ಬಳ್ಳಾರಿ : ಹಾವು ಕಚ್ಚಿ ರೈತನೊಬ್ಬ ಮೃತಪಟ್ಟಿರುವ ಘಟನೆ, ಕೂಡ್ಲಿಗಿ ತಾಲೂಕಿನ ಬಡೆಲಡಕು ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ (32) ಎಂಬ ವ್ಯಕ್ತಿಗೆ ಜಮೀನಿನಲ್ಲಿ ಕಡಲೆ ಬೆಳೆಗೆ ನೀರು ಕಟ್ಟುತ್ತಿದ್ದಾಗ ಹಾವು ಕಚ್ಚಿದೆ.
ಕೂಡಲೇ ಚಿಕಿತ್ಸೆಗೆಂದು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರೈತ ಮೃತಪಟ್ಟಿದ್ದಾನೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.