ETV Bharat / state

ಮೆಣಸಿನಕಾಯಿ ನಡುವೆ ಗಾಂಜಾ ಘಾಟು: ಕೂಡ್ಲಿಗಿಯಲ್ಲಿ ಓರ್ವ ಅರೆಸ್ಟ್ - ಕೂಡ್ಲಿಗಿ ತಾಲೂಕಿನ ಟಿ.ಬಸಾಪುರದ ನ್ಯೂಸ್

ಮೆಣಸಿನಕಾಯಿ ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿದ್ದು, 800 ಗ್ರಾಂ ನಷ್ಟು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

Arrest
Arrest
author img

By

Published : Sep 11, 2020, 5:05 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ.ಬಸಾಪುರದ ರೈತನೋರ್ವ ಮೆಣಸಿನಕಾಯಿ ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ. ಹೊಸಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಟಿ.ಬಸಾಪುರ ಗ್ರಾಮದ ರೈತ ಪರಶುರಾಮ (40) ಗಾಂಜಾ ಬೆಳೆ ಬೆಳೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಚೌಡಾಪುರ ಕಂದಾಯ ವ್ಯಾಪ್ತಿಯ ಟಿ.ಬಸಾಪುರ ಗ್ರಾಮದ ತನ್ನ ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದ. ಅದರ ಮಧ್ಯದಲ್ಲಿ ಯಾರಿಗೂ ಅನುಮಾನ ಬಾರದಂತೆ ಗಾಂಜಾ ಬೆಳೆದಿದ್ದಾನೆ.

ಈ ಕುರಿತು ಮಾಹಿತಿ ಪಡೆದ ಹರಪನಹಳ್ಳಿ ಡಿವೈಎಸ್ ಪಿ ಡಿ.ಮಲ್ಲೇಶ ದೊಡ್ಡಮನಿ ಹಾಗೂ ಖಾನಾ ಹೊಸಳ್ಳಿ ಪಿಎಸ್‍ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ 800 ಗ್ರಾಂ ನಷ್ಟು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.