ಬಳ್ಳಾರಿ : ವ್ಯಕ್ತಿಯ ಜೀವನದಲ್ಲಿ ಸೂಪರ್ ಫುಡ್ ಅಂದ್ರೇ ಮೊಟ್ಟೆ. ಅದನ್ನು ಎಲ್ಲರೂ ತಿನ್ನಬಹುದು ಎಂದು ವಿಜಯ ನಗರ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ.ದೇವಾನಂದ ತಿಳಿಸಿದರು.
ನಗರದ ಹೊರವಲಯದ ವಿಜಯ ನಗರ ವೈದ್ಯಕೀಯ ಸಂಸ್ಥೆಯಲ್ಲಿ ಬಳ್ಳಾರಿ ಜಿಲ್ಲಾ ಕೋಳಿ ಸಾಕಾಣಿಕೆ ಸಂಘದಿಂದ ವಿಮ್ಸ್ನಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ, ನರ್ಸ್, ಬ್ರದರ್ಸ್ಗಳಿಗೆ ಹಾಗೂ ಡಿ ಗ್ರೂಪ್ ನೌಕರರಿಗೆ ಉಚಿತವಾಗಿ 12 ಸಾವಿರ ಮೊಟ್ಟೆಗಳನ್ನು ವಿತರಣೆ ಮಾಡಿದರು.
ವಿಮ್ಸ್ನ ನಿರ್ದೇಶಕ ಡಾ.ದೇವಾನಂದ ಮಾತನಾಡಿ, ಮೊಟ್ಟೆಯು ಪೌಷ್ಠಿಕ ಆಹಾರ. ಇದರಲ್ಲಿ ಪೌಷ್ಠಿಕಾಂಶ, ಫ್ಯಾಟ್ ಕಂಟೆಂಟ್, ಬಿ-ಕ್ಲಾಂಪ್ಲೆಕ್ಸ್, ಇಮ್ಯುನೋ ಆ್ಯಸಿಡ್ಸ್ ಅಂಶಗಳು ಇರುತ್ತವೆ ಎಂದು ತಿಳಿಸಿದರು.
ಕೋಳಿ ಸಾಕಾಣಿಕೆ ಸಂಘದ ಸದಸ್ಯ ಶ್ರೀನಿವಾಸ್ ಮಾತನಾಡಿ, ಎರಡು ದಿನಗಳಲ್ಲಿ 90 ಸಾವಿರ ಮೊಟ್ಟೆಗಳನ್ನು ಬಳ್ಳಾರಿ ವಿಮ್ಸ್ನ ವೈದ್ಯರಿಗೆ, ಪೊಲೀಸ್ ಇಲಾಖೆ, ನರ್ಸ್ಗಳಿಗೆ, ಹೊಸಪೇಟೆ ಮತ್ತು ಹಗರಿಬೊಮ್ಮನ ಹಳ್ಳಿ ತಾಲೂಕಿನ ಕಾರ್ಮಿಕರಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದರು. ಭಾರತ್ ಲಾಕ್‌ಡೌನ್ ನಡುವೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಉಚಿತ ಮೊಟ್ಟೆ ವಿತರಣೆ ಮಾಡುತ್ತಿರುವುದು ವಿಶೇಷವಾಗಿದೆ.