ETV Bharat / state

ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್...  ಮೈಲಾರಲಿಂಗೇಶ್ವರನ ಕಾರಣಿಕ - ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ

ಹೂವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ನುಡಿಯುವ ಕಾರಣಿಕ ಉತ್ತರ ಕರ್ನಾಟಕ ಭಾಗದಲ್ಲಿ ತುಂಬಾ ಫೇಮಸ್​. ಗೊರವಯ್ಯನ ಕಾರಣಿಕ ಅವಲಂಬಿಸಿ ನಾಡಿನ ಆಗುಹೋಗುಗಳ ಜೊತೆ ರೈತರು ಕೂಡ ತಮ್ಮ ವ್ಯವಸಾಯದ ಬಗ್ಗೆ ಯೋಜನೆ ರೂಪಿಸುತ್ತಾರೆ.

ballary
ಮೈಲಾರಲಿಂಗೇಶ್ವರನ ಕಾರಣಿಕ
author img

By

Published : Dec 13, 2019, 1:33 PM IST

ಬಳ್ಳಾರಿ: ಜೋಡೆತ್ತಿನ ಕೂರಿಗಿ ಮುಗ್ಗರಿಸುತ್ತಲೇ ಪರಾಕ್ ಎಂದು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ಭವಿಷ್ಯ ನುಡಿದಿದ್ದಾನೆ.

ಹಕ್ಕಂಡಿ ಗ್ರಾಮದ ಗೊರವಯ್ಯ ಹವಳದ ಚನ್ನನಗೌಡ್ರು ಭಾನೆತ್ತರದ ನಿಲಗಂಬಿ‌ ಮೇಲೇರಿ ಸದ್ದಲೇ ಎನ್ನುತ್ತಲೇ ಈ ದೈವವಾಣಿಯನ್ನು ನುಡಿದು ಬಳಿಕ, ಕೆಳಗಡೆ ಬಿದ್ದರು.‌ ಗೊರವಯ್ಯನನ್ನು ಸುತ್ತಲೂ ಸೇರಿದ್ದ ಭಕ್ತರು ರಕ್ಷಣೆ ಮಾಡಿದ್ರು. ನಿನ್ನೆ ಸಂಜೆ ನಡೆದ ಈ ಕಾರ್ಣಿಕೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.

ಮೈಲಾರಲಿಂಗೇಶ್ವರನ ಕಾರಣಿಕ

ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ ಈ ಭಾಗದಲ್ಲಿ ಹೆಚ್ಚು ಖ್ಯಾತಿ ಹೊಂದಿದೆ. ಈ ಬಾರಿ ಗೊರವಯ್ಯ ನುಡಿದ "ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್" ಕಾರಣಿಕ ಅಶುಭ ಸೂಚಕವೆನ್ನಲಾಗಿದೆ. ಈ ಕಾರಣಿಕದಂತೆ ರೈತಾಪಿ ವರ್ಗಗಳಿಗೆ ಅಶುಭವಾಗಲಿದೆ. ಜೊಡೆತ್ತುಗಳನ್ನ ಬಳಸಿಕೊಂಡು ಬಿತ್ತುವಾಗ, ಬಿತ್ತುವ ಕೂರಿಗಿ ಮುಗ್ಗರಿಸಿ ಬೀಳುವುದು ಎಂಬುದು ಈ ಕಾರಣಿಕದ ಅರ್ಥ, ಹೀಗಾಗಿ ಈ ಭಾಗದ ರೈತರಲ್ಲಿ ಬೇಸರ ಮನೆ ಮಾಡಿದೆ.

Intro:ಹಕ್ಕಂಡಿ ಮೈಲಾರಲಿಂಗೇಶ್ವರನ ಕಾರಣಿಕ ನುಡಿ: ಜೋಡೇತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್…!
ಬಳ್ಳಾರಿ: ಜೋಡೇತ್ತಿನ ಕೂರಿಗಿ ಮುಗ್ಗರಿಸುತ್ತಲೇ ಪರಾಕ್
ಎಂಬ ಕಾರಣಿಕ ನುಡಿಯು ಜಿಲ್ಲೆಯ ಹೂವಿನ - ಹಡಗಲಿ
ತಾಲೂಕಿನ ಹಕ್ಕಂಡಿ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಲಿ ಮಾರ್ದನಿಸಿತು.
ಹಕ್ಕಡಿ ಗ್ರಾಮದ ಗೊರವಯ್ಯ ಹವಳದ ಚನ್ನನಗೌಡ್ರು ಭಾನೆತ್ತರದ ನಿಲಗಂಬಿ‌ ಮೇಲೆ ಏರಿ ಸದ್ದಲೇ ಎನ್ನುತ್ತಲೇ ಈ ದೈವವಾಣಿಯನ್ನು ನುಡಿದ್ರು.‌ ಬಳಿಕ, ಕೆಳಗಡೆ ಬಿದ್ದರು.‌ ಗೊರವಯ್ಯನವ್ರನ್ನ ಸುತ್ತಲೂ ಮುಗ್ಗರಿಸಿದ್ದ ಭಕ್ತರು ರಕ್ಷಣೆ ಮಾಡಿದ್ರು.
Body:ನಿನ್ನೆಯ ಸಂಜೆ ನಡೆದ ಈ ಕಾರ್ಣಿಕೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು. ಸುಪ್ರಸಿದ್ದ ಮೈಲಾರಲಿಂಗೇಶ್ವರನ ಕಾರ್ಣಿಕದ ನಂತರ ಹೆಚ್ಚು ಪ್ರಭಾವ ಹೊಂದಿರುವ ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ.
ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್, ಇದು ಅಶುಭ ಸೂಚಕವೆನ್ನಲಾಗಿದೆ. ರೈತಾಪಿ ವರ್ಗಗಳಿಗೆ ಅಶುಭವಾಗಲಿದೆ ಯಂತೆ. ಕಾರ್ಣಿಕದ ಅರ್ಥ. ಜೊಡೆತ್ತುಗಳನ್ನ ಬಳಸಿಕೊಂಡು ಬಿತ್ತುವಾಗ, ಬಿತ್ತುವ ಕೂರಿಗಿ ಮುಗ್ಗರಿಸಿ ಬೀಳುವುದು ಎಂದರ್ಥ. ಹೀಗಾಗಿ, ಈ ಭಾಗದ ರೈತರಲ್ಲಿ ಬೇಸರ ಮನೆ ಮಾಡಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HAKADAKI_MAYLARA_KARNIKA_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.