ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನಂದಿಹಳ್ಳಿ ಗ್ರಾಮದ ರೈತ ಕಂಠಿ ಕಂಟೆಪ್ಪ ಎಂಬುವರ ಸುಮಾರು ಐದು ಎಕರೆ ಹೊಲದಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳಿಗೆ ದುಂಡಾಣು ಅಂಗಮಾರಿ ರೋಗ ಬಾಧೆ ಎದುರಾಗಿದ್ದು, ಗಿಡಗಳು ಹಾಳಾಗುತ್ತಿವೆ. ಹೀಗಾಗಿ ಟ್ರ್ಯಾಕ್ಟರ್ ಸಹಾಯದೊಂದಿಗೆ ತೋಟಗಾರಿಕೆ ಬೆಳೆಗಾರ ಕಂಠಿ ಕಂಟೆಪ್ಪ ಅವರು ದಾಳಿಂಬೆ ಗಿಡಗಳನ್ನು ನಾಶ ಮಾಡಲು ಮುಂದಾಗಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆಯೇ ತನ್ನ ಐದು ಎಕರೆ ಹೊಲದಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಯಲಾಗಿತ್ತು. ಅಂದಾಜು 14 ಲಕ್ಷ ರೂ. ವರೆಗೂ ಖರ್ಚು ಮಾಡಲಾಗಿತ್ತು. ಕೇವಲ 1.20 ಲಕ್ಷ ರೂ.ಗಳವರೆಗೆ ಮಾತ್ರ ಆದಾಯ ಬಂದಿದೆ. ಆದ್ರೀಗ ಈ ದಾಳಿಂಬೆ ಗಿಡಗಳಿಗೆ ದುಂಡಾಣು ಅಂಗಮಾರಿ ರೋಗ ಬಾಧೆ ಕಾಣಿಸಿಕೊಂಡ ಪರಿಣಾಮ ಬೆಳೆನಾಶಕ್ಕೆ ಮುಂದಾಗಿರೋದಾಗಿ ಬೆಳೆಗಾರ ಕಂಠಿ ಕಂಟೆಪ್ಪ 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಕೆಶಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ: ರಾಜ್ಯ ಬಿಜೆಪಿ ಟ್ವೀಟ್
ಮಳೆಯ ಪ್ರಮಾಣ ಜಾಸ್ತಿಯಾದ್ರಿಂದ ದಾಳಿಂಬೆ ಗಿಡದಲ್ಲಿ ಬೆಳೆದಿದ್ದ ದಾಳಿಂಬೆ ಕಾಯಿ ಮೇಲೆ ಕೆಂಪು ಚುಕ್ಕೆಯಾಕಾರದ ರೋಗ ಕಾಣಿಸಿಕೊಂಡಿದೆ. ಫಸಲು ಅಷ್ಟೇನು ಸರಿಯಾಗಿರಲಿಲ್ಲ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ ಎಂಬೋದನ್ನ ಅರಿತ ಕಂಠಿ ಕಂಟೆಪ್ಪನವರು ಬೆಳೆ ನಾಶ ನಿರ್ಧಾರಕ್ಕೆ ಬಂದಿದ್ದಾರೆ.