ಬಳ್ಳಾರಿ: ಜಾನಪದ ಹಾಡುಗಾರನಿಂದ ಕೊರೊನಾ ವಾರಿಯರ್ಸ್ಗಾಗಿ ಕೊರೊನಾ ಯೋಧ ಬಂಧು ಎಂಬ ಜಾನಪದ ಹಾಡು ಮೂಡಿ ಬಂದಿದೆ.
ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿ ಇತರ ವಲಯದವರಿಗಾಗಿ ಕೊರೊನಾ ಯೋಧ ಬಂಧು ಎಂಬ ಶೀರ್ಷಿಕೆಯಡಿ ಖ್ಯಾತ ಹಾಸ್ಯ ಕಲಾವಿದ, ಕವಿ ಹಾಗೂ ಶಿಕ್ಷಕರಾದ ಎ.ಎರ್ರಿಸ್ವಾಮಿ ಅವರ ವಿರಚಿತ ಜಾನಪದ ಹಾಡಿಗೆ, ಗಣಿ ಜಿಲ್ಲೆಯ ಜಾನಪದ ಹಾಡುಗಾರ ಹನುಮಯ್ಯ ಅವರ ಸುಮಧುರ ಕಂಠದಿಂದ ಈ ಜಾನಪದ ಹಾಡು ಮೂಡಿದೆ.