ETV Bharat / state

ಮಳೆಯಿಲ್ಲದೇ ಒಣಗಿದ 12 ಎಕರೆ ಮೆಕ್ಕೆಜೋಳ: ಬೆಳೆ ನಾಶಪಡಿಸಿ ರೈತನ ಹತಾಶೆ - Hospete News

ಮಳೆ ಅಭಾವದಿಂದ ಮೆಕ್ಕೆಜೋಳ ಬೆಳೆ ಕುಂಟಿತವಾಗಿದ್ದು, ಇದರಿಂದ ನೊಂದ ರೈತ ಟ್ರ್ಯಾಕ್ಟರ್​ನಿಂದ ಬೆಳೆ ನಾಶ ಮಾಡಿ ಬೇಸರ ವ್ಯಕ್ತಪಡಿಸಿದ್ದಾನೆ.

Hospete
ಬೆಳೆಯನ್ನು ನಾಶಪಡಿಸಿದ ರೈತ
author img

By

Published : Aug 25, 2021, 10:55 AM IST

Updated : Aug 25, 2021, 12:02 PM IST

ಹೊಸಪೇಟೆ(ವಿಜಯನಗರ): ಮಳೆ ಇಲ್ಲದೇ ಒಣಗಿದ ಮೆಕ್ಕೆಜೋಳದ ಬೆಳೆಯನ್ನು ರೈತ ಟ್ರ್ಯಾಕ್ಟರ್​ ಮೂಲಕ ನಾಶಪಡಿಸಿರುವ ಘಟನೆ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ನಡೆದಿದೆ.

ರೈತ ವಿದ್ಯಾಧರ ಎಂಬವರು 12 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡಿದ್ದಾರೆ.‌ ಮಳೆ ಅಭಾವದಿಂದ ಬೆಳೆ ಕುಂಟಿತವಾಗಿದ್ದು, ಇದರಿಂದ ನೊಂದ ರೈತ ಟ್ರ್ಯಾಕ್ಟರ್​ನಿಂದ ಬೆಳೆ ನಾಶ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹಿರೇಹಡಗಲಿ, ಹಿರೇಕೊಳಚಿ, ಮಾನ್ಯರ ಮಸಲವಾಡ ಸೇರಿದಂತೆ ಈ ಭಾಗದ ಹಲವು ಕಡೆ ಬೆಳೆಯನ್ನು ಬೆಳೆಯಲಾಗಿತ್ತು. ಆದರೆ ಮಳೆಯ ಕೊರತೆಯಿಂದ ಎಲ್ಲವೂ ಹಾಳಾಗಿವೆ. ಇನ್ನು ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದರು.

ಬೆಳೆಯನ್ನು ನಾಶಪಡಿಸಿದ ರೈತ

ರೈತ ರಮೇಶ್​ ಮಾತನಾಡಿ, ಮಳೆಯ ಅಭಾವದಿಂದ ಮೆಕ್ಕೆಜೋಳ ಬೆಳೆಯಲ್ಲಿ ತೆನೆ ಬಂದಿಲ್ಲ. ದನಕರುಗಳಿಗೆ ಬೆಳೆಯನ್ನು ತಿನ್ನಿಸುವ ಸಂಕಷ್ಟ ರೈತರಿಗೆ ಎದುರಾಗಿದೆ. 12 ಎಕರೆಗೆ ಸುಮಾರು 80 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ, ರೈತರಿಗೆ ಬಿಡಿಗಾಸು ಸಹ ಬಂದಿಲ್ಲ. ಸದ್ಯ ಮಳೆ ಬಂದರೂ ಸಹ ಬೆಳೆ ಕೈಗೆಟುಕುವುದಿಲ್ಲ ಎಂಬಂತಾಗಿದೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು‌ ಮನವಿ ಮಾಡಿಕೊಂಡರು.

Last Updated : Aug 25, 2021, 12:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.