ETV Bharat / state

ಪ್ರತ್ಯೇಕ ವಿಜಯನಗರ ಜಿಲ್ಲೆಗೆ ತುಂಗಭದ್ರಾ ರೈತ ಸಂಘದಿಂದ ಭಾರೀ ವಿರೋಧ! - ಬಳ್ಳಾರಿ ಜಿಲ್ಲೆ

ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡುವ ಅನರ್ಹ ಶಾಸಕರ ಪ್ರಯತ್ನವನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಇದು ರಾಜಕೀಯ ಹಿತಾಸಕ್ತಿಗೆ ನಡೆದಿರುವ ಷಡ್ಯಂತ್ರ ಎಂದು ತುಂಗಭದ್ರಾ ರೈತ ಸಂಘಟನೆ ವಿರೋಧಿಸಿದೆ.

ಪ್ರತ್ಯೇಕ ವಿಜಯನಗರ ಜಿಲ್ಲೆಯ ಕೂಗನ್ನು ವಿರೋಧಿಸಿ ತುಂಗಭದ್ರಾ ರೈತ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
author img

By

Published : Sep 18, 2019, 4:42 PM IST

ಬಳ್ಳಾರಿ: ರೈತರಿಗೆ ತಾಂತ್ರಿಕವಾಗಿ, ಭೌಗೋಳಿಕವಾಗಿ ಹಲವಾರು ಸಮಸ್ಯೆಗಳು ತಲೆದೂರಲಿvಎ. ಅನರ್ಹ ಶಾಸಕ ಆನಂದ್​ ಸಿಂಗ್ ಅವರು ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗೆ ಜಿಲ್ಲೆಯನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ತುಂಗಭದ್ರಾ ರೈತ ಸಂಘಟನೆಯಿಂದ ಪ್ರತಿಭಟನೆ ಮಾಡಲಾಯಿತು.

ಪ್ರತ್ಯೇಕ ವಿಜಯನಗರ ಜಿಲ್ಲೆಯ ಕೂಗನ್ನು ವಿರೋಧಿಸಿ ತುಂಗಭದ್ರಾ ರೈತ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ರೈತ ಸಂಘದ ಜಿ.ಪುರುಷೋತ್ತಮಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ವಿಜಯನಗರ ಜಿಲ್ಲೆಯನ್ನಾಗಿಸಲು ಅನರ್ಹ ಶಾಸಕ ಆನಂದ್​​ ಸಿಂಗ್ ಅವರ ನೇತೃತ್ವದ ತಂಡ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಲು ಅವಕಾಶ ನೀಡಬಾರದಿತ್ತು. ಈ ನಾಡಿನ ಮಠಾಧೀಶರು ಹಾಗೂ ಕಾಂಗ್ರೆಸ್​ನ‌ ಶಾಸಕರು ನಿಯೋಗದಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇಬ್ಭಾಗಕ್ಕೆ ಮುಂದಾದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಿದ್ದಾರೆ.

Intro:ವಿಜಯನಗರ ಜಿಲ್ಲೆಯನ್ನಾಗಿಸುವ ಕೂಗಿಗೆ ರೈತ ಸಂಘದ ವಿರೋಧ!
ಬಳ್ಳಾರಿ: ವಿಜಯನಗರ ಜಿಲ್ಲೆಯನ್ನಾಗಿಸುವ ಕೂಗಿಗೆ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಅತೀವ ವಿರೋಧ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಇಂದು ರೈತ ಸಂಘದ ಜಿ.ಪುರುಷೋತ್ತಮಗೌಡ ನೇತೃತ್ವದ ನಿಯೋಗವು ತೆರಳಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮುಖೇನ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.
ಅನರ್ಹ ಶಾಸಕ ಆನಂದಸಿಂಗ್ ಅವರು ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ಈ ಜಿಲ್ಲೆಯನ್ನು ಇಭ್ಭಾಗ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವ್ರು
ಅನರ್ಹ ಶಾಸಕ ಆನಂದಸಿಂಗ್ ಅವರು ಮಾತಿಗೆ ಬೆಲೆ ಕೋಡೋದು ಬ್ಯಾಡ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳೋದು ಬೇಡ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Body:ಬಿಎಸ್ ವೈಗೆ ತಲೆ ಕೆಟ್ಟಿದೆಯಾ?: ವಿಜಯನಗರ ಜಿಲ್ಲೆಯನ್ನಾಗಿಸುವ ಕೂಗನ್ನು ಹೊತ್ತುಕೊಂಡು ತಮ್ಮ
ಬಳಿ ಬಂದಿರುವ ಅನರ್ಹ ಶಾಸಕ ಆನಂದಸಿಂಗ್ ಅವರ ನೇತೃತ್ವದ ನಿಯೋಗವನ್ನು ಸಿಎಂ ಯಡಿಯೂರಪ್ಪನವ್ರು
ಭೇಟಿ ಮಾಡಲು ಅವಕಾಶ ನೀಡಬಾರದಿತ್ತು. ತಮಗೇನಾದ್ರೂ ತಲೆ ಕೆಟ್ಟಿದೆಯಾ? ಎಂಬುದು ತಿಳಿಯುತ್ತಿಲ್ಲ.‌ ಜಿಲ್ಲೆಯ ಇಬ್ಭಾಗ ಮಾಡೋದು ಯಾರಿಗೂ ಇಷ್ಟವಿಲ್ಲ. ಹಾಗೊಂದು ವೇಳೆ ಇಬ್ಭಾಗ ಮಾಡಿದ್ದೇ ಆದ್ರೆ, ಬಿಜೆಪಿಯೇ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮ ಗೌಡರು ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಈ ನಾಡಿನ ಮಠಾಧೀಶರು ಹಾಗೂ ಕಾಂಗ್ರೆಸ್ಸಿನ‌ ಶಾಸಕರು ನಿಯೋಗದಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇಬ್ಭಾಗಕ್ಕೆ ಮುಂದಾದ್ರೆ ಸುಮ್ಮನೆ ಕೂರಲ್ಲ. ಜಿಲ್ಲಾದ್ಯಂತ ಈ ಹೋರಾಟವನ್ನು ಕೊಂಡ್ಯೊಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡ ಗಂಗಾವತಿ ವೀರೇಶ ಮಾತನಾಡಿ, ಯಾವುದೇ ಜಿಲ್ಲೆಯನ್ನು ಇಬ್ಭಾಗ ಮಾಡಲಿಕ್ಕೆ ಬಿಡಲ್ಲ. ಹಾಗೇನಾದ್ರೂ ಈ ಜಿಲ್ಲೆಯನ್ನು ಇಬ್ಭಾಗ ಮಾಡಲು ಹೊರಟರೇ ಜಿಲ್ಲೆ ಹಾಗೂ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_3_VIJAYANAGAR_DIST_AGAINST_RAITH_SANGH_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.