ETV Bharat / state

ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಸಹೋದರಿಯರೂ ನೀರುಪಾಲು! - ನೀರುಪಾಲು

ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿ ಘಟನೆ.

Four children drown to death in Vijaynagar
ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು
author img

By

Published : Nov 2, 2022, 2:54 PM IST

Updated : Nov 2, 2022, 3:09 PM IST

ವಿಜಯನಗರ: ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿ ನಡೆದಿದೆ.

ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು

ಅಭಿ ವೀರ್ಯಾ ನಾಯ್ಕ (13), ಅಶ್ವಿನಿ (14), ಕಾವೇರಿ (18) ಹಾಗೂ ಅಪೂರ್ವಾ (18) ಮೃತರು. ಇವರಲ್ಲಿ ಮೊದಲು ಅಭಿ ಎಂಬಾತ ನೀರಿನಲ್ಲಿ ಮುಳುಗುತ್ತಿದ್ದ. ಅದನ್ನು ನೋಡಿದ ಆತನ ಮೂವರೂ ಸಹೋದರಿಯರು ಒಬ್ಬರಾದಂತೆ ಒಬ್ಬರು ಕೆರೆಗೆ ಇಳಿದು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಆತನನ್ನು ರಕ್ಷಿಸಲಾಗದೇ ಅಭಿ ಜತೆಗೆ ಮೂವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Four children drown to death in Vijaynagar
ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು

ಸದ್ಯ ಮೂರು ಶವ ಪತ್ತೆಯಾಗಿದ್ದು, ಅಪೂರ್ವಾ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. ನಾಲ್ಕು ಜನ ಮಕ್ಕಳ ಸಾವಿನಿಂದ ಕುಟುಂಬ ಭಾರಿ ಆಘಾತಕ್ಕೊಳಗಾಗಿದೆ. ಮೃತ ದೇಹಗಳ ಮೇಲೆ ಬಿದ್ದು ಮಕ್ಕಳ ತಾಯಿ ರೋಧಿಸುವ ದೃಶ್ಯಗಳು ಮನಕಲಕುವಂತಿದೆ. ಇತ್ತೀಚೆಗೆ, ಜಿಲ್ಲಾದ್ಯಂತ ಭಾರಿ ಮಳೆಯಾಗಿದ್ದು, ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ. ಹಾಗಾಗಿ, ನೀರಿನಲ್ಲಿ ಮುಳುಗುವ ಅವಘಡಗಳು ಹೆಚ್ಚಾಗುತ್ತಿವೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಸ್ನಾನಕ್ಕೆ ತೆರಳಿ ನೀರಲ್ಲಿ ಸಿಲುಕಿಕೊಂಡ ಬಾಲಕಿಯರು.. ಕಾಪಾಡಲು ತೆರಳಿದ್ದ ವ್ಯಕ್ತಿ ಸೇರಿ ಐವರು ನೀರುಪಾಲು!

Last Updated : Nov 2, 2022, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.