ETV Bharat / state

ಡೀಸೆಲ್ ದರ ಏರಿಕೆಗೆ ತತ್ತರಿಸಿದ ರೈತ ಸಮೂಹ: ಉಳುಮೆ ಮಾಡಿಸಬೇಕು ಅಂದ್ರೆ ಟ್ರ್ಯಾಕ್ಟರ್​ಗೆ ಕೊಡಬೇಕು ಬಹು ಮೊತ್ತ! - ಡೀಸೆಲ್ ಹಾಗೂ ಪೆಟ್ರೋಲ್ ದರ ಏರಿಕೆ

ಈ ಹಿಂದೆ 700 ರೂ. ಟಿಲ್ಲರ್​ಗೆ ವೆಚ್ಚ ತಗಲುತಿತ್ತು. ಈಗ 1100 ರೂ. ಮಾಡಲಾಗಿದೆ. ಮಡಿಕೆ ಹೊಡೆಯದು 900 ಇತ್ತು. ಈಗ 1300 ರೂ. ಆಗಿದೆ. ಅದೇತರನಾಗಿ ಎರಡು ಮಡಿಕೆ ಹೊಡೆಯುವುದು 1300 ರೂ. ಇತ್ತು. ಈಗ 2700 ರೂ. ಆಗಿದೆ. ಪೆಡ್ಲರ್ ಹೊಡೆಯುವುದು 1200 ಇತ್ತು. ಪ್ರಸ್ತುತ ದರ 2000 ರೂ. ಆಗಿದೆ. ಡಿಸೇಲ್ ದರ 88.70 ರೂ. ಏರಿಕೆಯಾಗಿರುವುದು ರೈತರು ಧರ್ಮ ಸಂಕಷ್ಟವನ್ನು ಅನುಭವಿಸುವಂತಾಗಿದೆ.

farmers suffer from Diesel price hike
ಡೀಸೆಲ್ ದರ ಏರಿಕೆಗೆ ತತ್ತರಿಸಿದ ರೈತ ಸಮೂಹ
author img

By

Published : Mar 13, 2021, 3:02 AM IST

ಹೊಸಪೇಟೆ: ಡೀಸೆಲ್ ಹಾಗೂ ಪೆಟ್ರೋಲ್ ದರ ಏರಿಕೆಗೆ ರೈತರು ತತ್ತರಿಸಿ ಹೋಗಿದ್ದಾರೆ. ಹೊಲದಲ್ಲಿ‌ ಟ್ರ್ಯಾಕ್ಟರ್​ನಿಂದ ಮಾಡಿಸುವ ದರಗಳು ಹೆಚ್ಚಾಗಿದ್ದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕೊರೊನಾ ಲಾಕ್ ಡೌನ್ ನಿಂದ ಚೇತರಿಸಿಕೊಳ್ಳುತ್ತಿದ್ದ ರೈತರಿಗೆ, ಡೀಸೆಲ್ ದರ ಏರಿಕೆಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಮೂರು ತಿಂಗಳಿಂದ ಪೆಟ್ರೋಲಿಯಂ ದರಗಳು ಏರಿಕೆ ಕಾಣುತ್ತಿವೆ. ಇದು ಜನರಿಗೆ ಹಾಗೂ ರೈತರಿಗೆ ತೆಲೆ‌ ಬಿಸಿ ಮಾಡಿದೆ. ರೈತರು ಮೊದಲು ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೇ ಪರದಾಡುತ್ತಿದ್ದಾರೆ. ಈಗ ಡಿಸೇಲ್ ದರ ಏರಿಕೆಯಾಗಿರುವುದು ರೈತರಿಗೆ ಧರ್ಮ ಸಂಕಟ ತಂದೊಡ್ಡಿದೆ.

