತಿವರ್ಷ 2-3 ಬೆಳೆಗಳನ್ನ ಬೆಳೆಯಲಾಗುತ್ತಿದೆ. ಆದ್ರೆ ಇಂತಹ ಪ್ರದೇಶದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಲು ಈ ಭಾಗದ ಕೆಲ ರೈತರ ತೀವ್ರ ವಿರೋಧ ಕೂಡ ಇದೆ. ಈ ನಡುವೆ ಕಳೆದ ಬಿಜೆಪಿ ಸರ್ಕಾರ ಆ ಭೂಮಿಯನ್ನ ಸ್ವಾಧೀನಪಡಿಸಿ ಕೊಂಡಿತ್ತು.

ಬಳ್ಳಾರಿಯಲ್ಲಿ ಸಾಕಷ್ಟು ಗಣಿ ಕಂಪನಿಗಳು, ಮೆದು ಕಬ್ಬಿಣ ಘಟಕಗಳು ಜಾಸ್ತಿ ಇರೋದರಿಂದ ಜಿಲ್ಲೆಯಲ್ಲಿ ಏರ್ಪೋರ್ಟ್​ ಅವಶ್ಯಕತೆ ಇದೆ ಎಂದು ಮನಗಂಡಿದ್ದ ರೆಡ್ಡಿ ಸಹೋದರರು ಏರ್ಪೋರ್ಟ್ ನಿರ್ಮಾಣಕ್ಕೆ ಕೈ ಹಾಕಿದ್ರು. ಆ ಬಳಿಕ ಬಂದ ಕಾಂಗ್ರೆಸ್ ಹಾಗೂ ಮೈತ್ರಿಕೂಟ ಸರ್ಕಾರ ಈ ಯೋಜನೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಗಿ, ಈಗ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಿದ್ದರಿಂದ ಮತ್ತೆ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಕನಸು ಚಿಗುರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.