ETV Bharat / state

ಕೌಟುಂಬಿಕ ಕಲಹದ ಹಿನ್ನೆಲೆ ಪೊಲೀಸ್ ಠಾಣೆ ಮುಂದೆ ಎರಡು ಗುಂಪಿನ ನಡುವೆ ಮಾರಾಮಾರಿ..! - ಹಡಗಲಿ ಪೊಲೀಸ್ ಠಾಣೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದಿದೆ. ಹೂವಿನಹಡಗಲಿಯ ಪೊಲೀಸ್ ಠಾಣೆ ಮುಂದೆಯೇ ಈ ಗಲಾಟೆ ನಡೆದಿದ್ದು ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

Police Station
ಹಡಗಲಿ ಪೊಲೀಸ್ ಠಾಣೆ
author img

By

Published : May 31, 2020, 10:12 PM IST

ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಿಲ್ಲೆಯ ಹೂವಿನಹಡಗಲಿಯ ಪೊಲೀಸ್ ಮುಂದೆಯೇ ಎರಡು ಗುಂಪುಗ‌ಳ ನಡುವೆ ಮಾರಾಮಾರಿ ನಡೆದಿದೆ.

Police Station
ಹಡಗಲಿ ಪೊಲೀಸ್ ಠಾಣೆ

ಈ ಮಾರಾಮಾರಿಯಲ್ಲಿ ಮಹಿಳೆಯೊಬ್ಬರ ಸೀರೆಯ ಸೆರಗನ್ನ ಎಳೆದಾಡಿಕೊಂಡು ಹೋಗುತ್ತಿರುವುದು ಹಾಗೂ ಹಲ್ಲೆಗೊಳಗಾಗಿದ್ದ ವ್ಯಕ್ತಿಯೊಬ್ಬನನ್ನು ನಾಲ್ಕಾರು ಮಂದಿಯ ಗುಂಪೊಂದು ಕರೆದೊಯ್ಯುತ್ತಿದ್ದ ದೃಶ್ಯದ ವಿಡಿಯೋ ತುಣುಕೊಂದು ಸೆರೆಯಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಮಾರಾಮಾರಿ‌ ನಡೆದಿರಬಹುದು ಎನ್ನಲಾಗುತ್ತಿದೆ. ಬಿಜೆಪಿಯ ಮುಖಂಡ ಮಧುನಾಯ್ಕ ಹಾಗೂ ಮತ್ತೊಂದು ಕುಟುಂಬದ ನಡುವೆ ಈ ಮಾರಾಮಾರಿ ನಡೆದಿದೆ ಎನ್ನಲಾಗ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಹಡಗಲಿ‌ ಪೊಲೀಸ್ ಠಾಣೆಗೆ ಆ ಎರಡೂ ಕುಟುಂಬಗಳು ಬಂದಿದ್ದವು. ಈ ಘಟನೆಯಲ್ಲಿ ಓರ್ವ ವ್ಯಕ್ತಿಯ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಇನ್ನುಳಿದ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.‌ ಈ ಮಾರಾಮಾರಿ ವೇಳೆಯಲ್ಲಿ ಪೊಲೀಸ್ ಠಾಣೆಯ ಮುಂಬಾಗಿಲಿನ ಗಾಜು ಪುಡಿ ಪುಡಿಯಾಗಿದೆ.

ಎರಡು ಕುಟುಂಬಗಳು ಬಡಿದಾಡಿಕೊಂಡರೂ ಕೂಡ ಪೊಲೀಸರು‌ ಮೂಖ ಪ್ರೇಕ್ಷಕರಾಗಿದ್ದರು. ಕೆಲವೊತ್ತಿನ ನಂತರ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಎರಡು ಗುಂಪುಗಳನ್ನ ಚದುರಿಸಿದ್ರು. ಮಾರಾಮಾರಿ ನಡೆದ ನಂತ್ರ ತಡವಾಗಿ ಪೊಲೀಸ್ ಠಾಣೆಗೆ ಬಂದ ಪಿಎಸ್ಐ ಎಸ್.ಪಿ.ನಾಯ್ಕ ಅವರು ಎರಡೂ ಗುಂಪಿನ ಕೆಲವರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.