ಏರಿಕೆ ಕಂಡ ದರಗಳು:

ಈ ಹಿಂದೆ 700 ರೂ. ಟಿಲ್ಲರ್​ಗೆ ವೆಚ್ಚ ತಗಲುತಿತ್ತು. ಈಗ 1100 ರೂ. ಮಾಡಲಾಗಿದೆ. ಮಡಿಕೆ ಹೊಡೆಯದು 900 ಇತ್ತು. ಈಗ 1300 ರೂ. ಆಗಿದೆ. ಅದೇತರನಾಗಿ ಎರಡು ಮಡಿಕೆ ಹೊಡೆಯುವುದು 1300 ರೂ. ಇತ್ತು. ಈಗ 2700 ರೂ. ಆಗಿದೆ. ಪೆಡ್ಲರ್ ಹೊಡೆಯುವುದು 1200 ಇತ್ತು. ಪ್ರಸ್ತುತ ದರ 2000 ರೂ. ಆಗಿದೆ. ಡಿಸೇಲ್ ದರ 88.70 ರೂ. ಏರಿಕೆಯಾಗಿರುವುದು ರೈತರು ಧರ್ಮ ಸಂಕಷ್ಟವನ್ನು ಅನುಭವಿಸುವಂತಾಗಿದೆ.

ಸಾಗಣೆ ವೆಚ್ಚ ಅಧಿಕ:

ಹೊಸಪೇಟೆ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಬೆಳೆದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಸಾರಿಗೆಯನ್ನು ಅಲಂಬಿಸಬೇಕಾಗಿದೆ. ಡಿಸೇಲ್ ದರ ಏರಿಕೆಯಾಗಿರುವುದು ಸಾಗಣೆ ವೆಚ್ಚ ಅಧಿಕವಾಗಲಿದೆ.‌ ಇದು ರೈತರ ಆದಾಯಕ್ಕೆ ಹೊಡೆತ ನೀಡಲಿದೆ.

ಸಣ್ಣ ರೈತರಿಗೆ ಹೆಚ್ಚಿನ ಹೊರೆ:

1 ರಿಂದ 3 ಎಕರೆ ಹೊಂದಿದ ಸಣ್ಣ ರೈತರಿಗೆ ಡಿಸೇಲ್ ದರ ಏರಿಕೆಯನ್ನು ಅರಗಿಸಿಕೊಳ್ಳು ಸಾಧ್ಯವಾಗುತ್ತಿಲ್ಲ. ಸಣ್ಣ ರೈತರಿಗೆ ಲಾಭದ ಪ್ರಮಾಣ ಕಡಿಮೆಯಾಗಿರುತ್ತದೆ. ಮತ್ತೆ ದರಗಳು ಏರಿಕೆಯನ್ನು ಕಂಡರೇ ರೈತರು ಸಂಕಷ್ಟ ಅನುಭವಿಸುವಂತಾಗುತ್ತದೆ.

ಈಟಿವಿ ಭಾರತ್ ದೊಂದಿಗೆ ರೈತ ಸಂಘ ಹಾಗೂ ಹಸಿರು ಸೇನೆ(ನಂಜುಂಡಸ್ವಾಮಿ ಬಣ) ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ ಅವರು ಮಾತನಾಡಿ, ಬೆಲೆ ಏರಿಕೆಯಿಂದ ರೈತರು ನಷ್ಟವನ್ನು‌ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದರಗಳ ಏರಿಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು.

ರೈತ ಡಿ.ಮಹೇಶ ಅವರು ಮಾತನಾಡಿ, ನನ್ನದು ಮೂರು ಎಕೆರೆ ಇದೆ. ಅದರಲ್ಲಿ ಕಬ್ಬು ಬೆಳೆಯಲಾಗಿದೆ. ಈ ಹಿಂದೆ ಒಂದು ಟನ್ ಸಾಗಾಣೆಗೆ 400 ರೂ. ತೆಗೆದುಕೊಳ್ಳುತ್ತಿದ್ದರು. ಈಗ 500 ರೂ. ಆಗಲಿದೆ. ಯಾಕೆಂದರೆ ಡಿಸೇಲ್ ದರ ಹೆಚ್ಚಾಗಿರುವುದರಿಂದ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.