ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ರೈತನೋರ್ವ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಳೇಕೋಟೆ ಗ್ರಾಮದ ನಿವಾಸಿ ಕಾಳಿಂಗಪ್ಪ (56) ಎಂಬುವರು ಮನೆಯಲ್ಲಿ ಯಾರು ಇರದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಿಂಗಪ್ಪ ಉಪ್ಪಾರು ಹೊಸಳ್ಳಿ ಗ್ರಾಮದಲ್ಲಿ 8.64 ಎಕರೆ ಭೂಮಿಯಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಮಳೆಯಿಂದ ಬೆಳೆ ನಾಶವಾದ ಪರಿಣಾಮ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು ಎನ್ನಲಾಗ್ತಿದೆ.
ಸಿರುಗುಪ್ಪ ನಗರದಲ್ಲಿರುವ ಬ್ಯಾಂಕಿನಲ್ಲಿ 3.30 ಲಕ್ಷ ರೂ. ಸಾಲ ಪಡೆದಿದ್ದ ಕಾಳಿಂಗಪ್ಪ, ಸಾಲ ತೀರಿಸಲು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ, ತಹಶಿಲ್ದಾರ್ ಎಸ್.ಬಿ. ಕೂಡಲಗಿ, ಕಂದಾಯ ಅಧಿಕಾರಿ ರಾಜೇಂದ್ರ ದೊರೆ, ಕೃಷಿ ಅಧಿಕಾರಿ ನಜೀರ್ ಅಹಮ್ಮದ್ ಭೇಟಿ ನೀಡಿದ್ದರು.